ಮಂಗಳೂರು : ನಗರದ ಪ್ರತಿಷ್ಠಿತ ಏ.ಜೆ ಶೆಟ್ಟಿ ಮಾಲಕತ್ವದ ಏ.ಜೆ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿನಿ (20) ಸೋಮವಾರ ನ.13ರಂದು ಹಾಸ್ಟೆಲ್ ಕಟ್ಟಡದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮೃತರನ್ನು ಪ್ರಕೃತಿ ಶೆಟ್ಟಿ (20) ಎಂದು ಗುರುತಿಸಲಾಗಿದೆ.
ಪ್ರಕೃತಿ ಹಾಸ್ಟೆಲ್ ಕಟ್ಟಡದ 6ನೇ ಮಹಡಿಯಿಂದ ಜಿಗಿದಿದ್ದಾಳೆ ಎನ್ನಲಾಗಿದೆ.
ಮೃತಳಿಂದ ಡೆತ್ ನೋಟ್ ಪತ್ತೆಯಾಗಿದ್ದು, ಆಕೆ ಜೀವನದಲ್ಲಿ ಹತಾಶಳಾಗಿದ್ದಾಳೆ ಎಂದು ಬರೆದಿದ್ದಾರೆ.


