ಮುಂಬೈ : ಡೊಂಬಿವಿಲಿ ಪೂರ್ವದ ನ್ಯೂ ಐರ್ ರಸ್ತೆಯಲ್ಲಿರುವ ಆದಿನಾರಾಯಣ ಎಂಬ ಹೆಸರಿನ 40 ಕೋಣೆಗಳ ಮೂರು ಅಂತಸ್ತಿನ ಕಟ್ಟಡವು ಶುಕ್ರವಾರ ಸಂಜೆ 4.30 ಕ್ಕೆ ಕುಸಿದಿದೆ. ಮಹಿಳೆ ಹಾಗೂ ಹಿರಿಯ ನಾಗರಿಕರು ಅವಶೇಷಗಳಡಿ ಸಿಲುಕಿದ್ದು, ಅವರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. ಅರವಿಂದ್ ಸಂಭಾಜಿ ಭಟ್ಕರ್ (70) ಮತ್ತು ಗೀತಾ ಲೋಧಿಯಾ (45) ಅವಶೇಷಗಳಡಿ ಸಿಲುಕಿದ್ದಾರೆ. ಏಕನಾಥ ಪಾಟೀಲ ಎಂಬುವವರ ಒಡೆತನದ ಕಟ್ಟಡ ಅಪಾಯಕಾರಿ ಸ್ಥಿತಿಯಲ್ಲಿದ್ದು ಶುಕ್ರವಾರ ಬೆಳಗ್ಗೆಯಿಂದಲೇ ಕುಸಿದು ಬೀಳುವ ಲಕ್ಷಣ ಕಂಡು ಬಂದಿದ್ದರಿಂದ ಬಾಡಿಗೆದಾರರು ತೆರವು ಮಾಡಿದ್ದರು. ಆದರೆ, ಸಮಯಕ್ಕೆ ಸರಿಯಾಗಿ ಕಟ್ಟಡವನ್ನು ತೆರವು ಮಾಡಲು ಭಟ್ಕರ್ ಮತ್ತು ಲೋಧಿಯಾ ಅವರಿಗೆ ಸಾಧ್ಯವಾಗಲಿಲ್ಲ. ಕುಸಿತ ಸಂಭವಿಸಿದಾಗ ಅವರು ತಮ್ಮ ಹಾಸಿಗೆಯ ಮೇಲೆ ವಿಶ್ರಾಂತಿ ಪಡೆಯುತ್ತಿದ್ದರು. ಥಾಣೆ TDRF ತಂಡ ಮತ್ತು ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಕ್ಕಿಬಿದ್ದ ಜನರನ್ನು ಸ್ಥಳಾಂತರಿಸಲು ಎಲೆಕ್ಟ್ರಿಕ್ ಕಟರ್ಗಳ ಸಹಾಯದಿಂದ ಕಬ್ಬಿಣದ ರಾಡ್ಗಳನ್ನು ಕತ್ತರಿಸುವ ಪ್ರಯತ್ನಗಳು ನಡೆಯುತ್ತಿವೆ. ಪುರಸಭೆ ಆಡಳಿತ ಬ್ರೇಕರ್, ಜೆಸಿಪಿ, ಪೊಕ್ಲೇನ್ ಯಂತ್ರಗಳನ್ನು ಬಳಸಿ ಸಿಕ್ಕಿಬಿದ್ದ ಜನರನ್ನು ಸ್ಥಳಾಂತರಿಸುವ ಕಾರ್ಯ ಆರಂಭಿಸಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಪಾಲಿಕೆ ಆಯುಕ್ತ ಡಾ.ಬಾವುಸಾಹೇಬ ದಾಂಡಗೆ ಸ್ಥಳದಲ್ಲಿ ಹಾಜರಿದ್ದಾರೆ. ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳು ಪ್ರಸ್ತುತ ಪ್ರಗತಿಯಲ್ಲಿವೆ,


