Friday, November 22, 2024
Flats for sale
Homeಗ್ಯಾಜೆಟ್ / ಟೆಕ್ಮುಂಬೈ : ಜಗತ್ತಿನಾದ್ಯಂತ ಮೈಕ್ರೋಸಾಫ್ಟ್ ಸರ್ವರ್‌ಡೌನ್‌,ವಿಮಾನಯಾನ, ಬ್ಯಾಂಕ್ ಸೇವೆಗಳಿಗೆ ತೀವ್ರ ಅಡ್ಡಿ.

ಮುಂಬೈ : ಜಗತ್ತಿನಾದ್ಯಂತ ಮೈಕ್ರೋಸಾಫ್ಟ್ ಸರ್ವರ್‌ಡೌನ್‌,ವಿಮಾನಯಾನ, ಬ್ಯಾಂಕ್ ಸೇವೆಗಳಿಗೆ ತೀವ್ರ ಅಡ್ಡಿ.

ಮುಂಬೈ : ಜಗತ್ತಿನಾದ್ಯಂತ ಮೈಕ್ರೋಸಾಫ್ಟ್ ಸರ್ವರ್‌ಡೌನ್‌ ಆಗಿದ್ದು ವಿಮಾನಯಾನ, ಬ್ಯಾಂಕ್ ಸೇವೆಗಳಿಗೆ ಇವತ್ತು ಒಂದೇ ದಿನದಲ್ಲಿ ವಿಶ್ವಾದ್ಯಂತ ಬಹಳಷ್ಟು ಕಂಪ್ಯೂಟರ್​ಗಳ ಮೇಲೆ ಇದು ಪರಿಣಾಮ ಬೀರಿದೆ. ಬ್ಯಾಂಕುಗಳು, ನ್ಯೂಸ್ ಚಾನಲ್​ಗಳು, ಷೇರು ವಿನಿಮಯ ಕೇಂದ್ರ ಹೀಗೆ ಬಹಳಷ್ಟು ಸೇವೆಗಳು ಸ್ಥಗಿತಗೊಂಡ ಬಗ್ಗೆ ವರದಿಯಾಗಿದೆ.

ವಿಂಡೋಸ್​ 10, ಮೈಕ್ರೋಸಾಫ್ಟ್​ ಅಭಿವೃದ್ಧಿ ಪಡಿಸಿರುವ ಹೊಸ ಸಾಫ್ಟ್‌​ವೇರ್ ಈಗ ಜಾಗತಿಕವಾಗಿ ದೊಡ್ಡ ಸಮಸ್ಯೆಯಾಗಿ ಕಾಡಲು ಆರಂಭಿಸಿದೆ. ವಿಂಡೋಸ್ 10 ಬಳಕೆದಾರರು ಅದು ನೀಡುತ್ತಿರುವ ಹೊಸ ಸಮಸ್ಯೆಗೆ ಹೈರಾಣಾಗಿ ಹೋಗಿದ್ದಾರೆ. ವಿಶ್ವದ ಹಲವು ಕಡೆ ಬಿಎಸ್​ಒಡಿ ಅಂದ್ರೆ ಬ್ಲೂ ಸ್ಕ್ರೀನ್ ಆಪ್ ಡೆತ್ ಅನ್ನೋ ಸಮಸ್ಯೆಯೊಂದು ಸೃಷ್ಟಿಯಾಗಿದೆ.

ಮೆಕ್ರೋಸಾಫ್ಟ್‌ನ 365ಕ್ಕೂ ಹೆಚ್ಚು ಆಪ್‌ಗಳಿದ್ದು, ಇದೆಲ್ಲವುಗಳು ಸಮಸ್ಯೆ ತೋರಿಸುತ್ತಿದ್ದು, ಬಳಕೆದಾರರು ತೊಂದರೆ ಅನುಭವಿಸಿದ್ದಾರೆ. ಇತ್ತೀಚಿನ ಜಾಗತಿಕ ಸೈಬರ್ ಭದ್ರತಾ ಸಂಸ್ಥೆ ಕ್ರೌಡ್‌ಸ್ಟ್ರೈಕ್‌ನಲ್ಲಿ ಮಾಡಿದ ಹೊಸ ಅಪ್‌ಡೇಟ್‌ನ ನಂತರ ಈ ಸಮಸ್ಯೆ ಎದುರಾಗಿದೆ. ಇಂದು ಮುಂಜಾನೆಯಿಂದ ಈ ಸಮಸ್ಯೆ ಆರಂಭವಾಗಿದ್ದು, ಇದು ಜಾಗತಿಕ ಮಟ್ಟದ ಹಲವು ಕಂಪನಿಗಳ ಕೆಲಸದ ಮೇಲೆ ತೀವ್ರ ಪರಿಣಾಮ ಬೀರಿದೆ. ಭಾರತ, ಅಮೆರಿಕಾ, ಆಸ್ಟ್ರೇಲಿಯಾದ ಎಲ್ಲಾ ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ವಿಮಾನಯಾನ ಸಂಸ್ಥೆಗಳು ಸೇರಿದಂತೆ ಎಲ್ಲಾ ಸಂಸ್ಥೆಗಳಿಗೆ ತೊಂದರೆ ಆಗಿದ್ದು, ಅನೇಕರು ಈ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

ನಿಮಗೂ ಇವತ್ತು ಈ ವಿಂಡೋಸ್ ಬ್ಲೂಸ್ ಸ್ಕ್ರೀನ್ ಎರರ್ ಕಾಣಿಸಿಕೊಂಡಿಯಾ ಇದಕ್ಕೆ ಪರಿಹಾರ ಇದೆ ನೋಡಿ

ನಿಮ್ಮ ವಿಂಡೋಸ್ ಅನ್ನು ಸ್ಟಾರ್ಟ್ ಮಾಡಿ ಸೇಫ್ ಮೋಡ್ ಅಥವಾ ವಿಂಡೋಸ್ ರಿಕವರಿ ಎನ್ವಿರಾನ್ಮೆಂಟ್​ನಲ್ಲಿ ಬೂಟ್ ಮಾಡಿ.
C:\Windows\System32\drivers\CrowdStrike directory ಇಲ್ಲಿಗೆ ಹೋಗಿ
ಇಲ್ಲಿ ‘C-00000291*.sys’ ಎಂಬ ಹೆಸರಿನ ಫೈಲ್ ಅನ್ನು ಹುಡುಕಿರಿ.
ಈ ಫೈಲ್ ಅನ್ನು ಡಿಲೀಟ್ ಮಾಡಿ.
ಈಗ ನಿಮ್ಮ ವಿಂಡೋಸ್ ಅನ್ನು ಮಾಮೂಲಿಯ ರೀತಿಯಲ್ಲಿ ಬೂಟ್ ಮಾಡಿ.
ಈ ಮೇಲಿನ ಕ್ರಮದ ಬಳಿಕ ನಿಮ್ಮ ಸಿಸ್ಟಂ ಸರಿಯಾಗಬಹುದು. ಒಂದು ವೇಳೆ ಸರಿಯಾಗಲಿಲ್ಲವೆಂದರೆ ಐಟಿ ಸಹಾಯ ಪಡೆಯಬೇಕಾಗಬಹುದು. ಕ್ರೌಡ್​ಸ್ಟ್ರೈಕ್ ಕಂಪನಿ ಕೂಡ ಈ ಅಪ್​ಡೇಟ್ ಅನ್ನು ಸರಿಪಡಿಸಿ ಹೊಸ ಅಪ್​ಡೇಟ್ ಬಿಡುಗಡೆ ಮಾಡುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular