Friday, March 13, 2026
Flats for sale
Homeರಾಜ್ಯಮಂಡ್ಯ : ಕುಡಿಯುವ ನೀರಿಗಾರಿ ಹಾಹಾಕಾರ : ನೀರನ್ನು ಕದ್ದು ಸಾಗಿಸುತ್ತಿರುವ ಅಭ್ಯರ್ಥಿ ಸ್ಟಾರ್ ಚಂದ್ರು...

ಮಂಡ್ಯ : ಕುಡಿಯುವ ನೀರಿಗಾರಿ ಹಾಹಾಕಾರ : ನೀರನ್ನು ಕದ್ದು ಸಾಗಿಸುತ್ತಿರುವ ಅಭ್ಯರ್ಥಿ ಸ್ಟಾರ್ ಚಂದ್ರು ಒಡೆತನದ ಕಂಪನಿ,ಆಕ್ರೋಶ ವ್ಯಕ್ತಪಡಿಸಿದ ರೈತರು.

ಮಂಡ್ಯ : ಕೆಆರ್‌ಎಸ್ ಅಣೆಕಟ್ಟೆಯಲ್ಲಿಯೇ ನೀರಿಲ್ಲದೆ ಜನರು ಕುಡಿಯುವ ನೀರಿಗಾರಿ ಹಾಹಾಕಾರ ಎದುರಿಸುತ್ತಿದ್ದಾರೆ. ಇಂತಹ ಸಂದಿಗ್ನ ಪರಿಸ್ಥಿತಿಯಲ್ಲಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಒಡೆತನದಲ್ಲಿ ಇರುವ ಕಂಪೆನಿ ನಡೆಸುತ್ತಿರುವ ವಿಸಿ ನಾಲೆಯ ಕಾಮಗಾರಿಗೆ ಕದ್ದು ಕೆಆರ್‌ಎಸ್ ನಿಂದ ನಾಲೆಗೆ ಬಿಟ್ಟ ನೀರು ತೆಗೆದುಕೊಂಡು ಹೋಗುತ್ತಿದ್ದು ಇದು ಸಾರ್ವಜನಿಕರು, ರೈತರ ಆಕ್ರೋಶಕ್ಕೆ ಕಾರಣವಾಗಿದೆ‌.

ಸತತ ಬರಗಾಲ, ಮಳೆಕೈಕೊಟ್ಟ ಹಿನ್ನೆಲೆಯಲ್ಲಿ ನೀರಿಗಾಗಿ ಹಾಹಾಕಾರ ಎದುರಾಗಿದೆ. ಜನರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಇರುವ ನೀರು ಮಂಡ್ಯ, ಮೈಸೂರು, ಬೆಂಗಳೂರಿಗೆ ಕುಡಿಯುವುದಕ್ಕೂ ಸಾಲುವುದಿಲ್ಲ ಎಂದು ಅಧಿಕಾರಿಗಳು ನಾಲೆಗೆ ನೀರು ಹರಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಒಡೆತನದ ಕಂಪೆನಿ ಗುತ್ತಿಗೆಪಡೆದು ನಡೆಸುತ್ತಿರುವ ವಿಸಿ ನಾಲೆಯ ಆಧುನೀಕರಣಕ್ಕಾಗಿ ಕೆಆರ್‌ಎಸ್ ಅಣೆಕಟ್ಟೆಯಿಂದ ಕದ್ದು ನಾರ್ಥ ಬ್ಯಾಂಕ್ ಕಡೆಗೆ ಇರುವ ವಿಸಿ ನಾಲೆಯ ಕಟ್ಟೆಯ ಕಡೆಗೆ ನೀರು ಹಿರಿಬಿಟ್ಟು ಅಲ್ಲಿಂದ ಲಾರಿಗಳ ಮೂಲಕ ನೀರನ್ನು ತೆಗೆದುಕೊಂಡು ಹೋಗಿ ನಾಲೆಯ ಕಾಮಗಾರಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ನಾಲೆಯ ಕಾಮಗಾರಿಗೆ ಗುತ್ತಿಗೆಪಡೆದಿರುವ ಗುತ್ತಿಗೆದಾರರು, ಎಂಜಿನಿಯರ್‌ಗಳು ನಾಲೆಯ ಆಧುನೀಕರಣಕ್ಕೆ ಬೇಕಿರುವ ಎಲ್ಲಾ ಸಾಮಾಗ್ರಿಗಳ ಜತೆಗೆ ನೀರನ್ನು ಸಹ ಬೇರೆ ಕಡೆಯಿಂದ ಪೂರೈಕೆ ಮಾಡಿಕೊಂಡು ಕಾಮಗಾರಿ ನಡೆಸಬೇಕು, ಅದನ್ನುಬಿಟ್ಟು ಉಂಡುಹೋದಕೊಂಡು ಹೋದ ಎಂಬಂತೆ ನಾಲೆಯ ಗುತ್ತಿಗೆಕಾಮಗಾರಿ ಪಡೆಯುವುದರ ಜತೆಗೆ ಕೆಆರ್‌ಎಸ್ ಅಣೆಕಟ್ಟೆಯ ನೀರಿಗೂ ಕನ್ನಾ ಹಾಕುತ್ತಿದ್ದಾರೆ. ಇದೆಲ್ಲ ಗೊತ್ತಿದ್ದರು ಗೊತ್ತಿಲ್ಲದಂತೆ ನೀರಾವರಿ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಅಧಿಕಾರಿಗಳ ವಿರುದ್ದ ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಕೆಆರ್‌ಎಸ್ ಅಣೆಕಟ್ಟೆಯಿಂದ ವಿಸಿ ನಾಲೆ ಕಡೆಗೆ ನೀರು ಬಿಡಿಸಿಕೊಂಡು ಅಲ್ಲಿಂದ ಡಿಸೇಲ್ ಮೋಟಾರ್ ಮೂಲಕ ಲಾರಿಗಳಿಗೆ ನೀರು ಪುರೈಕೆ ಮಾಡುತ್ತಿದ್ದಾರೆ. ಅಂದಾಜಿನ ಪ್ರಕಾರ ದಿನ ಒಂದಿಕ್ಕೆ 200 ಲಾರಿಗಳ ವರೆಗೂ ಸಹ ಲಾರಿಗಳ ಮೂಲಕ ನಾಲೆಯಿಂದ ನೀರು ಪೂರೈಕೆ ಮಾಡಿಕೊಳ್ಳುತ್ತಿದ್ದಾರೆ. ನೀರಾರಿಗಾಗಿ ಜನರು ಪರದಾಡುತ್ತಿರುವ ಸನ್ನುವೇಶದಲ್ಲಿ ನಾಲೆಯ ಕಾಮಗಾರಿಗಾಗಿ ಕದ್ದುಮುಚ್ಚಿ ನೀರಾವರಿ ಅಧಿಕಾರಿಗಳು ನೀರು ಹರಿ ಬಿಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಒಬ್ಬ ಗುತ್ತಿಗೆದಾರ ಕಾಮಗಾರಿ ಗುತ್ತಿಗೆ ಪಡೆದ ಬಳಿಕ ಅದಕ್ಕೆ ಬೇಕಾದ ನೀರನ್ನು ದುಡ್ಡುಕೊಟ್ಟು ರೈತರ ಬೋರ್‌ವೆಲ್‌ನಿಂದ ಪಡೆದು ಕಾಮಗಾರಿ ನಡೆಸಲಿ ಬಿಡಿ. ಅದನ್ನು ಬಿಟ್ಟು ಕದ್ದುಮುಚ್ಚಿ ಕೆಆರ್ ಎಸ್ ಅಣೆಕಟ್ಟೆಯಿಂದ ವಿಸಿ ನಾಲೆಯ ಕಡೆ ನೀರು ಹರಿಬಿಡುವ ಮೂಲಕ ಜನರ ಕಣ್ಣಿಗೆ ಮಚ್ಚು ಎರಚುತ್ತಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular