Thursday, November 6, 2025
Flats for sale
Homeಜಿಲ್ಲೆಮಂಗಳೂರು : ಸೆ. 17 ರಂದು ಸ್ವರ ಕುಡ್ಲ ಸೀಸನ್ 7 ಗ್ರಾಂಡ್ ಫಿನಾಲೆ ಮತ್ತು...

ಮಂಗಳೂರು : ಸೆ. 17 ರಂದು ಸ್ವರ ಕುಡ್ಲ ಸೀಸನ್ 7 ಗ್ರಾಂಡ್ ಫಿನಾಲೆ ಮತ್ತು ವಾರ್ಷಿಕೋತ್ಸವ…!

ಮಂಗಳೂರು ; 2007ರಲ್ಲಿ ಅಸ್ತಿತ್ವಕ್ಕೆ ಬಂದ ಈ ನಮ್ಮ ಸಂಘಟನೆಯು ಗಾಯಕರು ಹಾಗೂ ಹಿನ್ನೆಲೆ ವಾದಕರು ಸೇರಿ ಸುಮಾರು 350ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡ ನೋಂದಾಯಿತ ಸಂಸ್ಥೆಯಾಗಿದೆ. ಸಂಗೀತ ಕಲಾಕ್ಷೇತ್ರದ ಅಶಕ್ತ ಕಲಾವಿದರಿಗೆ ಆರ್ಥಿಕ ನೆರವು, ಕಲಾ ಸಾಧಕರಿಗೆ ಪ್ರಶಸ್ತಿ ಪ್ರಧಾನ, ಯುವಪ್ರತಿಭೆಗೆ ಅಭಿನಂದನಾ ಪುರಸ್ಕಾರಮತ್ತು ಸಂಗೀತ ಪ್ರತಿಭಾನ್ವೇಷಣೆ ಮುಂತಾದ ಧೈಯಗಳಲ್ಲಿ ಮುನ್ನಡೆದು ಮತ್ತಷ್ಟು ಸಾಮಾಜಿಕ ಕಳಕಳಿಯಿಂದ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ ಇವುಗಳ ಮೂಲಕ ಕರಾವಳಿಯ ಸಂಗೀತ ಪರಂಪರೆಯನ್ನು ಉಳಿಸಿ ಬೆಳೆಸುವುದು ನಮ್ಮಗುರಿ ಮತ್ತು ಧೈಯವಾಗಿರುತ್ತದೆ ಎಂದು ಅಧ್ಯಕ್ಷರಾದ ಕೇಶವ ಕನಿಲ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದೀಗ 18ನೇವಾರ್ಷಿಕ ಸಮಾರಂಭದ ಪ್ರಯುಕ್ತ ಸೆಪ್ಟೆಂಬರ್ 17 ಮಧ್ಯಾಹ್ನ 2.00ಕ್ಕೆ ನಗರದ ಕುದ್ಮುಲ್‌ ರಂಗರಾವ್ ಪುರಭವನದಲ್ಲಿ ಸ್ವರ ಕುಡ್ಲ ಗ್ರಾಂಡ್ ಫಿನಾಲೆ ಹಾಗೂ ವಾರ್ಷಿಕ ಸಮಾರಂಭ, ಪ್ರಶಸ್ತಿ ಪ್ರಧಾನ, ಅಭಿನಂದನಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ಕಾರ್ಯಕ್ರಮ ಜರಗಲಿದೆ. ಅಂದಿನ ಸಭೆಯ ಉದ್ಘಾಟನೆಯನ್ನು ಹೇರಂಭಾ ಇಂಡಸ್ಟ್ರೀಸ್‌ಮುಂಬೈ ಇದರ ಅಧ್ಯಕ್ಷರಾದ ಡಾ. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ನಡೆಸಿಕೊಡಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಶ್ರೀಕೇಶವ ಕನಿಲ ವಹಿಸಲಿದ್ದಾರೆ,ಮುಖ್ಯ ಅತಿಥಿಗಳಾಗಿ ಶ್ರೀ ಶಶಿಧರ ಶೆಟ್ಟಿ ಉದ್ಯಮಿ ಗುಜರಾತ್‌ ಬರೋಡ, ಶ್ರೀಮಹೇಶ್‌ ಕುಮಾರ್‌ ಡಿ.ವೈ.ಎಸ್.ಪಿ. ವಿರಾಜ್‌ಪೇಟೆ, ಶ್ರೀವಾಲ್ವರ್‌ನಂದಳಿಕೆ ಸ್ಥಾಪಕರು ದೈಜಿವರ್ಲ್ಡ್‌ ಸಮೂಹಸಂಸ್ಥೆ ಶ್ರೀ ಲಾರೆನ್ಸ್‌ ಡಿಸೋಜಾ ನಿರ್ದೇಶಕರು ದೈಜಿವರ್ಲ್ಡ್ ಸಮೂಹಸಂಸ್ಥೆ ಶ್ರೀಸಿ.ಎ. ಎಸ್. ಎಸ್.ನಾಯಕ್‌ ನಿರ್ದೇಶಕರು ಹಾಗೂ ನಿರೂಪಕರು ನಮ್ಮ ಕುಡ್ಲ ಶ್ರೀಮೊಹಮ್ಮದ್ ಅಯಾಜ್ ರೈಟ್‌ ಚಾಯ್ಸ್ ಇಂಡಸ್ಟ್ರಿಯಲ್ ಅಲ್-ಜುಬೈಲ್ ಕೆ.ಎಸ್.ಎ.ಶ್ರೀ ಚಂದ್ರಶೇಖರ್‌ಶೆಟ್ಟಿ ಕುಕ್ಕುಂದೂರ್‌ ವಚನಹಾಸ್ಪಿಟಾಲಿಟಿ ಮುಂಬೈ, ಶ್ರೀನಾಗೇಂದ್ರ ಬಾಳಿಗ ಉದ್ಯಮಿವಿ.ಏನ್.ಆರ್. ಗೋಲ್ಡ್‌ಬಂಟ್ವಾಳ, ಸತೀಶ್‌ಕುಮಾರ್‌ ಬಜಾಲ್‌ ಅಧ್ಯಕ್ಷರು ಸೌದಿ ಬಿಲ್ಲವಾಸ್‌ ದಮ್ಮಾಮ್‌ ಸೌದಿ ಅರೇಬಿಯಾ,ಶ್ರೀಮಾಧವ ಬಿ.ಎಂ. ಅಧ್ಯಕ್ಷರು ಭಗವತಿ ಸಹಕಾರ ಬ್ಯಾಂಕ್‌ ನಿಯಮಿತ ಮಂಗಳೂರು, ಶ್ರೀ ಕೆ ಆರ್‌ ಜಯಾನಂದ ಅಧ್ಯಕ್ಷರು ಕೇರಳ ತುಳು ಅಕಾಡೆಮಿ, ಶ್ರೀಜಗದೀಶ್ ಶೆಟ್ಟಿ ಬೋಳೂರು ನಿರ್ದೇಶಕರು ಸಾನಿಧ್ಯ ರೆಸಿಡೆನ್ಸಿಯಲ್‌ ಸ್ಕೂಲ್‌ ಶಕ್ತಿನಗರ, ಶ್ರೀಗಿರೀಶ್‌ ಆಳ್ವಮೊರ್ಲಾ ತೌಡಗೋಳಿ ಉದ್ಯಮಿ,ಶ್ರೀ ಪ್ರಶಾಂತ್‌ ಲಕ್ಷ್ಮಣ್‌ನಾಯಕ್‌ ರೀಜನಲ್‌ ಮ್ಯಾನೇಜರ್‌ ಮುತ್ತೂಟ್‌ ಫೈನಾನ್ಸ್, ತುಳುನಾಡ ಕುಸಲ್ಲರಸೆ ದೀಪಕ್ ರೈಪಾಣಾಜೆ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಸಂಗೀತ ಕ್ಷೇತ್ರದ ಹಿರಿಯ ಕಲಾ ಸಾಧಕರಾದ ಶ್ರೀತೊನ್ಸೆಪುಷ್ಕಳ ಕುಮಾರ್, ಶ್ರೀಹನೀಫ್ ಪರ್ಲಿಯಾ,ಶ್ರೀ ಐವನ್‌ಸೀರಾ ಇವರಿಗೆ “ಕರಾವಳಿ ಸಂಗೀತ ಕಲಾರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.ಈ ಸಂದರ್ಭದಲ್ಲಿ
ಸ್ವರ ಕುಡ್ಲ ಗ್ರಾಂಡ್‌ ಫಿನಾಲೆ ವಿಜೇತರಿಗೆ ಪ್ರಶಸ್ತಿ ಪ್ರದಾನ ಮತ್ತು ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಸದಸ್ಯರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಸ್ವರ ಕುಡ್ಲ ಸೀಸನ್ 7ಗ್ರಾಂಡ್ ಫಿನಾಲೆ ಇದರ ಪೂರ್ವಬಾವಿಯಾಗಿ ಸ್ವರ ಕುಡ್ಲ ಆಡಿಷನ್ ಮತ್ತು ಸೆಮಿಫೈನಲ್‌ ರೌಂಡ್ಸ್‌ ನಗರದ ಬಿಇಎಂ ಹೈಸ್ಕೂಲ್ ಕಾರ್‌ಸ್ಟ್ರೀಟ್‌ ಮಂಗಳೂರು ಇಲ್ಲಿ ತಾರೀಕು 14ನೇ ರವಿವಾರದಂದು ಬೆಳಿಗ್ಗೆ 9.30ರಿಂದಮುಕ್ತ ಅವಕಾಶದೊಂದಿಗೆ ಪ್ರಾರಂಭಗೊಳ್ಳಲಿದೆ.

ಪತ್ರಿಕಾಗೋಷ್ಠಿಯಲ್ಲಿ ಕೋಶಾಧಿಕಾರಿ ಶ್ರೀಮತಿ ಹರಿಣಿ ಉದಯ್ H, ಪ್ರಧಾನ ಕಾರ್ಯದರ್ಶಿ ಶ್ರೀರಾಮ್ ಕುಮಾರ್‌ ಅಮೀನ್,ನಿಕಟ ಪೂರ್ವಅಧ್ಯಕ್ಷರು ದೀಪಕ್‌ ರಾಜ್‌ ಉಳ್ಳಾಲ್, ಮಾಜಿ ಅಧ್ಯಕ್ಷರು ಶ್ರೀಇಕ್ವಾಲ್‌ ಕಾಟಿಪಳ್ಳ ಮೊಹಮ್ಮದ್,ಮಾಜಿ ಅಧ್ಯಕ್ಷರು ಶ್ರೀಮುರಳೀಧರ ಕಾಮತ್ ರವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular