Friday, March 13, 2026
Flats for sale
Homeಕ್ರೈಂಮಾಗಡಿ : ಹಾಲು ಕೊಡಲು ಬರುತ್ತಿದ್ದ 13 ವರ್ಷದ ಬಾಲಕಿ ಮೇಲೆ ವೃದ್ಧನಿಂದ ಅತ್ಯಾಚಾರ: ಈಗ...

ಮಾಗಡಿ : ಹಾಲು ಕೊಡಲು ಬರುತ್ತಿದ್ದ 13 ವರ್ಷದ ಬಾಲಕಿ ಮೇಲೆ ವೃದ್ಧನಿಂದ ಅತ್ಯಾಚಾರ: ಈಗ ಆಕೆ ಗರ್ಭಿಣಿ!

ಮಾಗಡಿ : ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆಗಾಗಿ ಆಸ್ಪತ್ರೆ ಗೆ ಬಂದಾಗ‌ ಗರ್ಭಿಣಿ ಯಾಗಿರುವುದು‌ ಪತ್ತೆಯಾಗಿದೆ. ಒಂದು ವರೆ ತಿಂಗಳು ಗರ್ಭಿಣಿ ಆಗಿರುವ ಬಾಲಕಿ. ಬಾಲಕಿ ಸ್ಥಿತಿ ಕಂಡು ಪೋಷಕರು ಕಂಗಾಲಾಗಿದ್ದಾರೆ. ಯಾರು ಮಾಡಿದ್ದು ಎಂದು ಪೋಷಕರು ಕೇಳಿದ ವೇಳೆ ವೃದ್ಧನ ಹೆಸರನ್ನು ಬಾಲಕಿ ತಿಳಿಸಿದ್ದಾಳೆ.

ಹಸು ಹಾಲು ನೀಡಲು ಹೋದಾಗ ವೃದ್ಧನಿಂದ ಈ ಕೃತ್ಯ ನಡೆದಿದೆ. ವೃದ್ಧನ ಮನೆಗೆ ಹಾಲು ಕೊಡಲು ಹೋಗುತ್ತಿದ್ದ ಬಾಲಕಿ ತಂದೆ ಇಲ್ಲದ ದಿನ ಹಾಲು ಕೊಟ್ಟು ಬರಲು ಬಾಲಕಿ ತೆರಳುತ್ತಿದ್ದಳು. ಯಾರು ಇಲ್ಲದ‌ ಸಮಯ ಬಾಲಕಿ ಜತೆ ಇಂಥಹ ದುಷ್ಕೃತ್ಯವೆಸಗಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಐದು ವರ್ಷಗಳ ಹಿಂದೆಯೂ ಬಾಲಕಿ ಗೆ ಜತೆ ಇಂಥಹ ಘಟನೆ ನಡೆದಿದೆ ಎನ್ನಲಾಗಿದೆ. ಭಯದಿಂದ ಸುಮ್ಮನಿದ್ದ ಬಾಲಕಿ ಐದು ವರ್ಷಗಳ ಬಳಿಕ ಮತ್ತೆ ಹಾಲು ಕೊಟ್ಟು ಬರಲು ಮನೆಗೆ ತೆರಳಿದ್ದ ಬಾಲಕಿಮೊದಲಿನಂತೆಯೇ ಸಲುಗೆ ಬೆಳಸಿ ಕುಕೃತ್ಯ ಅತ್ಯಾಚಾರ ಆರೋಪದ ಮೇಲೆ ವೃದ್ಧನನ್ನು ಮಾಗಡಿ ಪೋಲೀಸರು ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡು ಬಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular