Friday, November 22, 2024
Flats for sale
Homeರಾಜ್ಯಮೈಸೂರು : ಮುಡಾ ಹಗರಣ : 50:50 ಅನುಪಾತದಲ್ಲಿ ಒಬ್ಬೊಬ್ಬರಿಗೆ 20 ರಿಂದ 25 ಸೈಟ್...

ಮೈಸೂರು : ಮುಡಾ ಹಗರಣ : 50:50 ಅನುಪಾತದಲ್ಲಿ ಒಬ್ಬೊಬ್ಬರಿಗೆ 20 ರಿಂದ 25 ಸೈಟ್ ಹಂಚಿಕೆ..!

ಮೈಸೂರು : ಮುಡಾ 50:50 ಅನುಪಾತದ ಫಲಾನುಭವಿಗಳ ಮೊದಲ ಲಿಸ್ಟ್ ಹೊರಬಂದಿದೆ. ಒಬ್ಬ ವ್ಯಕ್ತಿಗೆ ಮುಡಾದಿಂದ ಪರಿಹಾರ ರೂಪದಲ್ಲಿ ಸಿಕ್ಕಿರೋದು ಹತ್ತಲ್ಲ, ಹದಿನೈದಲ್ಲ ಬರೋಬರಿ 20 ರಿಂದ 25 ಸೈಟ್ ಎಂಬುದು ಲಿಸ್ಟ್ ನಿಂದ ಬಹಿರAಗವಾಗಿದೆ.

50:50 ಅನುಪಾತದ ಮೊದಲ ಲಿಸ್ಟ್ ಟಾಪ್ ರಾಂಕಿಂಗ್ ಇರೋದು ಅಬ್ದುಲ್ ವ್ಹಾಜಿದ್. ಈ ವ್ಯಕ್ತಿಗೆ 25 ಸೈಟ್ ಸಿಕ್ಕಿದೆ. ಸೈಯದ್ ಯೂಸೂಫ್ ಗೆ 22 ಸೈಟ್, ಮಲ್ಲಪ್ಪಗೆ 20 ಸೈಟ್ ಮತ್ತು ವೈರಮುಡು ಎಂಬವವರಿಗೆ 10 ಸೈಟ್ ನೀಡಲಾಗಿದೆ. ಮೊದಲ ಪಟ್ಟಿಯಲ್ಲಿ 300 ಸೈಟ್‌ಗಳ ಬಗ್ಗೆ ಮಾಹಿತಿ ಸಿಕ್ಕಿದೆ. 5೦:5೦ ಅನುಪಾತದ ಸೈಟ್ ಹಂಚುವಲ್ಲಿ ಆಯುಕ್ತರು ಶರವೇಗ ತೋರಿದ್ದಾರೆ.

1962 ರಲ್ಲಿ ವಶಪಡಿಸಿಕೊಂಡ ಭೂಮಿಗೆ 2023 ರಲ್ಲಿ ಪರಿಹಾರ ನೀಡಲಾಗಿದೆ. ಅರ್ಜಿ ಕೊಟ್ಟ 2 ತಿಂಗಳಿಗೆ ಮುಡಾ 25ಸೈಟ್ ಕೊಟ್ಟಿದೆ. ಅಬ್ದುಲ್ ವಾಜಿದ್‌ನ ಭೂಮಿಗೆ ಪರಿಹಾರ ಕೊಡಿ ಎಂದು 61 ವರ್ಷಗಳ ಬಳಿಕ 2022ರ ಡಿಸೆಂಬರ್‌ನಲ್ಲಿ ಮುಡಾಗೆ ಅರ್ಜಿ ಹಾಕುತ್ತಾರೆ. ಮುಡಾದ ಆಯುಕ್ತರು 2023 ರ ಫೆಬ್ರವರಿ ಯಲ್ಲಿ ಅಂದರೆ ಅರ್ಜಿ ಕೊಟ್ಟ ಎರಡೇ ತಿಂಗಳಿಗೆ ೨೫ ಸೈಟ್ ಮಂಜೂರು ಮಾಡ್ತಾರೆ. ಅಬ್ದುಲ್ ವಾಜಿದ್ ವಂಶಸ್ಥರ ಜಮೀನನ್ನು 1962 ರಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು.

ಸರ್ಕಾರವೇ ಹೇಳುವಂತೆ 50:50 ಕಾನೂನು ಏನೂ ಹೇಳುತ್ತೆ ಗೊತ್ತಾ? 2009 ರ ಹಿಂದಿನ ಬಡಾವಣೆಗಳಿಗೆ 5೦:5೦ ಅನುಪಾತ ಅನ್ವಯವಾಗಲ್ಲ. ೨೦೦೯ ರ ಹಿಂದಿನ ಸ್ವಾಧೀನ ಪ್ರಕ್ರಿಯೆಗೆ 50:50 ಅನುಪಾತ ಅನುಸರಿಸಿದರೆ ಅದು ಅಕ್ರಮ. ಆದರೆ 25 ಸೈಟ್ ಪಡೆದ ಅಬ್ದುಲ್ ವಾಜಿದ್ ವಂಶದ ಜಮೀನನ್ನು ಪ್ರಾಧಿಕಾರ ವಶಪಡಿಸಿಕೊಂಡಿರುವುದು 1962 ರಲ್ಲಿ. ಅಂದರೆ ಬರೋಬರಿ 61 ವರ್ಷಗಳ ನಂತರ 50:5೦ ಅನುಪಾತದಲ್ಲಿ ಪರಿಹಾರ ಕೊಟ್ಟಿದೆ. ಅಲ್ಲಿಗೆ ಇದು ಸ್ಪಷ್ಟವಾಗಿ ಅಕ್ರಮ. ಹೀಗೆ ಬಹುತೇಕ ಎಲ್ಲಾ ಸೈಟ್‌ಗಳನ್ನು ಕೊಟ್ಟಿರುವುದು 30-40 ವರ್ಷಗಳ ಹಿಂದಿನ ಪ್ರಕರಣಗಳಿಗೆ. ಅಲ್ಲಿಗೆ ಕಾನೂನು ಪ್ರಕಾರ ಇವು ಅಕ್ರಮ.

ಸಿಎಂ ಪತ್ನಿಗೆ 5೦:5೦ ಅನುಪಾತದಲ್ಲಿ ಸೈಟ್ ಕೊಟ್ಟ ಮೇಲೆಯೆ ಉಳಿದ ಎಲ್ಲರಿಗೂ ಸೈಟ್ ಹಂಚಲು ಪ್ಲಾನ್ ನಡೆದಿತ್ತು. ಅದೇ ಪ್ಲಾನ್‌ನಂತೆ ಮುಡಾ ಆ ಎಲ್ಲರಿಗೂ ಸೈಟ್ ಹಂಚಿಕೆ ಮಾಡಿದ್ದಾರೆ.

ಯಾರಿಗೆ ಎಷ್ಟು ಸೈಟ್ ಹಂಚಿಕೆ?ಅಬ್ದುಲ್ ವಾಜೀದ್ 26 ಸೈಟ್‌ಸೈಯದ್ ಯೂಸಫ್- 21 ಸೈಟ್‌ಮಲ್ಲಪ್ಪ- 19 ಸೈಟ್‌ಎಸ್.ವಿ.ವೆಂಕಟಪ್ಪ ? 17 ದೇವಮ್ಮ ? 16 ಮಹದೇವು ಮತ್ತು ಗೀತಾ 12ಸುರೇಶಮ್ಮ ? 11ವೈರಮುಡಿ- 10 ಸೈಟ್ ಚೌಡಯ್ಯ ? ೦7 ನಿವೇಶನ ಹಂಚಲಾಗಿದೆ ಎನ್ನುವ ಪಟ್ಟಿ ಬಿಡುಗಡೆ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular