ಮಂಗಳೂರು ; 72ನೇ ಅಖಿಲ ಭಾರತ ಸಹಕಾರ ಸಪ್ತಾಹಕಾರ್ಯಕ್ರಮವು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಸಭಾ ಸ್ಪೀಕರ್ ಯುಟಿ ಖಾದರ್ ಮಾತನಾಡಿ, ಸಹಕಾರ ಕ್ಷೇತ್ರ ಇಂದು ಸಮಾಜದ ಆರ್ಥಿಕತೆಗೆ ಬಲವನ್ನು ತುಂಬುವ ಪ್ರಯತ್ನವನ್ನು ಮಾಡ್ತಾ ಇದೆ. ಸಹಕಾರಿ ಕ್ಷೇತ್ರಗಳು ಇದ್ದರೆ ಮಾತ್ರ ಗ್ರಾಮೀಣ ಮಟ್ಟದಲ್ಲಿ ಸ್ವಾವಲಂಬನೆ , ಬಲಿಷ್ಟವಾದ ಸಮಾಜವನ್ನು ಕಟ್ಟಲು ಸಾಧ್ಯ. ಇಂದು ಜನರಿಗೆ ಬಹುಬೇಗನೆ ಆರ್ಥಿಕ ಸಹಾಯವನ್ನು ನೀಡುವಲ್ಲಿ ಸಹಕಾರಿ ಬ್ಯಾಂಕ್ ಗಳು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ದಕ್ಷಿಣ ಕನ್ನಡದ ಆರ್ಥಿಕತೆಯ ಬೆಳವಣಿಗೆಯಲ್ಲಿ ಈ ಬ್ಯಾಂಕ್ ಸಹಾಯ ಮಾಡಿದೆ. ಎಸ್ ಸಿ ಡಿಸಿಸಿ ಬ್ಯಾಂಕ್ ಅಧೀನದ ಕಾರ್ಖಾನೆಗಳು ಇಲ್ಲಿ ಸ್ಥಾಪನೆಯಾದರೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿದೆ ಎಂದರು.










ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿ ಮಾತನಾಡಿ, ಬ್ಯಾಂಕ್ ಮತ್ತು ಸಹಕಾರಿ ಸಂಸ್ಥೆಗಳ ನಡುವೆ ವ್ಯತ್ಯಾಸವಿದೆ. ಬ್ಯಾಂಕ್ ಗಳು ಕೇವಲ ಆರ್ಥಿಕ ಚಟುವಟಿಯನ್ನು ,ಲಾಭವನ್ನು ತಲೆಯಲ್ಲಿಟ್ಟು ಕೆಲಸ ಮಾಡುತ್ತದೆ ಆದರೆ ಸಹಕಾರಿ ಸಂಸ್ಥೆಗಳು ಜನರಿಗೆ ಸಹಕಾರಕ್ಕೆಂದೇ ಕಾರ್ಯವನ್ನು ನಡೆಸುತ್ತದೆ. ಈ ಸಹಕಾರಿ ಸಂಸ್ಥೆಗಳು ದೇಶದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ವಿದ್ಯಾಸಂಸ್ಥೆಗಳಿಗೆ, ಕೃಷಿ ವಾಣಿಜ್ಯ ಕ್ಷೇತ್ರಗಳಿಗೆ ನೀಡಿರುತ್ತದೆ. ಇಂದು 8.5 ಲಕ್ಷ ಸಹಕಾರಿ ಸಂಸ್ಥೆಗಳು ದೇಶದಲ್ಲಿದೆ. ಇವುಗಳ ಭಾರತದ ಸದೃಢ ಆರ್ಥಿಕತೆಗೆ ಸಹಕಾರಿಯಾಗಲಿದೆ ಎಂದರು .
ಬಳಿಕ ಮಾತನಾಡಿದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಅಧ್ಯಕ್ಷ ರಾಜೇಂದ್ರ ಕುಮಾರ್ ಇಂದು ಪ್ರತೀ ಹಳ್ಳಿ ಹಳ್ಳಿಗಳಿಗೂ ಹೋಗಿ ಜನರಿಗೆ ಆರ್ಥಿಕ ಸೇವೆಯನ್ನು ನೀಡುವ ಬ್ಯಾಂಕ್ ಎಂದರೆ ಅದು scdcc ಬ್ಯಾಂಕ್. ಆತ್ಮ ನಿರ್ಭರವಾದ ಭಾರತವನ್ನು ಕಟ್ಟುವಲ್ಲಿ ಈ ಸಹಕಾರ ಸಂಸ್ಥೆಗಳು ಮುಂಚೂಣಿಯ ಸ್ಥಾನದಲ್ಲಿ ನಿಲ್ಲುತ್ತದೆ. ಇತ್ತರೇ ವಾಣಿಜ್ಯ ಬ್ಯಾಂಕುಗಳಲ್ಲಿ ವಿವಾಹ ಸಾಲಕೆಂದು ಹೋದರೆ 1 ವರ್ಷ ಬೇಕಾಗುತ್ತೆ ಆದರೆ ನಮ್ಮ ಸಹಕಾರಿ ಬ್ಯಾಂಕ್ ಗಳಲ್ಲಿ ಅರ್ಥ ದಿನದಲ್ಲೇ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಇಂದು ಈ ಸಹಕಾರಿ ಬ್ಯಾಂಕ್ ನಿಂದ ಅನೇಕ ಜನರಿಗೆ ಸಹಕಾಯವಾಗಿದೆ. ಸಹಕಾರ ಸಂಘಗಳಿಗೆ ಸರಕಾರದಿಂದ ಇನ್ನಷ್ಟು ಸಹಕಾರವನ್ನು ಸಿಗಬೇಕೆಂದು ಅವರು ಕೇಳಿಕೊಂಡರು. ಆತ್ಮನಿರ್ಭರ ಭಾರತ ನಾಧನೆಗೆ ವಾಹಕಗಳಾಗಿ ನಹಕಾರ ಸಂಸ್ಥೆಗಳು” ಎಂಬ ಧೈಯವಾಕ್ಯದೊಂದಿಗೆ ಈ ಬಾರಿ ಆಚರಿಸಲಾಗುತ್ತಿದೆ ಎಂದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿ.ಬೆಂಗಳೂರಿನ ಅಧ್ಯಕ್ಷರಾದ ಜಿ.ಟಿ ದೇವೆಗೌಡ ಮಂಗಳೂರು ಈ ದೇಶಕ್ಕೆ ರಾಷ್ಟ್ರೀಕೃತ ಬ್ಯಾಂಕ್ ಗಳನ್ನು ಕೊಟ್ಟ ಊರು. ಇಲ್ಲಿ ಮೀನುಗಾರಿಗೆ, ಕೈಗಾರಿಕೆ, ಹೈನುಗಾರಿಗೆ, ಕೃಷಿ ಯಥೇಚ್ಛವಾಗಿದೆ. ಈ ವಲಯ ಬೆಳೆಯಬೇಕಾದರೆ ಒಂದು ಸುಸಜ್ಜಿತವಾದ ಸಹಕಾರಿ ಸಂಸ್ಥೆಗಳ ಅಗತ್ಯ ಇರುತ್ತದೆ. ಇಲ್ಲಿನ ಈ ಸಂಸ್ಥೆಗಳ ಅಭಿವೃದ್ಧಿಗೆ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಸಹಕಾರ ನೀಡಿದೆ. ಪ್ರಧಾನಿ ಇಂದಿರಾ ಗಾಂಧಿ ಯವರು ಇಲ್ಲಿಗೆ ಬಂದಾಗ ಮಂಗಳೂರಿನ ಜನರನ್ನು ಬುದ್ಧಿವಂತರ ಜಿಲ್ಲೆಯೆಂದು ಹೊಗಳಿದ್ದರು. ಇಂತಹ ಮಹಾನ್ ಬುದ್ಧಿವನಂತರಿಂದಲೇ ನಮ್ಮ ರಾಜ್ಯದ ಅಭಿವೃದ್ಧಿ ಆಗುತ್ತಿರುವುದು. ಸಹಕಾರ ಸಂಘದ ತತ್ವವು ಆತ್ಮ ನಿರ್ಭರವಾದ ಭಾರತವನ್ನು ಕಟ್ಟುವತ್ತ ಹೆಜ್ಜೆಹಾಕುತ್ತದೆ. ಸರ್ವರ ಏಳಿಗೆ ಸರ್ವರಿಗೆ ಸಮ ಪಾಲು ಎನ್ನುವ ನಂಬಿಕೆಯನ್ನೂ ಇದು ಇರಿಸಿದೆ. ಸಹಕಾರಿ ಕ್ಷೇತ್ರವು ಇನ್ನಷ್ಟು ಬೆಳೆಯಲಿ ಎಂದು ಅವರು ಆಶಿಸಿದರು.
ವೇದಿಕೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್,ಉಡಪಿ ಶಾಸಕ ಯಶ್ ಪಾಲ್ ಸುವರ್ಣ, ಎಂ.ಎಲ್.ಸಿ ಐವನ್ ಡಿಸೋಜ,ಎಂ.ಎಲ್.ಸಿ ಕಿಶೋರ್ ಕುಮಾರ್ ಬೊಟ್ಯಾಡಿ,ಡಾ.ಸುರೇಂದ್ರ ಬಾಬು,ರವಿತಾಜ್ ಹೆಗ್ಡೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.


