ಮೈಸೂರು : ನೂತನ ಸಂಸತ್ ಭವನದ ಮೇಲೆ ನಡೆದ ದಾಳಿ ಘಟನೆ ಮೈಸೂರು ಭಾಗದ ರಾಜಕೀಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಂಡುಬರುತ್ತಿದೆ.
ಇದೊಂದು ರಾಜಕೀಯೇತರ ಧಾಳಿ ಎಂದು ತಿಳಿಯಬಹುದು ಯಾಕೆಂದರೆ ಇಲ್ಲಿ ಹಲವಾರು ಅನುಮಾನ ಮೂಡಿಬರುವುದಂತೂ ಸಹಜ .ಮೈಸೂರು ಮತ್ತು ಕೊಡಗು ಸಂಸದೀಯ ಕ್ಷೇತ್ರದ ಪ್ರತಿನಿಧಿಯಾಗಿ ಎರಡು ಬಾರಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಪ್ರತಾಪ್‌ಸಿಂಹ ಮೂರನೇ ಆಯ್ಕೆ ಮೂಲಕ ಹ್ಯಾಟ್ರಿಕ್ ಸಾಧನೆಯ ಆಶಯ ಹೊಂದಿದ್ದರು. ಆದರೆ ಬುಧವಾರದ ಸಂಸದ್ ದಾಳಿ ಘಟನೆ ಬಳಿಕ ಪರಿಸ್ಥಿತಿ ಇವರ ಆಸೆಗೆ ಸ್ವಲ್ಪ ಮಟ್ಟಿನ ಹಿನ್ನಡೆ ಕಂಡಿದೆ.
ಮೈಸೂರಿನಿಂದ ಸತತ ಎರಡು ಬಾರಿ ಗೆಲುವು ಸಾಧಿಸಿದ ಪ್ರತಾಪ್ ಸಿಂಹರನ್ನು ಶತಾಯ ಗತಾಯ ಸೋಲಿಸಲು ಕಾಂಗ್ರೆಸ್ ನಾಯಕರು ಶ್ರಮವಹಿಸಿರುವುದು ಸತ್ಯ .ಘಟನೆಯನ್ನು ಖಂಡಿಸಿ ಬೀದಿಗಿಳಿಯುವ ಮೂಲಕ ಕಾಂಗ್ರೆಸ್ ಪಕ್ಷ ಅತ್ಯಂತ ವೇಗದ ಪ್ರತಿಸ್ಪಂದನೆ ತೋರಿದೆ. ಪಕ್ಷದ ಈ ನಡೆ ರಾಜಕೀಯವಾಗಿಯೂ ಲಾಭ ತಂದುಕೊಡುವ ಕಾರಣದಿಂದ ಸಂಸದರ ಮೈಸೂರು ಕಚೇರಿ ಎದುರು ದೊಡ್ಡ ಪ್ರಮಾಣದ ಗದ್ದಲವೇರ್ಪಟ್ಟಿತ್ತು. ಅಚಾನಕ್ಕಾಗಿ ಯಾವುದೇ ಸಮಯ ಸಂಸದರ ಕಚೇರಿ ಮೇಲೆ ಗುಂಪುದಾಳಿ ನಡೆಯುವ ಭಯ ಇನ್ನೂ ಇರುವುದರಿಂದ ಪೊಲೀಸರು ಈ ಕಟ್ಟಡಕ್ಕೆ ಕಾವಲು ಹೆಚ್ಚಿಸಿದ್ದಾರೆ.
ಮುಜುಗರ ತರಲು ಪ್ರತಿಪಕ್ಷ ಸಜ್ಜು ಈಗ ಬಿಜೆಪಿಯಲ್ಲಿ ಹೊಸ ಲೆಕ್ಕಾಚಾರ ಶುರುವಾಗಿದೆ. ದಾಳಿ ಬಳಿಕ ಬಿಜೆಪಿ ರಾಷ್ಟçಮಟ್ಟದಲ್ಲಿ ದೊಡ್ಡ ಮುಜುಗರ ಅನುಭವಿಸಿರುವುದರಿಂದ ರಾಷ್ಟ್ರೀಯ ನಾಯಕತ್ವ ಪ್ರತಾಪ್‌ಸಿಂಹಗೆ ಮತ್ತೆ ಟಿಕೆಟ್ ನೀಡುವುದಿಲ್ಲವೆಂಬ ಮಾಹಿತಿಯನ್ನು ಪಕ್ಷದ ಕೆಲ ನಾಯಕರು ಹರಿಯಬಿಟ್ಟಿದ್ದಾರೆ. ಕಾಂಗ್ರೆಸ್ ನಾಯಕರು ಸಹ, ಹಾಗೊಂದು ವೇಳೆ ಪ್ರತಾಪ್‌ಸಿಂಹ ಬಿಜೆಪಿ ಟಿಕೆಟ್ ಪಡೆದರೆ ದಾಳಿ ವಿಷಯವನ್ನೇ ಮುಂದಿಟ್ಟು ಹೋರಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಇದು ಬಿಜೆಪಿಗೆ ಇಕ್ಕಟ್ಟಿನ ಸ್ಥಿತಿ ಸೃಷ್ಟಿಸಿದೆ.
ಜಾತಿ ಲೆಕ್ಕಾಚಾರದ ಫಲ ಕಳೆದ 2014 ಮತ್ತು 2019 ರ ಎರಡೂ ಚುನಾವಣೆಗಳಲ್ಲಿ ಕಾಂಗ್ರೆಸ್ ಕುರುಬ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಸೋತರೆ ಒಕ್ಕಲಿಗ ಸಮುದಾಯದ ಪ್ರತಾಪ್‌ಸಿಂಹ ಗೆದ್ದಿದ್ದರು. ಈ ಬಾರಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಸಹ ಒಕ್ಕಲಿಗ ಸಮುದಾಯದ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಆಲೋಚನೆಯಲ್ಲಿತ್ತು.
ಇದಕ್ಕಾಗಿ ಬಿಜೆಪಿ ಸರ್ಕಾರದಲ್ಲಿ ಮೈಸೂರಿನ ಉಸ್ತುವಾರಿ ಹೊತ್ತಿದ್ದ ಮತ್ತು ಈಗ ಬಿಜೆಪಿಯಿಂದ ಗೆದ್ದಿದ್ದರೂ ಕಾಂಗ್ರೆಸ್‌ನತ್ತ ಆಸೆಗಣ್ಣಿನಿಂದ ನೋಡುತ್ತಿರುವ ಎಸ್.ಟಿ. ಸೋಮಶೇಖರ್ ಅವರನ್ನು ಕರೆತರಬಹುದೆಂಬ ಮಾತಿತ್ತು.
ಈಗ ಸುವರ್ಣ ಸೌಧದ ಅಧಿವೇಶನ ಸಮಯ ನಡೆದಿರುವ ಔತಣಕೂಟದಲ್ಲಿ ಇದಕ್ಕೊಂದು ತಿರುವು ಸಿಕ್ಕಿದೆ. ಸಿಎಂ ಜೊತೆ ಬಿಜೆಪಿಯ ಸೋಮಶೇಖರ್ ಮತ್ತು ಹೆಬ್ಬಾರ್ ಶಿವರಾಂ ಕಾಣಿಸಿಕೊಂಡಿರುವುದು ಹೊಸ ಸಂಬAಧದ ಆರಂಭವೊAದರ ಸAಕೇತದAತಿದೆ. ಇದು ಮೈಸೂರಿಗೆ ಖಂಡಿತವಾಗಿ ಅನ್ವಯವಾಗಲಿದ್ದು ಇಲ್ಲಿಂದ ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿಯಾಗಬಹುದೆಂದು ಅವರ ಆಪ್ತ ಮೂಲಗಳು ಪಿಸುಗುಟ್ಟುತ್ತಿವೆ.
ಇಷ್ಟಕ್ಕೂ ಮೈಸೂರಿನಲ್ಲೀಗ ಸಿಎಂ ಹಾಗು ವಿವಿಧ ಗ್ಯಾರಂಟಿ ಯೋಜನೆಗಳ ಕಾರಣದಿಂದ ಕಾAಗ್ರೆಸ್ ಪ್ರಬಲವಾಗಿದೆ. ಸಂಸದೀಯ ಕ್ಷೇತ್ರ ವ್ಯಾಪ್ತಿಯ ಎಂಟು ಕ್ಷೇತ್ರಗಳಲ್ಲಿ ಐದು ಕಡೆ ಪಕ್ಷ ಗೆದ್ದಿದೆ. ಹೀಗಾಗಿಯೇ ಒಕ್ಕಲಿಗ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಬಿಜೆಪಿ ಜೆಡಿಎಸ್ ಮೈತ್ರಿಯ ಜಾತಿವಾರು ಮತಗಳನ್ನು ಒಡೆದು ಗೆಲುವು ಸಾಧಿಸುವ ನಿರೀಕ್ಷೆ ಕಾಂಗ್ರೆಸ್‌ಗಿದೆ. ಹೊರ ಜಿಲ್ಲೆಯವರಾದರೂ ಸಹ ಜಾತಿ ಕಾರಣದಿಂದ ಮೈಸೂರಿನಲ್ಲಿ ಎರಡು ಬಾರಿ ಗೆದ್ದು ಬೀಗಿದ್ದ ಪ್ರತಾಪ್‌ಸಿಂಹ ಈ ಬಾರಿ ದೊಡ್ಡ ಸವಾಲುಎದುರಿಸಬೇಕಾದ ಸ್ಥಿತಿ ಖಚಿತವಾಗಿ ನಿರ್ಮಾಣವಾಗಿದೆ. ಅಧಿಕೃತ ಹೇಳಿಕೆ ಇನ್ನೂ ಬಂದಿಲ್ಲ.


