ಮಂಗಳೂರು : ಕೆಲ ರಹಸ್ಯ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳುತ್ತಿದ್ದ ಐವರು ಯುವಕರನ್ನು ಪೊಲೀಸರು 42 ಮೊಬೈಲ್ ಸಿಮ್ ಕಾರ್ಡ್ಗಳೊಂದಿಗೆ ಬಂಧಿಸಿದ್ದಾರೆ.
ಯುವಕರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಫೆ.1ರಂದು ಬೆಳ್ತಂಗಡಿಯ ನೆರಿಯ ಗ್ರಾಮದ ತೋಟತ್ತಾಡಿ ಎಂಬಲ್ಲಿ ಯುವಕರ ತಂಡವನ್ನು ಬಂಧಿಸಲಾಗಿತ್ತು. ಬಂಧಿತ ಯುವಕರನ್ನು ರಮೀಜ್ (20), ಅಕ್ಬರ್ ಅಲಿ (24), ಮೊಹಮ್ಮದ್ ಮುಸ್ತಫಾ (22), ಮಹಮ್ಮದ್ ಸಾದಿಕ್ (27) ಮತ್ತು 17 ವರ್ಷದ ಅಪ್ರಾಪ್ತ ಬಾಲಕ ಎಂದು ಗುರುತಿಸಲಾಗಿದೆ.
ಆರೋಪಿ ಅಕ್ಬರ್ ಅಲಿ ದುಬೈನಲ್ಲಿ ಇದ್ದಾಗ ಬೇರೆಯವರ ಹೆಸರಿನಲ್ಲಿ ನಕಲಿ ದಾಖಲೆ ಕೊಟ್ಟು ಸಿಮ್ ಖರೀದಿ ಮಾಡಿದ್ದ. ಎರಡು ವರ್ಷಗಳ ಕಾಲ ದುಬೈನಲ್ಲಿದ್ದ ಈತ ನಾಲ್ಕು ತಿಂಗಳ ಹಿಂದೆ ಊರಿಗೆ ಮರಳಿದ್ದ. ವಿದೇಶದ ನಂಟು ಇರುವುದರಿಂದ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಈ ಪ್ರಕರಣದಲ್ಲಿ ವಿದೇಶದ ಸಂಪರ್ಕವಿರುವುದರಿಂದ ಪೊಲೀಸರು ಇನ್ನಷ್ಟು ತೀವ್ರ ಹಾಗೂ ಆಳವಾದ ತನಿಖೆಗೆ ಮುಂದಾಗಿದ್ದಾರೆ.


