Saturday, November 23, 2024
Flats for sale
Homeರಾಜ್ಯಮಂಡ್ಯ : ಭೀಕರ ಬರದಲ್ಲೂ ತಮಿಳುನಾಡಿಗೆ ಕದ್ದು ಮುಚ್ಚಿ ಕಾವೇರಿ ನೀರು..? ನದಿಗಿಳಿದು ರೈತರ ಪ್ರತಿಭಟನೆ.

ಮಂಡ್ಯ : ಭೀಕರ ಬರದಲ್ಲೂ ತಮಿಳುನಾಡಿಗೆ ಕದ್ದು ಮುಚ್ಚಿ ಕಾವೇರಿ ನೀರು..? ನದಿಗಿಳಿದು ರೈತರ ಪ್ರತಿಭಟನೆ.

ಮಂಡ್ಯ : ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇಂತಹ ಭೀಕರ ಬರದಲ್ಲೂ ಸರ್ಕಾರವು ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಆದರೆ ಈ ಆರೋಪವನ್ನು ಕಾವೇರಿ ನಿಗಮವು ತಟ್ಟಿಹಾಕಿದೆ. ನೀರು ತಮಿಳುನಾಡಿಗೆ ಅಲ್ಲ ಬದಲಾಗಿ ಬೆಂಗಳೂರಿಗೆ ಬಿಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿವೆ.ಆದರೆ ಮಂಡ್ಯದಲ್ಲಿ ಕಾವೇರಿ ನೀರು ತಮಿಳುನಾಡಿಗೆ ರಭಸದಿಂದ ಹರಿಯುವ ವಿಡಿಯೋ ವೈರಲ್ ಹಾಗಿದ್ದು ಸರಕಾರದ ವಿರುದ್ಧ ಭೂಮಿತಾಯಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತ ಹೋರಾಟಗಾರ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ಕಾವೇರಿ ನದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ರೈತರು ಶ್ರೀರಂಗಪಟ್ಟಣದ ಸ್ನಾನಘಟ್ಟ ಬಳಿಯ‌ ಕಾವೇರಿ ನದಿಗಿಳಿದು ಸರ್ಕಾರದ ವಿರುದ್ದ ಆಕ್ರೋಶವ್ಯಕ್ತಪಡಿಸಿದ್ದಾರೆ. ಇಲ್ಲಿನ ರೈತರ ಬೆಳೆಗಳಿಗೆ, ಜನತೆಗೆ ಕುಡಿಯಲು ಕನ್ನಂಬಾಡಿ ಅಣೆಕಟ್ಟೆಯಲ್ಲಿ ನೀರಿಲ್ಲ.ರಾಜ್ಯ ಕಾಂಗ್ರೆಸ್ ಸರ್ಕಾರ ತಮಿಳುನಾಡಿನ ಓಲೈಕೆಗಾಗಿ ಕಾವೇರಿ ನೀರು ಹರಿಸಿ ರೈತರ ಬದುಕಿಗೆ ಚಪ್ಪಡಿ ಕಲ್ಲು ಎಳೆಯಲು ಮುಂದಾಗಿದೆ ಮಂಡ್ಯ ಜಿಲ್ಲೆಯ ಜನ- ಜಾನುವಾರುಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಎಂದು ಕಿಡಿಕಾರಿದ್ದಾರೆ.ಈ ಕೂಡಲೆ ನೀರು ಹರಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular