ಮೈಸೂರು : ನನ್ನ ಕೊನೆಯ ಉಸಿರು ಇರುವ ತನಕ ರಾಜಕೀಯ ದಲ್ಲಿದ್ದು ಜನಸೇವೆ ಮಾಡುತ್ತೇನೆ ಎಂದು ಮುಖ್ಯಮAತ್ರಿ ಸಿದ್ದ ರಾಮಯ್ಯ ಹೇಳಿದರು. ತಾಲ್ಲೂಕಿನ ವರ ಕೋಡು ಗಡಿ ವರುಣ ಗುರುಮಠ ವರುಣದಲ್ಲಿ ಆಯೋಜಿಸಲಾಗಿದ್ದ ಬೀರೇಶ್ವರಸ್ವಾಮಿ ದೇವ ಸ್ಥಾನದ ಸಂಪ್ರೋಕ್ಷಣ ಪುನರ್ ಪ್ರತಿಷ್ಠಾಪನೆ ಕುಂಭಾಭಿಷೇಕ ಹಾಗೂ ಮಹಾದ್ವಾರ ಪೂಜಾ ಮಹೋತ್ಸವದಲ್ಲಿ ಮಾತ ನಾಡಿದರು. ಸಿಎಂ ಪಟ್ಟ ಬಿಟ್ಟುಕೊಡುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದು, ಅದರ ನಡುವೆ ಸಿದ್ದರಾಮಯ್ಯ ಕೂಡ ತಮ್ಮ ನಿಲುವನ್ನು ಇನ್ನಷ್ಟು ಬಲಗೊಳಿಸಿದ್ದಾರೆ.
ಕಳೆದ ನಾಲ್ಕೈದು ದಶಕಗಳ ನನ್ನ ರಾಜಕೀಯ ಬದುಕಿನಲ್ಲಿ ಅನೇಕ ಸೋಲು ಗೆಲುವುಗಳನ್ನು ಕಂಡಿದ್ದೇನೆ. ಆದರೆ ಎಂದಿಗೂ ಜನಸೇವೆಯನ್ನು ಮರೆತಿಲ್ಲ, ಮರೆಯುವುದೂ ಇಲ್ಲ ಎಂದರು. ಗುರುಗಳ ಮಾರ್ಗದರ್ಶನದಿಂದ ಶಿಕ್ಷಣ ಪಡೆದು, ವಕೀಲನಾಗಿ, ರಾಜಕಾರಣಿಯಾಗಿ ಜನರ ಸೇವೆ ಮಾಡುವ ಅವಕಾಶ ದೊರೆತಿದೆ. ನನ್ನ ರಾಜಕೀಯ ಜೀವನ ಸೋಲು ಗೆಲುವುಗಳನ್ನು ಕಂಡಿದ್ದೇನೆ. ಆದರೆ ಜನಸೇವೆ ಮರೆತಿಲ್ಲ, ಕೊನೆ ಉಸಿರಿರುವವರೆಗೆ ಇದು ಮುಂದು
ವರೆಯಲಿದೆ ಎಂದರು.
ಕ್ಷೇತ್ರದ ಕೊಡುಗೆ ಅನನ್ಯ: 1978 ರಲ್ಲಿ ಈ ಪ್ರದೇಶ ದಿಂದಲೇ ನನ್ನ ರಾಜಕೀಯ ಜೀವನ ಪ್ರಾರಂಭ ವಾಗಿದ್ದು, ಅಪಾರ ಜನ ಬೆಂಬಲ ದೊರೆತಿದೆ. ಚಾಮುಂಡೇಶ್ವರಿ ಮತ್ತುವರುಣ ಜನತೆ ಬೆಂಬಲಿಸುತ್ತಲೇ ಬಂದಿದ್ದಾರೆ.
ಕಾಂಗ್ರೆಸ್ನಲ್ಲಿ ಡಿನ್ನರ್ ಮೀಟಿಂಗ್ ರಾಜಕೀಯ ಮುಂದುವರಿದಿವೆ. ಮೊನ್ನೆಯಷ್ಟೆ ಕೆಪಿಸಿಸಿ ಸಾರಥಿಯಾಗಿ ೬ ವರ್ಷ ಪೂರೈಸಿದ್ದ ಬೆನ್ನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಡಿನ್ನರ್ ಮೀಟ್ ಏರ್ಪಡಿಸಿದ್ದರು. ನಿನ್ನೆಯಷ್ಟೆ ಹಿರಿಯ ಶಾಸಕರ ಡಿನ್ನರ್ ಮೀಟಿಂಗ್ ನಡೆದಿತ್ತು. ಈಗ ಸಿಎಂ ಸಿದ್ದರಾಮಯ್ಯ ಅವರು ಮಾ.16 ಸೋಮವಾರ ಸಚಿವರಿಗೆ ಔತಣಕೂಟ ಆಯೋಜಿಸಿದ್ದಾರೆ. ಕೊನೆಯುಸಿರು ಇರೋವರೆಗೂ ರಾಜಕೀಯದಲ್ಲಿರುತ್ತೇನೆ ಎಂದು ಹೇಳಿರುವ ಬೆನ್ನಲ್ಲೇ ಈ
ಡಿನ್ನರ್ಗೆ ಮಹತ್ವ ಬಂದಿದೆ.


