Saturday, November 23, 2024
Flats for sale
Homeರಾಜ್ಯಮಡಿಕೇರಿ ; ಕೆಲಸಗಾರರು ಬೇಕಾಗಿದ್ದಾರೆ ಎಂದು ರಸ್ತೆ ಬದಿ ಬೋರ್ಡ್ ಹಿಡಿದು ನಿಂತ ಕೊಡಗಿನ ಕಾಫಿ...

ಮಡಿಕೇರಿ ; ಕೆಲಸಗಾರರು ಬೇಕಾಗಿದ್ದಾರೆ ಎಂದು ರಸ್ತೆ ಬದಿ ಬೋರ್ಡ್ ಹಿಡಿದು ನಿಂತ ಕೊಡಗಿನ ಕಾಫಿ ಬೆಳೆಗಾರ.

ಮಡಿಕೇರಿ ; ಕಾಫಿ ಕೀಳಲು ಕಾರ್ಮಿಕರಿಗೆ ಭಾರೀ ಬೇಡಿಕೆ ಇರುವುದರಿಂದ ಅಧಿಕ ಸಂಬಳ ನೀಡಿದರು ಕಾರ್ಮಿಕರು ಸಿಗುತ್ತಿಲ್ಲ. ಇದರಿಂದ ಕಾಫಿ ಬೆಳೆಗಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಅದರಂತೆ ವ್ಯಕ್ತಿಯೊಬ್ಬರು ಕಾಫಿ ಕೀಳಲು ಕಾರ್ಮಿಕರಿಲ್ಲದೆ ಏನು ಮಾಡಿದ್ದಾರೆ ಗೊತ್ತಾ?. ಇದು ಕೊಡಗಿನಲ್ಲಿ ಬೆಳಕಿಗೆ ಬಂದ ಘಟನೆ. ಕಾಫಿ ಬೆಳಗಾರರೊಬ್ಬರು ಕಾಫಿ ಬೀಜ ಕೀಳಲು ಕಾರ್ಮಿಕರು ಸಿಗದೆ ಬೇಸತ್ತು ಕೊನೆಗೆ ರಸ್ತೆ ಬದಿ ಬಂದು ಬೋರ್ಡ್​​ ಹಿಡಿದು ನಿಂತಿದ್ದಾರೆ. ಬೋರ್ಡ್​ನಲ್ಲಿ ‘ಕೆಲಸಗಾರರು ಬೇಕು’ ಎಂದು ಬರೆದುಕೊಂಡಿದ್ದಾರೆ.

ಅಷ್ಟು ಮಾತ್ರವಲ್ಲ, ಮಹಿಳೆಯರಿಗೆ ದಿನಕ್ಕೆ 415 ರೂಪಾಯಿ ನೀಡಲಾಗುತ್ತದೆ ಎಂದು ಬರೆದಿದ್ದಾರೆ. ಇನ್ನು ಪುರುಷರಿಗೆ 615 ದಿನ ಸಂಬಳ ನೀಡುವುದಾಗಿ ಬರೆದುಕೊಂಡಿದ್ದಾರೆ.

ಇದಲ್ಲದೆ, ನಿರ್ದಿಷ್ಟ ಸಮಯಕ್ಕಿಂತ ಜಾಸ್ತಿ ಕೆಲಸ ಮಹಿಳೆಯರು ಮತ್ತು ಪುರುಷರಿಗೆ ಎಕ್ಸ್ಟಾ ಸಂಬಳ ನೀಡುವುದಾಗಿ ಹೇಳಿದ್ದಾರೆ.ಕಳೆದ ಕೆಲವು ದಿನಗಳಿಂದ ಕಾಡುಪ್ರಾಣಿಗಳ ದಾಳಿಯಿಂದ ಹವವಾರು ಮೃತಪಟ್ಟ ಪರಿಣಾಮ ತೋಟದ ಕೆಲಸಕ್ಕೆ ಕಾರ್ಮಿಕರು ಬರಲು ಹಿಂಜರಿತ್ತಿರುವುದು ಸ್ಥಳಿಯರ ಮಾತು.

ಈ ಬಗ್ಗೆ ಸರಕಾರ ಹಾಗೂ ಅರಣ್ಯ ಇಲಾಖೆ ಹೆಚ್ಚೆತ್ತು ಕಾಡುಪ್ರಾಣಿಗಳ ಹಾವಳಿಗೆ ಸರಿಯಾದ ಕ್ರಮ ಕೈಗೊಂಡರೆ ಕಾರ್ಮಿಕರು ಕೆಲಸಕ್ಕೆ ಬರಬಹುದೆಂಬುದು ತೋಟದ ಮಾಲಿಕರ ಮಾತು.

RELATED ARTICLES

LEAVE A REPLY

Please enter your comment!
Please enter your name here

Most Popular