ಮೈಸೂರು : ತಾಲೂಕಿನ ಆಯರಹಳ್ಳಿ ಗ್ರಾಮದಲ್ಲಿ ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ದ್ಯಾವಣ್ಣ ನಾಯಕ್ ಎಂಬವರು ಕಬ್ಬು ಕಟಾವು ಮಾಡುವ ಸಂದರ್ಭದಲ್ಲಿ ಈ ಚಿರತೆ ಮರಿ ಇರುವುದು ಕಂಡುಬಂದಿದೆ. ಚಿರತೆ ಮರಿಗಳನ್ನು ರೈತರು ರಕ್ಷಣೆ ಮಾಡಿ, ಸುರಕ್ಷಿತವಾಗಿ ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದ್ದಾರೆ.
ಈ ರೀತಿಯ ಘಟನೆಗಳು ರಾಜ್ಯದ ನಾನಾ ಭಾಗಗಳಲ್ಲಿ ಇತ್ತೀಚೆಗೆ ಸಾಮಾನ್ಯವಾಗಿ ನಡೆಯುತ್ತವೆ, ಇದರಲ್ಲೇನು ವಿಶೇಷವಿದೆ ಎನ್ನುವ ಪ್ರಶ್ನೆಕೆಲವರಿಗೆ ಮೂಡಬಹುದು. ಆದರೆ ಇದರಲ್ಲಿ ಒಂದು ವಿಶೇಷವಿದೆ. ಸಿಕ್ಕಿರುವ ಮೂರು ಮರಿಗಳಲ್ಲಿ ಎರಡು ಸಾಮಾನ್ಯ ಬಣ್ಣದವಾದರೆ, ಒಂದು ಮರಿ ಮಾತ್ರ ಕಪ್ಪು ಬಣ್ಣದ್ದು; ಅರ್ಥಾತ್ ಅಪರೂಪದ ಕರಿಚಿರತೆ ಮರಿಯಾಗಿದೆ.
ಬಹಳಷ್ಟು ಜನ ‘ಕರಿ ಚಿರತೆ’ಯೆನ್ನುವುದು, ಚಿರತೆಯಲ್ಲೆ ಪ್ರತ್ಯೇಕವಾದ ಉಪಪಂಗಡ ಎಂದು ಕೊಂಡವರಿದ್ದಾರೆ. ಮತ್ತೆ ಅವು ಕೆಲವು ನಿರ್ದಿಷ್ಟ ಭಾಗಗಳಲ್ಲಿ ಮಾತ್ರ ಕಂಡುಬರುವಂತವು ಎಂದುಕೊಂಡಿದ್ದಾರೆ. ಆದರೆ ಅದು ಸುಳ್ಳು. ಕರಿಚಿರತೆ ಪ್ರತ್ಯೇಕ ಪ್ರಭೇದವಲ್ಲ. ಪ್ರಾಣಿಗಳಲ್ಲಿ ಬಣ್ಣವನ್ನು ನಿರ್ಧರಿಸುವ ಮೆಲಾನಿನ್ ಎಂಬ ರಾಸಾಯನಿಕ ಅಂಶದ ಏರುಪೇರಿನಿಂದ ಸಾಮಾನ್ಯ ಚಿರತೆಗಳಲ್ಲಿಯೇ ಒಂದು ಅಥವಾ ಎರಡು ಕರಿಚಿರತೆಗಳು ಜನಿಸಬಹುದು. ಬಹಳಷ್ಟು ಸಂಧರ್ಭಗಳಲ್ಲಿ ಇತರ ಸಾಮಾನ್ಯ ಮರಿಗಳೊಟ್ಟಿಗೆ ಇದು ಸಹ ಜನಿಸಿರುತ್ತದೆ.
ಅದಕ್ಕೆ ಪ್ರತ್ಯೇಕ್ಷ ಸಾಕ್ಷಿ ವಿಡಿಯೋದಲ್ಲಿನ ದೃಶ್ಯದ ಘಟನೆಯಾಗಿದೆ. ನಾಯಿ, ಬೆಕ್ಕುಗಳು ಮರಿ ಹಾಕಿದಾಗ ಕೆಲವೊಮ್ಮೆ ಎಲ್ಲಾ ಮರಿಗಳು ಒಂದೇ ಬಣ್ಣದಲ್ಲಿದ್ದರೆ, ಕೆಲವು ಸಂಧರ್ಭದಲ್ಲಿ ಒಂದೊಂದು ಒಂದೊಂದು ಬಣ್ಣದಲ್ಲಿರುತ್ತವೆ. ಆ ಬಗೆ ಇಲ್ಲಿ ಆಗುವುದು.ಆದರೆ ನಾಯಿ ಬೆಕ್ಕುಗಳಲ್ಲಿ ಬಣ್ಣಗಳ ವೈವಿಧ್ಯ ಅತಿ ಸಾಮಾನ್ಯವಾಗಿ, ಅತಿ ವೈವಿಧ್ಯವಾಗಿದ್ದರೆ, ಚಿರತೆಗಳಲ್ಲಿ ಅತಿಅಪರೂಪ ಹಾಗೂ ಸಾಮಾನ್ಯ ಹಾಗೂ ಕಪ್ಪು ಬಣ್ಣಕ್ಕೆ ಸೀಮೀತವಾಗಿರುತ್ತದೆ.
ಬಹಳ ಅಪರೂಪ
ವಂಶವಾಹಿ ಮಾರ್ಪಾಡಿನಿಂದ ಬಹಳ ಅಪರೂಪ ಎನಿಸಿರುವ ಕಪ್ಪು ಚಿರತೆಗಳು ರೂಪುಗೊಳ್ಳುತ್ತವೆ. ನಾಗರಹೊಳೆ ಕಾಡಿನಲ್ಲಿರುವ ಕಪ್ಪು ಗಂಡು ಚಿರತೆಯೊಂದು ವಿಶ್ವದಾದ್ಯಂತ ಪ್ರಸಿದ್ಧಿ ಗಳಿಸಿದೆ. ಇದರ ಕುರಿತಾಗಿಯೇ ನ್ಯಾಷನಲ್ ಜಿಯೋಗ್ರಾಫಿಕ್ ಚಾನಲ್ ಸಾಕ್ಷ್ಯ ಚಿತ್ರ ಸಿದ್ಧ ಮಾಡಿತ್ತು. ಈಗ ಮೈಸೂರಿನಲ್ಲಿ ಇಂತಹ ಮರಿ ಸಿಕ್ಕಿರುವುದರಿಂದ ಕರಿ ಚಿರತೆಗಳು ಬಹುಶಃ ದಟ್ಟಾರಣ್ಯದೊಳಗಿನ ಪ್ರದೇಶವಲ್ಲದೇ ಜನವಸತಿ ಬಳಿಕ ಕುರುಚಲು ಕಾಡು ಮತ್ತು ಪಾಳು ಪ್ರದೇಶಗಳಲ್ಲಿಯೂ ಇರಬಹುದೆಂಬ ಶAಕೆ ಮೂಡಿವೆ. ವಾಸ್ತವವಾಗಿ ಈ ಮರಿಯ ತಾಯಿಯ ಬಣ್ಣದ ಬಗ್ಗೆಯೂ ಈಗ ಕುತೂಹಲ ಮೂಡಿವೆ.


