ಮೈಸೂರು : ಮನೆಯಿಂದ ಬಹುಕಾಲ ದೂರ ಇರುತ್ತಿದ್ದ ಯಕ್ಷಗಾನ ಕಲಾವಿದರಲ್ಲಿ ಅನೇಕರು ಸಲಿಂಗಿಗಳಾಗಿದ್ದರು. ಅಲ್ಲಿ ಅಂಥಹ ಅನಿವಾರ್ಯತೆಯೂ ಇತ್ತೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಹೇಳಿದರು.
ಮಾನಸ ಗಂಗೋತ್ರಿಯ ಪ್ರಸಾರಾAಗದಲ್ಲಿ ಮಂಗಳವಾರ ಆಯೋಜಿಸಿದ್ದ ಧರೆಗೆ ದೊಡ್ಡವರ ಕಾವ್ಯದ ಏಳು ಪಠ್ಯಗಳು ಹಾಗೂ ನಾವು ಕೂಗುವ ಕೂಗು ಕೃತಿ, ದೃಶ್ಯ-ಶ್ರವ್ಯ ಸರಣಿ ಬಿಡುಗಡೆಗೊಳಿಸಿ, ಕಲಾವಿದರು ಮೇಳಕ್ಕೆಂದು ಆರೆಂಟು ತಿಂಗಳು ತಿರುಗಾಟದಲ್ಲೇ ಮನೆ, ಹೆಂಡತಿ, ಮಕ್ಕಳಿಂದ ದೂರು ಇರುತ್ತಿದ್ದರು. ಜೊತೆಗೆ ಈ ಕಲಾವಿದರಿಗೆ ಯಾರೂ ಹೆಣ್ಣು ಕೊಡುತ್ತಿರಲಿಲ್ಲ. ಮೇಳದಲ್ಲಿ ಸ್ತ್ರೀ ವೇಷಧಾರಿಗಳ ಮೇಲೆ ಒತ್ತಡ ಇರುತ್ತಿತ್ತು. ಅವರ ಮೇಲೆ ಇತರರಿಗೆ ಮೋಹವೇ ಇರುತ್ತಿತ್ತು. ಎಷ್ಟೋ ಬಾರಿ ಸ್ತ್ರೀ ವೇಷದ ಕಲಾವಿದ ಏನಾದರೂ ಸಲಿಂಗಕಾಮ ನಿರಾಕರಿಸಿದ್ದರೆ, ಭಾಗವತರು ಮರು ದಿವಸ ಅವರಿಗೆ ಪದ್ಯವನ್ನೇ ಕೊಡುತ್ತಿರಲಿಲ್ಲ. ರಂಗದ ಮೇಲೆ ಅವನ ವಿರುದ್ಧ ಸೇಡು ತೀರಿಸಿಕೊಳ್ಳಲಾಗುತ್ತಿತ್ತು. ಅಲ್ಲದೆ ಅವಕಾಶ ಇಲ್ಲದಂತಾಗುತ್ತಿದೆ. ಕಲೆಯನ್ನೇ ನಂಬಿರುವ ಇಂತಹ ಕಲಾವಿದರು ಬದುಕು ಸಾಗಿಸಲು ಒತ್ತಡದಲ್ಲಿ ಇರುತ್ತಿದ್ದರು, ಇಂತಹ ಸತ್ಯವನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಬಿಳಿಮಲೆ ವಿವರಿಸಿದರು.


