Friday, March 13, 2026
Flats for sale
Homeಜಿಲ್ಲೆಮಂಗಳೂರು : ರಾತ್ರಿ ಸುರಿದ ಮಳೆಗೆ ಭಾರೀ ಗಾತ್ರದ ಮರದ ಕೊಂಬೆ ಬಿದ್ದು 2 ವಾಹನಗಳು...

ಮಂಗಳೂರು : ರಾತ್ರಿ ಸುರಿದ ಮಳೆಗೆ ಭಾರೀ ಗಾತ್ರದ ಮರದ ಕೊಂಬೆ ಬಿದ್ದು 2 ವಾಹನಗಳು ಜಖಂ.

ಮಂಗಳೂರು : ಮಂಗಳವಾರ ರಾತ್ರಿ ಸುರಿದ ಭಾರೀ ಮಳೆ ಮತ್ತು ಗಾಳಿಯ ರಭಸಕ್ಕೆ ಮಂಗಳೂರಿನ ಕೋರ್ಟ್ ರೋಡ್ ರಸ್ತೆಯ ಬಳಿ ಬೃಹತ್ ಆಲದ ಮರದ ಕೊಂಬೆ ರಸ್ತೆಗೆ ಬಿದ್ದು ಎರಡು ವಾಹನಗಳು ಜಖಂಗೊಂಡಿವೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಘಟನೆಯಿಂದಾಗಿ ವಿದ್ಯುತ್ ಕೇಬಲ್‌ಗಳಿಗೂ ಹಾನಿಯಾಗಿದೆ. ಮೆಸ್ಕಾಂ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಸಮಸ್ಯೆ ನಿವಾರಿಸಿದರು. ಬಳಿಕ ರಸ್ತೆಯಲ್ಲಿದ್ದ ಮರದ ಕೊಂಬೆಗಳನ್ನು ತೆರವುಗೊಳಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular