ಮಧ್ಯಪ್ರದೇಶದ: ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಸಿರೋಂಜ್ ತಹಸಿಲ್ ನ ಸೆಮಲ್ ಖೇಡಿ ಎಂಬ ಗ್ರಾಮದಲ್ಲಿ ಮನುಷ್ಯನ ಮುಖವನ್ನೇ ಹೋಲುವ ಮರಿಗೆ ಮೇಕೆಯೊಂದು ಜನ್ಮ ನೀಡಿದ ಘಟನೆ ನಡೆದಿದೆ.ಈ ಮೇಕೆ ಮರಿಯನ್ನು ಕಂಡು ಮೇಕೆಯ ಮಾಲಿಕರು ಹಾಗೂ ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಗ್ರಾಮದ ನಿವಾಸಿಯಾಗಿರುವ ನವಾಬ್ ಖಾನ್ ಎಂಬವರ ಮನೆಯ ಮೇಕೆಯೊಂದು ಮರಿ ಹಾಕಿದ್ದು, ಈ ಮೇಕೆ ಮರಿಯ ಮುಖ ಮಾನವನ ಮುಖವನ್ನು ಹೋಲುತ್ತಿದೆ.ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಸಿರೋಂಜ್ ತಹಸಿಲ್ ನ ಸೆಮಲ್ ಖೇಡಿ ಎಂಬ ಗ್ರಾಮದಲ್ಲಿ ಇಂತಹದ್ದೊಂದು ಅಚ್ಚರಿಯ ಘಟನೆ ನಡೆದಿದೆ.
ಈ ಫೋಟೋವನ್ನು ಕಂಡು ಜನರು ಅಚ್ಚರಿಗೀಡಾಗಿದ್ದಾರೆ. ಸದ್ಯ ಈ ಮೇಕೆ ಮರಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮನುಷ್ಯನ ಕಣ್ಣಿನಂತೆ ಎರಡು ಕಣ್ಣುಗಳು ನೋಡಲು ಕನ್ನಡಕ ತೊಡಿಸಿದಂತೆ ಕಾಣುತ್ತದೆ. ತಲೆಯ ಮೇಲೆ ಬಿಳಿ ಬಣ್ಣದ ಕೂದಲುಗಳಿವೆ. ನೋಡಲು ಮನುಷ್ಯನ ಮುಖವನ್ನೇ ಈ ಮೇಕೆ ಹೋಲುತ್ತಿದೆ.
ಈ ರೀತಿಯ ವಿಚಿತ್ರ ಜನನಕ್ಕೆ ಹೆಡ್ ಡಿಸ್ಪೆಪ್ಸಿಯಾ ಎಂಬ ಅಸ್ವಸ್ಥತೆ ಕಾರಣ ಎಂದು ಪಶುವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಸಾರ್ವಜನಿಕರು ಇದೊಂದು ಪವಾಡ ಎಂಬಂತೆ ಮಾತನಾಡುತ್ತಿದ್ದಾರೆ.ಮೇಕೆ ಮರಿಯ ವಿಚಿತ್ರ ಮುಖದ ಕಾರಣದಿಂದಾಗಿ ಅದಕ್ಕೆ ಸಿರಿಂಜ್ ನಿಂದಲೇ ಹಾಲುಣಿಸುವಂತಾಗಿದೆ.