ಮಂಗಳೂರು ; ಮಂಗಳೂರು ಸೇರಿದಂತೆ ಕರ್ನಾಟಕದ ಕರಾವಳಿ ಭಾಗಗಳಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಕಾಯ್ದೆಯು ಮುಸ್ಲಿಂ ಸಮುದಾಯದ ಧಾರ್ಮಿಕ ಮತ್ತು ಆರ್ಥಿಕ ಹಕ್ಕುಗಳನ್ನು ಹಿಂಸುತ್ತಿದೆ ಎಂಬ ಆರೋಪಗಳೊಂದಿಗೆ, ವಿವಿಧ ಮುಸ್ಲಿಂ ಸಂಘಟನೆಗಳು ಮತ್ತು ರಾಜಕೀಯ ನಾಯಕರು ಪ್ರತಿಭಟನೆಗಳನ್ನು ಆಯೋಜಿಸಿದ್ದಾರೆ.
ಮಂಗಳೂರಿನ ಷಾ ಗಾರ್ಡನ್ ನಲ್ಲಿ ಬೃಹತ್ ಪ್ರತಿಭಟನೆ ಸಮಾವೇಶ ಇಂದು ನಡೆದಿದ್ದು ಸಮಾವೇಶದಲ್ಲಿ ಹೇ ವಖ್ಘ್ ಹಮಾರಿ ಅಜಾದೀ ಹೇ ಎಂದು ಮುಸ್ಲಿಮರು ಘೋಷಣೆ ಕೂಗಿದ್ದಾರೆ.ಕರ್ನಾಟಕದ ಉಲೇಮಾ ಸಂಘಟನೆಯ ನೇತೃತ್ವದಲ್ಲಿ ಈ ಶಕ್ತಿ ಪ್ರದರ್ಶನ ನಡೆದಿದ್ದು,ಲಕ್ಷಾಂತರ ಸಂಖ್ಯೆಯಲ್ಲಿ ಮುಸ್ಲಿಮರು ಜಮಾಯಿಸಿದ್ದಾರೆ.


