Thursday, November 6, 2025
Flats for sale
Homeಜಿಲ್ಲೆಮಂಗಳೂರು : ಸೆ.15 ರಂದು ಕದ್ರಿ ಕ್ರಿಕೆಟರ್ಸ್‌ನಿಂದ 16 ನೇ ವರ್ಷದ ‘ಸ್ಟಾರ್ ನೈಟ್-’ ಕಾರ್ಯಕ್ರಮ…!

ಮಂಗಳೂರು : ಸೆ.15 ರಂದು ಕದ್ರಿ ಕ್ರಿಕೆಟರ್ಸ್‌ನಿಂದ 16 ನೇ ವರ್ಷದ ‘ಸ್ಟಾರ್ ನೈಟ್-’ ಕಾರ್ಯಕ್ರಮ…!

ಮಂಗಳೂರು : ಕದರಿಕಾ ಚಾರಿಟೇಬಲ್ ಟ್ರಸ್ಟ್ (ರಿ) ಇದರ ಅಂಗ ಸಂಸ್ಥೆಯಾದ ಕದ್ರಿ ಕ್ರಿಕೆಟರ್ಸ್‌ (ರಿ) ಆಯೋಜಿಸುವ ಹದಿನಾರನೇ ವರ್ಷದ ಕದ್ರಿ ಸ್ಮಾರ್ ನೈಟ್ ಕಾರ್ಯಕ್ರಮವು ದಿನಾಂಕ 15/09/2025 ಸೋಮವಾರ, ಕದ್ರಿ ಮೊಸರು ಕುಡಿಕೆ ಉತ್ಸವದ ಸಂದರ್ಭದಲ್ಲಿ ಸಂಜೆ 6ರಿಂದ ಕದ್ರಿ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಕದ್ರಿ ಮನೋಹರ್ ಶೆಟ್ಟಿ ಅವರು ತಿಳಿಸಿದ್ದಾರೆ

ಈ ಬಾರಿ ಖ್ಯಾತ ಹಿನ್ನೆಲೆ ಗಾಯಕ ಶ್ರೀ ರಾಜೇಶ್ ಕೃಷ್ಣನ್, ಕನ್ನಡ ಸಿನಿಮಾ ನಟಿ ನಿಮಿಕ ರತ್ನಾಕರ್ ಹೆಸರಾಂತ, ಹಿನ್ನೆಲೆ ಗಾಯಕ ಶಶಾಂಕ್ ಶೇಷಗಿರಿ, ಜೀ ಸರಿಗಮಪ ಜೂರಿ ಶ್ರುತಿ ಪ್ರಹ್ಲಾದ್, ಹೆಸರಾಂತ ಹಿನ್ನೆಲೆ ಗಾಯಕ ಅನಿರುದ್ಧ ಶಾಸ್ತ್ರಿ ಬಹುಭಾಷಾ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಚಿತ್ರ ನಟ ರೂಪೇಶ್ ಶೆಟ್ಟಿ, ಇತ್ತೀಚಿಗೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿರುವ ಗಾಯಕ ಯಶವಂತ್ ಎಂ ಜಿ, ಭಾರತ ನಾಟ್ಯ ಕಲಾವಿದೆ ವಿಧುಷಿ ದೀಕ್ಷಾ ಹಾಗೂ ರೇಮೊನ ಭಾಗವಹಿಸಲಿದ್ದಾರೆ ಅಲ್ಲದೆ ಇತ್ತೀಚಿಗೆ ತೆರೆ ಕಂಡು ಯಶಸ್ವಿಯಾದ ಚಲನಚಿತ್ರ ಸು ಫುಮ್ ಸೊ ಚಿತ್ರದ ನಿರ್ದೇಶಕ ಜೆಪಿ ತೂಮಿನಾಡ್ ಸೇರಿ ಹಲವು ಕಲಾವಿದರು ಭಾಗವಹಿಸಲಿದ್ದಾರೆ ಅಲ್ಲದೆ ನಮ್ಮ ಸಂಸದರಾದ ಕ್ಯಾಪ್ಟನ್ ಶ್ರೀಬೃಜೇಶ್ ಚೌಟ ಮತ್ತು ಶಾಸಕರಾದ ಶ್ರೀ ವೇದವ್ಯಾಸ್ ಕಾಮತ ಶ್ರೀ ಡಾ ಭರತ್ ಶೆಟ್ಟಿ, ಶ್ರೀ ಕಿಶೋರ್ ಕುಮಾರ್ ಬೊಟ್ಯಾಡಿ , ಶ್ರೀಮಂಜುನಾಥ್ ಭಂಡಾರಿ, ಅದಾನಿ ಗ್ರೂಪ್ ಅಧ್ಯಕ್ಷರಾದ ಶ್ರೀಕಿಶೋರ್ ಶೆಟ್ಟಿ, ಉದ್ಯಮಿ ಶ್ರೀ ಡಾ ಪ್ರಕಾಶ್ ಶೆಟ್ಟಿ, ಶ್ರೀಡಾ ಏ ಜಿ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀಸತೀಶ್ ಕುಂಪಲ ಹಲವಾರು ಗಣ್ಯಾತಿ ಗಣ್ಯರು ಭಾಗವಹಿಸಲಿದ್ದು,ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ ಎಂದು ತಿಳಿಸಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಕಾರ್ಯದರ್ಶಿ ರಾಘವೇಂದ್ರ ಬರವತ್ತಾಯ, ಸದಸ್ಯರಾದ ಹೇಮಾನಂದ್ ಕೊಡೈಬೈಲ್, ತಾರಾನಾಥ ಶೆಟ್ಟಿ ಕದ್ರಿ, ಶರಣ್ ಕದ್ರಿ ಸುಜಿತ್ ಕದ್ರಿ ಪ್ರತೀಕ್ ಶೆಟ್ಟಿ ಕದ್ರಿ, ಸಂದೀಪ್ ರಾವ್, ಸುನಿಲ್ ಶೆಟ್ಟಿ ಕದ್ರಿ, ಸಚಿನ್, ರಬಿಕ್ ರೈ ಕದ್ರಿ, ಶ್ರವಣ್ ಕದ್ರಿ,ಸಹಾನ್ ಕದ್ರಿ ಅವಿನಾಶ್ ರೈ, ಶ್ರೀನಾಥ್ ಕದ್ರಿ ಮೊದಲಾದವರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular