Saturday, November 23, 2024
Flats for sale
Homeಜಿಲ್ಲೆಮಂಗಳೂರು ; ಸಾಮಾಜಿಕ ಜಾಲತಾಣದಲ್ಲಿ ವಿಧ್ಯಾರ್ಥಿಗಳಿಗೆ ಮಧ್ಯ ಸೇವಿಸಲು ಉತ್ತೇಜಿಸುವ ಪೋಸ್ಟರ್ ವೈರಲ್, ಪಬ್...

ಮಂಗಳೂರು ; ಸಾಮಾಜಿಕ ಜಾಲತಾಣದಲ್ಲಿ ವಿಧ್ಯಾರ್ಥಿಗಳಿಗೆ ಮಧ್ಯ ಸೇವಿಸಲು ಉತ್ತೇಜಿಸುವ ಪೋಸ್ಟರ್ ವೈರಲ್, ಪಬ್ ಮಾಲಿಕರ ವಿರುದ್ಧ F.I.R ದಾಖಲು.

ಮಂಗಳೂರು ; ಕಳೆದ ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮಂಗಳೂರಿನ ದೇರೆಬೈಲ್‌ನಲ್ಲಿರುವ ಹೋಟೆಲ್ ಲಾಲ್‌ಬಾಗ್ ಇನ್ (ಲಿಕ್ವಿಡ್ ಲಾಂಜ್ ಬಾರ್) ನಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಪಾನ ಮಾಡಲು ಉತ್ತೇಜಿಸುವ ಪೋಸ್ಟರ್ ಹರಿದಾಡುತ್ತಿರುವ ಹಿನ್ನೆಲೆ ಹೆಚ್ಚೆತ್ತ ಅಬಕಾರಿ ಇಲಾಖೆ ಬಾರ್ ಮಾಲಿಕರ ವಿರುದ್ಧ FIR ದಾಖಲಿಸಿದೆ.

ಈ ಪೋಸ್ಟರ್ ಸಾಜಾಜಿಕ ಜಾಲತಾಣದದಲ್ಲಿ ವೈರಲ್ ಆಗಿದ್ದು ಇದರಿಂದ ವಿಧ್ಯಾರ್ಥಿಗಳ ಪೋಷಕರು ಹಾಗೂ ಸಾರ್ವಜನಿಕರು ರೊಚ್ಚಿಗೆದ್ದಿದ್ದರು.ಈ ಬಗ್ಗೆ ಹೆಚ್ಚೆತ್ತ ಪೋಲಿಸ್ ಇಲಾಖೆಯ ಸೂಚನೆಯ ಮೇರೆಗೆ ಹಾಗೂ ಅಬಕಾರಿ ಇಲಾಖೆ ಕರ್ನಾಟಕ ಅಬಕಾರಿ ಕಾಯ್ದೆ, 1965 ಮತ್ತು ಪರವಾನಗಿ ನಿಬಂಧನೆಗಳ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಷರತ್ತುಗಳ ಉಲ್ಲಂಘನೆಯಾದ ಪರಿಣಾಮವಾಗಿ, ಅಬಕಾರಿ ಇಲಾಖೆಯು Cr No 5/2024-25/1503DySE/150309 ರಲ್ಲಿ ಕರ್ನಾಟಕ ಅಬಕಾರಿ ಕಾಯಿದೆ, 1965 ರ u/s 36 ಕಾಯಿದೆ ಅನ್ವಯ ಬಾರ್ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿದೆ.

ಮಂಗಳೂರು ನಗರ ಪೊಲೀಸರು ಬಾರ್ ಮತ್ತು ಪಬ್‌ಗಳಲ್ಲಿ ಇಂತಹ ಚಟುವಟಿಕೆಗಳನ್ನು ತಡೆಯಲು ಪೋಲಿಸ್ ಇಲಾಖೆ ಬದ್ಧರಾಗಿದ್ದು ಅದರಂತೆ ನಿನ್ನೆ ಪೊಲೀಸರಿಂದ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಭವಿಷ್ಯದಲ್ಲಿ ಇಂತಹ ಉಲ್ಲಂಘನೆಗಳನ್ನು ತಡೆಗಟ್ಟಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು ಅಂತಹ ಅಭ್ಯಾಸಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ನಗರ ಪೋಲಿಸ್ ಆಯುಕ್ತರು ಎಲ್ಲಾ ಠಾಣೆಗಳಿಗೆ ಸೂಚನೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular