Thursday, March 19, 2026
Flats for sale
Homeಜಿಲ್ಲೆಮಂಗಳೂರು ; ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ,ಬಜಪೆ ಪೋಲಿಸರ ಬಗ್ಗೆ ಹಲವು ಅನುಮಾನ,N.IA ತನಿಖೆಗೆ...

ಮಂಗಳೂರು ; ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ,ಬಜಪೆ ಪೋಲಿಸರ ಬಗ್ಗೆ ಹಲವು ಅನುಮಾನ,N.IA ತನಿಖೆಗೆ ವಹಿಸುವಂತೆ ಬಿಜೆಪಿ ಅಗ್ರಹ….!

ಮಂಗಳೂರು ; ಸುಹಾಸ್ ಶೆಟ್ಟಿ ಬೀಕರ ಹತ್ಯೆಗೆ ಸಂಬಂಧಿಸಿದಂತೆ ದ.ಕ ಜಿಲ್ಲಾ ಬಿಜೆಪಿ ಇಂದು ಎಲ್ಲಾ ಶಾಸಕರನ್ನು ಒಗ್ಗೂಡಿಸಿ ಪತ್ರಿಕಾಗೋಷ್ಠಿಯನ್ನು ನಡೆದಿದ್ದು ಈ ಪ್ರಕರಣವನ್ನು N.I.A ತನಿಖೆಗೆ ವಹಿಸುವಂತೆ ಅಗ್ರಹಿಸಿದೆ.

ಬಜಪೆ ಪೋಲಿಸ್ ಠಾಣ ವ್ಯಾಪ್ತಿಯಲ್ಲಿ ಅರೋಪಿಗಳು ಕಳೆದ ಹಲವು ದಿನಗಳಿಂದ ಸ್ಕೆಚ್ ರೂಪಿಸಿದ್ದು ಈ ಪ್ರಕರಣಕ್ಕೆ ಬಜಪೆ ಪೋಲಿಸ್ ಠಾಣೆಯ ಹಲವು ಸಿಬ್ಬಂದಿಗಳು ಅರೋಪಿಗಳಿಗೆ ಬಹಿರಂಗ ಬೆಂಬಲ ನಿಡುತ್ತಿದ್ದರೆಂದು ಆರೋಪ ಕೇಳಿಬಂದಿದೆ.

ಈ ಪ್ರಕರಣದಲ್ಲಿ ಹಲವು ಸಂಶಯ ವ್ಯಕ್ತವಾಗಿದ್ದು ಮೃಹ ಸುಹಾಶ್ ಶೆಟ್ಟಿಯ ಚಲನವಲನಗಳ ಮಾಹಿತಿ ನೀಡುತ್ತಿದ್ದತೆಂದು ಮಾಹಿತಿ ಬಲ್ಲಮೂಲಗಳಿಂದ ದೊರೆತಿದೆ.ಈ ಪ್ರಕರಣ ಆರೋಪಿಗಳ ಬಜಪೆ ಪೋಲಿಸ್ ಠಾಣೆಯಲ್ಲೇ ಬೀಡುಬಿಡುತ್ತಿದ್ದರೆಂದು ಪ್ರತ್ಯಕ್ಷದರ್ಶಿ ಒಬ್ಬರು ಮಾಹಿತಿ ನೀಡಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿಗಳನ್ನು ಫಿಕ್ಸ್ ಮಾಡಲಾಗಿದೆ ಎಂದು ಬಿಜೆಪಿ ಗಂಭೀರವಾಗಿ ಅರೋಪಿಸಿದ್ದಾರೆ.ಇಂದು ಮಂಗಳೂರಿಗೆ ಬೇಟಿ ನೀಡಿದ ಗೃಹ ಸಚಿವರು ಗೌಪ್ಯವಾಗಿ ಮುಸ್ಲಿಂ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆಂದು ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸತೀಶ್ ಕುಂಪಾಲ ಆಕ್ರೋಶ ಹೊರಹಾಕಿದ್ದಾರೆ.

ಬಜ್ಪೆಯ ಕಿನ್ನಿಪದವಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರ ಹತ್ಯೆಗೆ ಸಂಬಂಧಿಸಿದಂತೆ, ಮತೀಯವಾದಿಗಳು ಒಂದು ತಿಂಗಳ ಹಿಂದೆಯೇ ಕೊಲ್ಲುತ್ತೇವೆಂದು ಹಾಗೂ ಹತ್ಯೆಯ ನಂತರ ಫಿನಿಶ್ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವುದು ಪೊಲೀಸ್ ಇಲಾಖೆಯ ವೈಫಲ್ಯ ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹೇಗಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದು ಮತಾಂಧರ ಈ ಧೈರ್ಯಕ್ಕೆ ಕಾಂಗ್ರೆಸ್ ಸರ್ಕಾರದ ಪರೋಕ್ಷ ಸಹಕಾರವೇ ಕಾರಣವೆಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ ಸಮಾಜ ಕಾರ್ಯಕರ್ತನೊಬ್ಬನನ್ನು ಕಳೆದುಕೊಂಡಿರುವ ಈ ಸಂದರ್ಭದಲ್ಲಿ ರಾಜ್ಯದ ಗೃಹ ಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಓಲೈಕೆ ರಾಜಕಾರಣದ ಮುಂದುವರಿದ ಭಾಗವಾಗಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಹಿಂದೂ ನಾಯಕರನ್ನು ಕಡೆಗಣಿಸಿ ಕೇವಲ ಮುಸ್ಲಿಂ ಮುಖಂಡರ ಸಭೆ ನಡೆಸಿದ್ದಾರೆ. ಇವರು ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಸಚಿವರು ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಇಂತಹ ಹಿಂದೂ ವಿರೋಧಿ ಸರ್ಕಾರದಿಂದ ಸುಹಾಸ್ ಶೆಟ್ಟಿ ಸಾವಿಗೆ ನ್ಯಾಯ ಸಾಧ್ಯವಿಲ್ಲ. ಕೂಡಲೇ ಈ ತನಿಖೆಯನ್ನು ಎನ್.ಐ.ಗೆ ವಹಿಸಬೇಕು ಮತ್ತು ಪೊಲೀಸ್ ಇಲಾಖೆ ಸುಹಾಸ್ ಶೆಟ್ಟಿಯನ್ನು ಠಾಣೆಗೆ ಕರೆಸಿ ಯಾವುದೇ ಆಯುಧಗಳನ್ನು ಇಟ್ಟುಕೊಳ್ಳದೇ ತಿರುಗಾಡುವಂತೆ ಹೇಳಿದ ನಂತರವೇ ಈ ಕೊಲೆಯಾಗಿದ್ದು ಸರ್ಕಾರವೇ ಇದರ ನೇರ ಹೊಣೆಯನ್ನು ಹೊರಬೇಕು ಮತ್ತು ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಸ್ಪೀಕರ್ ಅವರಂತೂ ಪೊಲೀಸ್ ತನಿಖೆಗೂ ಮುನ್ನವೇ ಈ ಕೊಲೆ ಪ್ರಕರಣದಲ್ಲಿ ಫಾಸಿಲ್ ಕುಟುಂಬದ ಕೈವಾಡವಿಲ್ಲ, ಇದೊಂದು ಕೇವಲ ಗ್ಯಾಂಗ್ ವಾರ್ ಎಂದು ಹೇಳಿದ್ದು ಇದೀಗ ಫಾಜಿಲ್ ಸಹೋದರನೇ ಈ ಕೊಲೆಯ ಸೂತ್ರಧಾರಿ ಎಂಬುದು ಬಹಿರಂಗವಾಗಿದ್ದು ಸ್ಪೀಕರ್ ರವರು ಆತ್ಮ ವಿಮರ್ಶೆ ಮಾಡಿಕೊಳ್ಳಲಿ. ಗೃಹ ಸಚಿವರು ಜಿಲ್ಲೆಯಲ್ಲಿ Anti ಕಮ್ಯುನಲ್ ಫೋರ್ಸ್ ಪ್ರಾರಂಭಿಸುವುದಾಗಿ ಹೇಳಿದ್ದು ವಾಸ್ತವದಲ್ಲಿ ಇದು ಹಿಂದೂಗಳನ್ನೇ ಗುರಿಯಾಗಿಸಿಕೊಳ್ಳುವ Anti ಹಿಂದೂ ಫೋರ್ಸ್ ಆಗಲಿದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular