Friday, March 13, 2026
Flats for sale
Homeಜಿಲ್ಲೆಮಂಗಳೂರು : ಸ್ಟ್ರೀಟ್ ಫುಡ್ ಫೆಸ್ಟ್ ವೇಳೆ ಕ್ಯಾ. ಬ್ರಿಜೇಶ್ ಚೌಟ ನ ಚೇಲನಿಂದ ಶಾಸಕ...

ಮಂಗಳೂರು : ಸ್ಟ್ರೀಟ್ ಫುಡ್ ಫೆಸ್ಟ್ ವೇಳೆ ಕ್ಯಾ. ಬ್ರಿಜೇಶ್ ಚೌಟ ನ ಚೇಲನಿಂದ ಶಾಸಕ ವೇದವ್ಯಾಸ್ ಕಾಮತ್ ಗೆ ನಿಂದನೆ,ಮೊನ್ನೆ ಮೊನ್ನೆ ಬಂದ ಬಚ್ಚಗಳಿಂದ ಶಾಸಕರಿಗೆ ಅವಮಾನ,ವಿಡಿಯೋ ವೈರಲ್..!

ಮಂಗಳೂರು : ರಾಜ್ಯ ಬಿಜೆಪಿ ಯಲ್ಲಿ ಅಸಮಾಧಾನ ಭುಗಿಲೆದ್ದ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಬಿಜೆಪಿ ಯಲ್ಲಿ ಅಸಮಾಧಾನ ಭುಗಿಲೆದ್ದಿದೆ.ಮೊನ್ನೆ ಮೊನ್ನೆ ಬಂದ ಬಚ್ಚಗಳ ಅಹಂಕಾರ ಭುಗಿಲೆದ್ದಿದ್ದು ಬಿಜೆಪಿ ಯಲ್ಲಿ ಯಾವುದು ಸರಿ ಇಲ್ಲದಂತಾಗಿದೆ. ಕಳೆದ ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರು ಮೂಲೆ ಗುಂಪಾಗಿದ್ದು ಇತ್ತೀಚಿನ ದಿನಗಳಲ್ಲಿ ಸಂಸದರಿಗೆ ಬೇಡಿಕೆ ಕಡಿಮೆ ಆಗಿದೆ ಎಂಬುದು ಬಿಜೆಪಿಯ ಬಲ್ಲ ಮೂಲಗಳಿಂದ ಮಾಹಿತಿ ದೊರೆತಿದೆ.

ರಾಜಕೀಯ ದಲ್ಲಿ ಅನುಭವವಿಲ್ಲದೆ ಹಣ ಬಲ ಹಾಗೂ ಹಿಂದುತ್ವದ ಬಲದಿಂದ ಚುನಾವಣೆಯಲ್ಲಿ ಗೆದ್ದು ಹಗೆಯ ಮೂಲಕ ಬಣ ರಾಜಕೀಯದಲ್ಲಿ ಚೇಲಗಳನ್ನು ಮುಂದಿಟ್ಟು ಇಂತಹ ಕೆಲಸ ಕಾರ್ಯಮಾಡುತ್ತಿದ್ದರೆಂದು ಬಿಜೆಪಿಯಾ ನಿಷ್ಠಾವಂತ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ .

ಕುಡ್ಲ ಸಂಸ್ಕೃತಿ ಪ್ರತಿಷ್ಠಾನದ ಸ್ಟ್ರೀಟ್ ಫುಡ್ ಫೆಸ್ಟ್ ನಡೆಯುತ್ತಿದ್ದು ಜನಪ್ರಿಯ, ಪ್ರಭಾವಿ ಬಿಜೆಪಿ ನಾಯಕ, ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಜನಸ್ನೇಹಿ ಶಾಸಕ ವೇದವ್ಯಾಸ ಕಾಮತ್ ಅವರ ಮುಂದಾಳತ್ವದಲ್ಲಿ ಅತ್ಯುತ್ತಮ ಕಾರ್ಯಕ್ರಮ ಸಂಯೋಜನೆಗೊಂಡಿದ್ದು, ಶಾಸಕ ವೇದವ್ಯಾಸ ಕಾಮತ್ ಅವರ ಆಹ್ವಾನದ ಮೇರೆಗೆ ಕಾರ್ಯಕ್ರಮದ ಸ್ಥಳಕ್ಕೆ ಹಾಲಿ ಸಂಸದ ಕ್ಯಾ‌. ಬ್ರಿಜೇಶ್ ಚೌಟ ಬಂದಿದ್ದರು.ಆದರೆ ಸಂಘಟಕರು, ಶಾಸಕರು ಎಷ್ಟೇ ಕರೆದರು ಒತ್ತಾಯ ಮಾಡಿದರೂ ವೇದಿಕೆ ಮೇಲೇರಿ ಸ್ಮರಣಿಕೆಯೊಂದನ್ನು ಮಂಗಳೂರಿನ ಜನತೆಯ ಪ್ರತಿನಿಧಿಯಾಗಿರುವ ಸಂಸದರಿಗೆ ನೀಡಲು ಮುಂದಾದಗ ನಿರಾಕರಿಸುತ್ತಿದ್ದರು. ಇದು ಅಲ್ಲಿ ಸೇರಿದ್ದ ಸ್ಥಳೀಯ ಬಿಜೆಪಿ ಮುಖಂಡರೂ ಸೇರಿದಂತೆ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸುವಂತೆ ಮಾಡಿತ್ತು, ಮಾಜಿ ಸಂಸದರ ನೇತೃತ್ವದ ಕಾರ್ಯಕ್ರಮ ಎಂದು ಹಾಲಿ ಸಂಸದರು ನಿರಾಕರಣೆ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಮಾಡುವಂತೆ ಮಾಡಿತ್ತು, ಅಷ್ಟರಲ್ಲಿ ಸಂಸದರ ಜೊತೆ ಇದ್ದ ಪುಡಿ ರಾಜಕೀಯ ಪುಡಾರಿಯಂತೆ ಫೋಸ್ ಕೊಡುವ ಸಾಕ್ಷತ್ ಶೆಟ್ಟಿ ಕಾವೂರು ಎಂಬ ಬ್ರಿಜೇಶ್ ಬಣದ ವ್ಯಕ್ತಿಯೊಬ್ಬ ಶಾಸಕರ ಕುರಿತೇ ನೇರವಾಗಿ ಹಿಯಾಳಿಸಿ, ಮೂದಲಿಸಿ, ಅವಾಚ್ಯ ಶಬ್ದದಲ್ಲಿ ನಿಂದಿಸಿದ ಘಟನೆ ನಡೆಯಿತು.ಈ ವಿಡಿಯೋ ಮಾಧ್ಯಮದ ಬಳಿ ದೊರಕಿದ್ದು ವೈರಲ್ ಆಗಿದೆ.

ಹಿರಿಯ ಕಾರ್ಯಕರ್ತರನ್ನು ಮೂಲೆಗುಂಪುಮಾಡಿ ಮೊನ್ನೆ ಮೊನ್ನೆ ಬಂದ ಚೇಲಗಳನ್ನು ಮುಂದಿಟ್ಟು ಸಂಸದರು ಈ ರೀತಿ ನಡೆಯುವುದು ಬೇಸರದ ಸಂಗತಿ. ಜೊತೆಯಲ್ಲಿ ಇರುವವರ ದುರ್ಹಾಹಂಕಾರದ ವರ್ತನೆಯಿಂದ ಸಂಸದರು ಶರಣಾಗಿದ್ದು ಇಡೀ ಜಿಲ್ಲೆಯೇ ತಲೆತಗ್ಗಿಸುವಾತಾಗಿದೆ. ವಿಪರ್ಯಾಸವೆಂದರೆ ಜೊತೆಗೆ ಆತನನ್ನು ಕರೆದುಕೊಂಡು ಬಂದ ಬಿಜೆಪಿ ಸಂಸದ ಕ್ಯಾ. ಬ್ರಿಜೇಶ್ ಔಟ ತಮ್ಮದೇ ಪಕ್ಷದ ಹಿರಿಯ ಶಾಸಕರೊಬ್ಬರಿಗೆ ತನ್ನ ಮುಂದೆಯೇ ನಿಂದಿಸುತ್ತಿದ್ದಾಗ ಕೈಕಟ್ಟಿ ನಿಂತಿದ್ದರು ಎಂಬುದು ಬಹಳಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕ್ಯಾ. ಚೌಟ ಬೇಕು ಬೇಕೆಂದೆ ಆತನ್ನು ಕರೆದುಕೊಂಡು ಬಂದು ಶಾಸಕರನ್ನು ಉದ್ದೇಶಪೂರ್ವಕವಾಗಿ ಅಪಮಾನ ಮಾಡಿದ್ರಾ ಎನ್ನುವ ಪಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.ಒಟ್ಟಿನಲ್ಲಿ ರಾಜ್ಯದಲ್ಲಿ ಬಣಗಳ ಒಡೆದಾಟದ ಜೋರಾಗಿದು ಇದೀಗ ದ.ಕ ಜಿಲ್ಲೆಯಲ್ಲೂ ಮೊನ್ನೆ ಮೊನ್ನೆ ಬಂದ ಪುಂಡರ ಒಡೆದಾಟ ಜೋರಾಗಿದೆ.ಒಟ್ಟಿನಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟರ ಬಣ ಇದಕ್ಕೆ ಸರಿಯಾಗಿ ಪ್ರತಿಕ್ರಿಯೆ ನೀಡದಿದ್ದರೆ ಮುಂದೊಂದು ದಿನ ಈ ಅಬ್ಬೆಪ್ಪಾರಿಗಳಿಂದ ಹಿಂದುತ್ವದ ಭದ್ರಕೋಟೆ ಚಿಂದಿಯಾಗಲಿದೆ ಎಂದು ಬಿಜೆಪಿ ನಿಷ್ಠಾವಂತ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular