Thursday, March 12, 2026
Flats for sale
Homeರಾಜ್ಯಮೈಸೂರು : ಯುಗಾದಿ ಹಬ್ಬದ ವೇಳೆ ಹಸು ಮೈ ತೊಳೆಯಲು ಕೆರೆಗೆ ಇಳಿದ ಮೂವರು ನೀರು...

ಮೈಸೂರು : ಯುಗಾದಿ ಹಬ್ಬದ ವೇಳೆ ಹಸು ಮೈ ತೊಳೆಯಲು ಕೆರೆಗೆ ಇಳಿದ ಮೂವರು ನೀರು ಪಾಲು..!

ಮೈಸೂರು : ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಹಸು ಮೈ ತೊಳೆಯಲು ಕೆರೆಗೆ ಹೋಗಿದ್ದ ಮೂವರು ನೀರು ಪಾಲಾಗಿರುವ ಘಟನೆ ನಂಜನಗೂಡು ತಾಲೂಕಿನ ಕಾಮಹಳ್ಳಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ವಿನೋದ್ (17), ಬಸವೇಗೌಡ (45), ಮುದ್ದೇಗೌಡ (48) ನೀರುಪಾಲಾದವರು. ಗ್ರಾಮದ ಕೆರೆಯಲ್ಲಿ ಹಸು ತೊಳೆಯುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಕೆರೆ ಬಳಿ ಜಮಾಯಿಸಿದ್ದಾರೆ.

ಘಟನಾ ಸ್ಥಳದಲ್ಲಿ ಮೃತರ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಇನ್ನು, ಅಗ್ನಿಶಾಮಕ ದಳದ ಸಿಬ್ಬಂದಿ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular