ಮಂಗಳೂರು ; ಈ ಮೂಡ ದಲ್ಲಿ ಇರುವವರೇ ಖದೀಮರು,ಹಣ ಬರುವ ಅಧಿಕಾರಿಗಳು ವರ್ಗಾವಣೆಯಾಗಲು 50 ಲಕ್ಷ ದಿಂದ 75 ಲಕ್ಷ ತನಕ ಇದೆ ಇದು ಕೇವಲ ಸರಕಾರಿ ನೌಕರರ ವರ್ಗದ ಮೇಲೆ ಇರುವುದು ಕೇವಲ ವರ್ಗಾವಣೆಗೆ ಭ್ರಷ್ಟಾಚಾರ ಮಾಡದ ಅಧಿಕಾರಿಗಳಿಂದ 15 ಲಕ್ಷ ಪಡೆಯುದರೆಂದರೆ ಸರಕಾರಿ ಭ್ರಷ್ಟಾಚಾರಿಗಳಿಗೆ ಇದೆಲ್ಲ ಸಾಮಾನ್ಯ ಆದರೆ ನಿಯತ್ತಾಗಿ ದುಡಿಯುವ ಜನಗಳಿಗೆ ಇದು ಕಷ್ಟಕರ.ಇದರಲ್ಲಿ ಎಲ್ಲಾ ರಾಜಕೀಯ ನಾಯಕರು ಶಾಮೀಲು ಎಂಬುದು ಎಲ್ಲರಿಗೂ ತಿಳಿದ ವಿಚಾರ.
ಮಂಗಳೂರಿನ ಮೂಡ ಅಂದರೆ ಖದೀಮರ ಸ್ವತ್ತು ಆದರೆ ಇಲ್ಲಿಗೆ ಬರುವವರು ಖದೀಮರ ಗುರುಗಳು ಎಂಬುದು ಜನಸಾಮನ್ಯರಿಗೆ ತಿಳಿದ ವಿಷಯ.ಇಂದು ಡಿವೈಎಸ್ಪಿ ಚೆಲುವರಾಜ್, ಇನ್ಸ್ಪೆಕ್ಟರ್ಗಳಾದ ಅಮಾನುಲ್ಲಾ, ಸುರೇಶ್ ಕುಮಾರ್ ನೇತೃತ್ವದ ಅಧಿಕಾರಿಗಳು ದಿಢೀರ್ ದಾಳಿ ಮಾಡಿ ಆಯುಕ್ತ ಮನ್ಸೂರ್ ಅಲಿಯನ್ನು ರೆಡ್ ಆ್ಯಂಡ್ ಆಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಬ್ರೋಕರ್ ಜೊತೆ ಡೀಲ್ ಮಾಡುತ್ತಿದ್ದ ಖದೀಮ ಮನ್ಸೂರ್ ಅಲಿಯನ್ನು ರೆಡ್ ಹ್ಯಾಂಡ್ ಹಾಗಿ ಹಿಡಿದಿದ್ದಾರೆ.
ಇಂದು ಮಂಗಳಾ ಕ್ರೀಡಾಂಗಣದ ಬಳಿ ಟಿಡಿಆರ್ ಕ್ಲಿಯರೆನ್ಸ್ ಮಾಡಲು ಉದ್ಯಮಿ ಗಿರಿಧರ್ ಶೆಟ್ಟಿ ಅವರಿಂದ 25 ಲಕ್ಷ ರೂ. ಲಂಚ ಪಡೆಯುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಮನ್ಸೂರ್ ಅಲಿ ಮತ್ತು ದಲ್ಲಾಳಿ ಸಲೀಂ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಈ ಉಪವಾಸದ ಸಮಯದಲ್ಲಿ ಈ ರೀತಿ ಭ್ರಷ್ಟಾಚಾರ ಮಾಡಿ ಹಣ ಸಂಗಹಿಸುವುದನ್ನು ದೇವರು ಕ್ಷಮಿಸುವುದಿಲ್ಲ ಎಂದು ಮುಸ್ಲಿಂ ಮುಖಂಡ ರೆಹಮಾನ್ ತಿಳಿಸಿದ್ದಾರೆ .
ಲೋಕಾಯುಕ್ತ ತಂಡ ಬೀಸಿದ ಬಲೆಯಲ್ಲಿ ಇಬ್ಬರೂ ಆರೋಪಿಗಳು ಲಂಚ ಸ್ವೀಕರಿಸಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅವರಿಂದ 25 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದ್ದು, ಸದ್ಯ ಪೊಲೀಸರು ವಶದಲ್ಲಿದ್ದಾರೆ.


