ಮೈಸೂರು : ದಲಿತರ ಪ್ರವೇಶಕ್ಕೆ ನಿರ್ಬಂಧ ಹೇರಿ ಸರಿಸುಮಾರು 11 ವರ್ಷಗಳ ನಂತರ ಮುಚ್ಚಿದ ಇಲ್ಲಿನ ಜಯಪುರ ಹೋಬಳಿ ಮಾರ್ಬಳ್ಳಿ ಗ್ರಾಮದ ಮಾರಮ್ಮ ದೇವಸ್ಥಾನದ ಬಾಗಿಲು ತೆರೆದು ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದೆ.
11 ವರ್ಷಗಳ ಹಿಂದೆ ದಲಿತರ ಪ್ರವೇಶ ನಿಷೇಧದ ಹಿನ್ನೆಲೆಯಲ್ಲಿ ಭಾರೀ ವಿವಾದ ಉಂಟಾಗಿ ಮಾರಮ್ಮ ದೇವಸ್ಥಾನದ ಬಾಗಿಲಿಗೆ ಬೀಗ ಹಾಕಲಾಗಿತ್ತು. ತಹಸೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಿ ದೇವಸ್ಥಾನದ ಬಾಗಿಲು ತೆರೆಯಲಾಗಿದೆ.
ಹಳ್ಳಿಯಲ್ಲಿ 11 ವರ್ಷಗಳ ನಂತರ ಸಂಭ್ರಮ -ಸಡಗರ ಕಾಣಿಸಿದೆ. ವಿವಾದಕ್ಕೆ ಸಂಬಂದಿಸಿದ ಎಲ್ಲಾ 5 ಕೋಮಿನ ನಾಯಕರನ್ನು ಸಭೆಗೆ ಆಹ್ವಾನಿಸಲಾಗಿದೆ. ಸುದೀರ್ಘ ಚರ್ಚೆಯ ನಂತರ ಮಾರಮ್ಮ ದೇವಸ್ಥಾನದ ಬಾಗಿಲು ತೆರೆಯಲು ನಿರ್ಧರಿಸಲಾಯಿತು. ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿವಾದವನ್ನು ಅಂತ್ಯಗೊಳಿಸಲಾಗಿದೆ.


