Thursday, March 26, 2026
Flats for sale
Homeಜಿಲ್ಲೆಮಂಗಳೂರು ; 17600 ಮೆಟ್ರಿಕ್ ಟನ್‌ ಎಲ್‌ಪಿಜಿ ಸಾಗಣೆ ‘ಅಪೊಲ್ಲೋ ಓಷನ್’ ಹಡಗು...

ಮಂಗಳೂರು ; 17600 ಮೆಟ್ರಿಕ್ ಟನ್‌ ಎಲ್‌ಪಿಜಿ ಸಾಗಣೆ ‘ಅಪೊಲ್ಲೋ ಓಷನ್’ ಹಡಗು ನ್ಯೂ ಮಂಗಳೂರು ಬಂದರಿಗೆ ಆಗಮನ.

ಮಂಗಳೂರು : 17600 ಮೆಟ್ರಿಕ್ ಟನ್‌ ಎಲ್‌ಪಿಜಿ ಸಾಗಣೆ ಹೊಂದಿದ ‘ಅಪೊಲ್ಲೋ ಓಷನ್’ ಟ್ಯಾಂಕರ್ ನ್ಯೂ ಮಂಗಳೂರು ಬಂದರಿಗೆ ಆಗಮಸಿದೆ.

ಗುಜರಾತ್‌ನಿಂದ ಹೊರಟ ಈ ಟ್ಯಾಂಕರ್ ಹಡಗು ಇಂದು ನ್ಯೂ ಮಂಗಳೂರು ಪೋರ್ಟ್ ಗೆ ಆಗಮಸಿದ್ದುವIOCL ಮತ್ತು BPCL ಗೆ ಎಲ್‌ಪಿಜಿ ರವಾಸಿಸಲು ಸಿದ್ಧತೆ ನಡೆಸಿದೆ. ಇತ್ತೀಚೆಗೆ ಕತಾರ್‌ನಿಂದ ದ್ರವೀಕೃತತ ಪೆಟ್ರೋಲಿಯಂ ಅನಿಲ(ಎಲ್‌ಪಿಜಿ) ಹೊತ್ತು ತಂದ ಶಿವಾಲಿಕ್‌ ಹೆಸರಿನ ಹಡಗು ಗುಜರಾತ್‌ ಬಂದರಿಗೆ ಬಂದಿತ್ತು ಬಳಿಕ ಅಲ್ಲಿ ಅರ್ಧದಷ್ಟು ಎಲ್‌ಪಿಜಿ ಇಳಿಸಿ, ಉಳಿದ ಎಲ್‌ಪಿಜಿಯನ್ನು ಅಪೊಲೋ ಓಶಿಯನ್ ಸರಕು ಹಡಗಿನ ಮೂಲಕ ಮಂಗಳೂರಿಗೆ ತರಿಸಲಾಗಿದೆ. ಶೀಘ್ರದಲ್ಲೇ ಮತ್ತೆರಡು ಕಚ್ಚಾತೈಲ ಹೊತ್ತ ಹಡಗುಗಳು ಮಂಗಳೂರಿಗೆ ಆಗಮಿಸಲಿದೆ ಎಂದು ತಿಳಿದುಬಂದಿದೆ. ಅವು ತಲುಪುವ ದಿನಾಂಕ ಇನ್ನಷ್ಟೇ ಗೊತ್ತಾಗಬೇಕಿದ್ದು ಎಂದು ನವಮಂಗಳೂರು ಬಂದರು ಪ್ರಾಧಿಕಾರದ ಮೂಲಗಳು ತಿಳಿಸಿವೆ

RELATED ARTICLES

LEAVE A REPLY

Please enter your comment!
Please enter your name here

Most Popular