ಮೈಸೂರು : ನಗರದ ಸುಮಾರು 6 ಕಿ. ಮೀ ದೂರದಲ್ಲಿರುವ ಬೆಮಲ್ ಕಾರ್ಖಾನೆಯಲ್ಲಿ ಇಂದು ಮುಂಜಾನೆ 4 ಗಂಟೆಯ ವೇಳೆ ಹುಲಿ ಸುತ್ತಾಡಿದ ವಿಡಿಯೋ ವೈರಲ್ ಆಗಿದೆ.
ರಾತ್ರಿ ವೇಳೆ ಭದ್ರತೆ ಪರಿಶೀಲಿಸಲು ಕಾರ್ ನಲ್ಲಿ ಸಿಬ್ಬಂದಿ ತೆರಳುವಾಗ ಹುಲಿ ಕಾಣಿಸಿಕೊಂಡಿದೆ ಈ ವೇಳೆ ಹುಲಿ ಓಡಾಟವನ್ನು ಮೊಬೈಲ್ ನಲ್ಲಿ ಸಿಬ್ಬಂದಿ ಸೆರೆ ಹಿಡಿದಿದ್ದಾನೆ.
ಕೂಡಲೇ ಅರಣ್ಯ ಇಲಾಖೆಗೆ ಬೆಮಲ್ ಸಿಬ್ಬಂದಿ.ಮಾಹಿತಿ ನೀಡಿದ್ದು
ರಾಜಾರೋಷವಾಗಿ ಓಡಾಡುವ ಹುಲಿ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.


