Tuesday, March 17, 2026
Flats for sale
Homeಜಿಲ್ಲೆಮಂಗಳೂರು ; ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ,8 ಜನರ ಬಂಧನ….!

ಮಂಗಳೂರು ; ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ,8 ಜನರ ಬಂಧನ….!

ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆಗೆ ಸಂಭಂದಿಸಿದಂತೆ ಮಂಗಳೂರು ಪೋಲಿಸರು 8 ಜನರನ್ನು ಬಂಧಿಸಿದ್ದಾರೆ.

ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಸುದ್ದಿಗೋಷ್ಠಿ ನಡೆಸಿದ್ದು ಒಟ್ಟು 8 ಜನರನ್ನು ಬಂಧಿಸಿದ್ದು ಇನ್ನೂ 2 ಜನರ ಬಂಧನವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಬಂಧಿತರನ್ನು ಮಂಗಳೂರು ಮೂಲದ ಅಬ್ದುಲ್ ಸಫ್ವಾನ್(29) ನಿಯಾಜ್(28), ಮೊಹಮ್ಮದ್ ಮುಝುಮಿಲ್(32), ಕಲಂದರ್ ಶಾಫಿ(31), ಮೊಹಮ್ಮದ್ ರಿಜ್ವಾನ್(28) ಆದಿಲ್ ಮೆಹರೂಫ್ ಚಿಕ್ಕಮಗಳೂರು ಮೂಲದ ರಂಜಿತ್(19) ನಾಗರಾಜ್(2೦) ಎಂದು ತಿಳಿದಿದೆ.

ಆರು ಜನ ಸೇರಿ ಸುಹಾಸ್ ಶೆಟ್ಟಿ ಮೇಲೆ ಹತ್ಯೆನಡೆಸಿದ್ದು ಪ್ರಮುಖ ಆರೋಪಿ ಸಫ್ವಾನ್ ಎಂದು ಗುರುತಿಸಲಾಗಿದೆ. ಸಫ್ವಾನ್ ಮೇಲೆ 2023 ರ ಮೇಲೆ ಮಾರಣಾಂತಿಕ ಹಲ್ಲೆಯಾಗುತ್ತದೆ

ಪ್ರಶಾಂತ್ ,ಧನರಾಜ್ ಸುಹಾಸ್ ಶೆಟ್ಟಿ ಸ್ನೇಹಿತ ರಾಗಿದ್ದು ಸಫ್ವಾನ್ ಗೆ ಸುಹಾಸ್ ಕೊಲೆ ಮಾಡುವ ಆತಂಕ ಇತ್ತು ಎಂದು ತಿಳಿದಿದೆ. ಈ ಹಿನ್ನಲೆ ಸುಹಾಸ್ ನ್ನು ಕೊಲೆ ಮಾಡಲು ತೀರ್ಮಾನ ಮಾಡಲಾಗಿದ್ದು ಫಾಝೀಲ್ ನ ತಮ್ಮನನ್ನು ಸಂಪರ್ಕಿಸಿ ಕೊಲೆ ಮಾಡೋಕೆ ತೀರ್ಮಾನ ಮಾಡುತ್ತಾರೆ.ಸುಹಾಸ್ ಕೊಲೆ ಗೆ ಐದು ಲಕ್ಷ ರೂಪಾಯಿ ಆದಿಲ್ ಸಫ್ವಾನ್ ತಂಡಕ್ಕೆ ನೀಡಿದ್ದು ನಿಯಾಜ್ ನ ಇಬ್ಬರು ಸ್ನೇಹಿತರು ನಾಗಾರಾಜ್,ಮತ್ತು ರಂಜಿನ್ ನ್ನು ಸಂಪರ್ಕ ಮಾಡುತ್ತಾರೆ. ಈ ಇಬ್ಬರು ಸಫ್ವಾನ್ ಮನೆಯಲ್ಲಿ ಎರಡು ದಿನಗಳಿಂದ ವಾಸ ಮಾಡುತ್ತಿದ್ದು ಮೇ ೧ ರಂದು ಸುಹಾಸ್ ಚಲನವಲನಗಳನ್ನು ಗಮನಿಸಿ ಕೊಲೆ ಮಾಡಿದ್ದಾರೆ ಎಂದು ನಗರ ಪೋಲಿಸ್ ಆಯುಕ್ತರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular