ಮೈಸೂರು : ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿನ ಸೋಲು ಜೆಡಿಎಸ್ ಪಾಳೆಯದಲ್ಲಿ ಆಂತರಿಕ ಕಲಹಕ್ಕೆ ಎಡೆ ಮಾಡಿಕೊಟ್ಟಿದ್ದು ಶಾಸಕರ ಪಕ್ಷಾಂತರದ ಭೀತಿ ಸೃಷ್ಟಿಸಿದೆ.
ಚನ್ನಪಟ್ಟಣ ಕದನದಲ್ಲಿ ನಿಖಿಲ್ ಅನುಭವಿಸಿದ ಸೋಲಿಗೆ ಹತ್ತಾರು ವ್ಯಾಖ್ಯಾನಗಳು ವ್ಯಕ್ತವಾ ಗುತ್ತಿದ್ದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ದೇವೇಗೌಡರು ಶ್ರಮವಹಿಸಿ ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನಾಶ ಮಾಡುತ್ತಿದ್ದಾರೆನ್ನುವ ಮೂಲಕ ಮತ್ತೊಮ್ಮೆ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ.
ಇದೇ ವೇಳೆ ಜೆಡಿಎಸ್ನಿಂದ ಉಚ್ಛಾಟಿತ ಗೊಂಡಿರುವ ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಮ್ ಅವರು ಹುಟ್ಟುಹಬ್ಬಕ್ಕೆ ಶುಭಕೋರುವ ನೆಪದಲ್ಲಿ ಸೋಮವಾರ ಜಿ.ಟಿ. ದೇವೇಗೌಡರನ್ನು ಮೈಸೂರಿನ ನಿವಾಸದಲ್ಲಿ ಭೇಟಿ ಮಾಡಿ ರಹಸ್ಯ ಮಾತುಕತೆ ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಚನ್ನಪಟ್ಟಣದಲ್ಲಿ ಶಾಸಕ ಸಿ. ಪಿ.ಯೋಗೇಶ್ವರ್ ಮಾತನಾಡಿ, ಕಾಂಗ್ರೆಸ್ ಹೈಕಮಾAಡ್ ಅನುಮತಿ ನೀಡಿದರೆ ಜೆಡಿಎಸ್ ಅನ್ನು ಒಡೆಯಲು ಸಿದ್ಧ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಜಿಟಿಡಿ ಮನೆಗೆ ಇಬ್ರಾಹಿಂ ಭೇಟಿ ನೀಡಿದ್ದಾರೆ. ಜೆಡಿಎಸ್ ಅಗ್ರನಾಯಕರ ವಿರುದ್ಧ ಅಸಮಾಧಾನಿತರಾಗಿರುವ ಜಿ.ಟಿ.ದೇವೇಗೌಡರು ಕಾಂಗ್ರೆಸ್ಗೆ ಸೇರುವರೆಂಬ ವದಂತಿ ಹರಿದಾಡುತ್ತಿರುವುದರಿAದ ಜಿಟಿಡಿ-ಇಬ್ರಾಹಿಂ ಭೇಟಿ ಮಹತ್ವ ಪಡೆದುಕೊಂಡಿದೆ.
ಏತನ್ಮಧ್ಯೆ ಕೋಮುವಾದಿ ಬಿಜೆಪಿಯ ಸಖ್ಯ ವನ್ನು ತೊರೆದು ಮೈತ್ರಿಯಿಂದ ಜೆಡಿಎಸ್ ಹೊರ ಬಂದರೆ ಪಕ್ಷವನ್ನು ಮರುಕಟ್ಟುತ್ತೇವೆಂದು ಸಿ. ಎಂ.ಇಬ್ರಾಹಿA ಹೇಳಿದ್ದಾರೆ.


