Thursday, March 19, 2026
Flats for sale
Homeಜಿಲ್ಲೆಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ,ಬೂದಿ ಮುಚ್ಚಿದ ಕೆಂಡದಂತಾದ ದಕ್ಷಿಣ ಕನ್ನಡ, ಎ.ಜೆ...

ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ,ಬೂದಿ ಮುಚ್ಚಿದ ಕೆಂಡದಂತಾದ ದಕ್ಷಿಣ ಕನ್ನಡ, ಎ.ಜೆ ಆಸ್ಪತ್ರೆಯಿಂದ ಬಂಟ್ವಾಳ ಕಾರಿಂಜ ವರೆಗೂ ಶವಯಾತ್ರೆ..!

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಹಾಸ್ ಶೆಟ್ಟಿ ಭೀಕರ ಕೊಲೆ ಹಿನ್ನೆಲೆಯಲ್ಲಿ ಮಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿಅಂಗಡಿ ಮುಂಗಟ್ಟು ಇಡೀ ಮಂಗಳೂರು ಪ್ರಕ್ಷುಬ್ಧವಾಗಿದ್ದು, ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಲೆ ಖಂಡಿಸಿಕರೆ ನೀಡಲಾಗಿರುವ ಮಂಗಳೂರು ಬಂದ್ ಗೂ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು, ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿದ್ದು, ಬಸ್ ಸೇರಿದಂತೆ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಇಡೀ ಮಂಗಳೂರು ಸ್ತಬ್ಧಗೊಂಡಿದೆ. ವಾಹನಗಳ ಮೇಲೆ ಕಲ್ಲು ತೂರಾಟಗಳು ನಡೆದಿದ್ದು,ಹಲವೆಡೆ ಪ್ರಕ್ಷುಬ್ದ ವಾತಾವರಣ ಉಂಟಾಗಿದೆ. ಮಂಗಳೂರಿನಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಇಂದಿನಿಂದ ಮೇ 6ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಜಿಲ್ಲೆ ಬಂದ್‌ಗೆ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದು, ರಸ್ತೆಗಿಳಿದ ಖಾಸಗಿ ಬಸ್ಸುಗಳು ಕಲ್ಲು ನಡೆದಿದ್ದು ಕೆಲವು ವಾಹನಗಳಿಗೆ ಹಾನಿಯುಂಟಾಗಿದೆ. ಕಳೆದ 2022ರಲ್ಲಿ ಸುರತ್ಕಲ್ ನಲ್ಲಿ ನಡೆದ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿಯನ್ನು ನಿನ್ನೆ ರಾತ್ರಿ 8.27ರ ಸುಮಾರಿಗೆ ಬಜಪೆ ಕಿನ್ನಿಸದವು ಎಂಬಲ್ಲಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಹಿಂದೂ ಕಾರ್ಯಕರ್ತನ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಬಂದ್‌ಗೆ ಕರೆ ನೀಡಿದೆ. ರಸ್ತೆಗಿಳಿದ ಖಾಸಗಿ ಬಸ್ ಮೇಲೆ ಉದ್ರಿಕ್ತ ಗುಂಪಿನಿಂದ ಕಲ್ಲು ತೂರಾಟ ನಡೆದಿದೆ. ಮಂಗಳೂರಿನ ಹಂಪನಕಟ್ಟೆಬಳಿಯಬಸ್ಸಿಗೆ ಉದ್ರಿಕ್ತ ಗುಂಪಿನಿಂದ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ ಬಸ್ಸಿಗೆ ಹಾನಿಯಾಗಿದೆ.

ಮೂರು ವಾಹನಗಳು ಜಪ್ತಿ: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಕೈ ಸಂಬಂಧಿಸಿದಂತೆ ಪೊಲೀಸರು ಮೂರು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.ಸುಖಾಸ್ ಶೆಟ್ಟಿ ಅವರೆ ಇನೋವಾ ಕಾರು, ಆರೋಪಿಗಳು ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರು ಹಾಗೂ ಮೀನು ಸಾಗಾಟದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿಗಳು ಬಳಸಿದ ಸ್ವಿಫ್ಟ್ ಕಾರಿನಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿದೆ. ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮೇರ ಮುಂಜಾನೆ 6 ಗಂಟೆ ವರೆಗೆ ನಾಲ್ಕು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸೂಕ್ತ ಪ್ರದೇಶದಲ್ಲಿ ಉತ್ರಿ ಇಡೀ ಗಸ್ತು ತಿರುಗಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದು, ಮಂಗಳೂರು ನಗರಕ್ಕೆ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ.

ಪ್ರತೀಕಾರದ ಎಚ್ಚರಿಕೆ!

ಸುಹಾಸ್ ಶೆಟ್ಟಿಯನ್ನು ಕೊಲೆಗೈದ ತನಿಖೆಯ ವೇಳೆ ಕೊಲೆ ಕೇಸ್‌ಗೆ ಸಂಬಂಧಿಸಿದ ಕೆಲವು ಸ್ಪೋಟಕ ವಿಚಾರಗಳು ಬಯಲಾಗುತ್ತಿವೆ. ದುಷ್ಕರ್ಮಿಗಳು ಸೋಶಿಯಲ್ ಮೀಡಿಯಾದಲ್ಲೇ ಸುಹಾಸ್ ಶೆಟ್ಟಿಗೆ ಪ್ರತೀಕಾರದ ಎಚ್ಚರಿಕೆ ಕೊಟ್ಟಿದ್ದರು ಎಂದು ಗೊತ್ತಾಗಿದೆ. ಕಳೆದ ಮಾರ್ಚ್ 31 ರಂದು ಸುಹಾಸ್ ಶೆಟ್ಟಿ ಕೊಲೆಗೆ ಸೈಜ್ ಹಾಕಲಾಗಿತ್ತು. ಮಾರ್ಚ್ ಅಂತ್ಯದಲ್ಲೇ ಸುಹಾಸ್ ಶೆಟ್ಟಿಯ ತಲೆ ಉರುಳಿಸಲು ಹಂತಕರು ಸಂಚು ರೂಪಿಸಿದ್ದರು. ಹಂತಕರು ಸುಹಾಸ್ ಫೋಟೋ ಸಹಿತಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಟಾರ್ಗೆಟ್ ಫಿಕ್ಸ್ ಮಾಡಿದ್ದರಲ್ಲದೆ, ಅದನ್ನು ಸ್ವತಃ ಸುಹಾಸ್‌ಗೆ ಟ್ಯಾಗ್ ಮಾಡಿದ್ದರು. ಆ ಘಟನೆ ಬೆನ್ನಲ್ಲೇ ಎಡಿಜಿಪಿ ಹಿತೇಂದ್ರ ಅವರು ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾಡಿ ಕೊಲೆ ಆರೋಪಿಗಳ ಸುಳಿವು ಸಿಕ್ಕಿದೆ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಮೃತ ಸುಹಾಸ್ ಈ ಹಿಂದೆ ಬಜರಂಗದಳದ ಕಾರ್ಯಕರ್ತರಾಗಿದ್ದರು ಮತ್ತು ಅವರ ವಿರುದ್ಧ ಹಲವು ಕೊಲೆ ಪ್ರಯತ್ನದ ಪ್ರಕರಣಗಳು ದಾಖಲಾಗಿದ್ದವು ಎಂದು ಹೇಳಿದರು. ಟ್ಯಾಗ್ ಮಾಡಿದ ವಿಡಿಯೋವನ್ನು ಸುಹಾಸ್ ಶೆಟ್ಟಿ ಡೌನ್ ಲೋಡ್ ಮಾಡಿಕೊಂಡಿದ್ದ ಎನ್ನಲಾಗಿದೆ.

ಇನ್ ಸ್ಟಾಗ್ರಾಂ ಪೇಜ್ : ಟಾರ್ಗೆಟ್ ಕಿಲ್ಲರ್ ಹೆಸರಿನ ಇಸ್ಲಾಗ್ರಾಂ ಪೇಜ್ ಕೂಡ ರಚಿಸಿದ್ದ ಮಷ್ಕರ್ಮಿಗಳು, ಸುಪಾಸ್‌ಗೆ ಬಾರ್ಗೆಟ್ ಫಿಕ್ಸ್ ಮಾಡಿರುವುದಾಗಿಯೂ ಹೇಳಿದ್ದರು. 2022ರ ಜುಲೈ 28ರಂದು ಹತ್ಯೆಯಾದ ಸುರತ್ಕಲ್‌ ನ ಫಾಜಿಲ್‌ನ ಫೋಟೋ ಜೊತೆಗೆ ಸುಹಾಸ್‌ನ ಫೋಟೋಹಾಕಿ ರಿವೇಂಜ್ ಸೂನ್”ಎಂದು ಪೋಸ್ಟ್ ಮಾಡಿದ್ದರು, ಮಂಗಳೂರಿನಲ್ಲಿ ನಡೆದ ಬಶೀರ್ ಹತ್ಯೆ ಆರೋಪಿಯ ಪ್ರತೀಕಾರದ ಬಗ್ಗೆಯೂ ಪೋಸ್ಟ್ ಮಾಡಿದ್ದರು. 2018ರ ಜನವರಿ 3ರಂದು ನಡೆದಿದ್ದ ಬಶೀರ್ ಹತ್ಯೆ ಪ್ರಕರಣದಲ್ಲಿ ಬಶೀರ್ ಹತ್ಯೆ ಆರೋಪಿ ಶ್ರೀಜಿತ್ ಫೋಟೋ ಕೂಡ ಬಳಸಿ ರಿವೇಂಜ್ ಸೂನ್ ಎಂದು ಪೋಸ್ಟ್ ಮಾಡಿದ್ದರು.ಫಾಜಿಲ್ ಹತ್ಯೆಗೆ ಪ್ರತೀಕಾರವಾಗಿ ಹಂತಕರು ಸುಖಾಸ್ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಹತ್ಯೆಗೊಳಗಾದ ಸುಹಾಸ್ ಶೆಟ್ಟಿ ಪೊಷಕರಿಗೆ 25 ಲಕ್ಷ ಪರಿಹಾರ.

ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಮೃತಪಟ್ಟ ಸುಹಾಸ್ ಶೆಟ್ಟಿ ಮನೆಗೆ ಬೇಟಿ ನೀಡಿದ್ದು ಮೃತರ ಪೋಷಕರಿಗೆ ಸಾಂತ್ವನ ನಿಡಿದ್ದಾರೆ.ಆ ಸಂದರ್ಭದಲ್ಲಿ ಹಲವಾರು ಕಾರ್ಯಕರ್ತರು ನೆರೆದಿದ್ದು ಸುಹಾಸ್ ಅಮರ್ ರಹೇ ಎಂದು ಘೋಷಣೆ ಕೂಗಿದ್ದಾರೆ.ಬಳಿಕ ಮಾತನಾಡಿದ ಬಿ.ವೈ ವಿಜಯೆಂದ್ರ ಕಾಂಗ್ರೆಸ್ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂಗಳ ಹತ್ಯೆ ಭಾಗ್ಯ ನಡೆಯುತ್ತಿದೆ, ಹಿಂದೂಗಳಿಗೆ ನೆಲೆ ಇಲ್ಲದಂತಾಗಿದೆ,ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಹಿಂದೂಗಳನ್ನು ಗುರಿಯಾಗಿಸಲಾಗುತ್ತಿದೆ,ಸುಹಾಸ್ ಅವರಿಗೆ ಜೀವ ಬೆದರಿಕೆ ಇದೆ ಎಂದು ಸರ್ಕಾರಕ್ಕೆ ಮಾಹಿತಿ ಇದ್ದರೂ, ಅವರಿಗೆ ಭದ್ರತೆ ನೀಡಲಾಗಿಲ್ಲ ಯಾಕೆ ? ಒಂದು ವಾರದ ಮೊದಲೆ ಪೋಲಿಸರು ಸುಹಾಸ್ ವಾಹನ ತಪಾಸಣೆ ಮಾಡಿದ್ದರು ಈ ಬಗ್ಗೆ ಇಲಾಖೆಯ ಏನೋ ಅನುಮಾನ ಮೂಡುತ್ತಿದೆ ಎಂದರು,ಸುಹಾಸ್ ಕುಟುಂಬ ಬಡತನದಲ್ಲಿ ಇರುವುದರಿಂದ ಬಿಜೆಪಿ ಪಕ್ಷದಿಂದ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.ಈ ಪ್ರಕರಣವನ್ನುಎನ್‌ಐಎ ತನಿಖೆ ನಡೆಸಬೇಕೆಂದು ನಾನು ಒತ್ತಾಯಿಸುತ್ತೇನೆ ಮತ್ತು ಸರ್ಕಾರ ಕುಟುಂಬಕ್ಕೆ ಪರಿಹಾರವನ್ನು ನೀಡಬೇಕು ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular