ಮಂಗಳೂರು : ರಾಜ್ಯದಲ್ಲಿ ಗೌರಿ-ಗಣೇಶ ಹಬ್ಬದ ಸಡಗರ, ಉತ್ಸಾಹ ಮನೆ ಮಾಡಿದೆ. ಹಬ್ಬದ ಅಂಗವಾಗಿ ನಗರದ ಮಾರುಕಟ್ಟೆಗಳಲ್ಲಿ ಗಣೇಶ ಮೂರ್ತಿಗಳು, ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಮಾರಾಟ ಜೋರಾಗಿದೆ. ಚಿನ್ನದ ಆಭರಣಗಳ ಖರೀದಿಯಲ್ಲಿಯೂ ಮಹಿಳೆಯರು ಆಸಕ್ತಿ ತೋರಿಸುತ್ತಿದ್ದಾರೆ, ಏಕೆಂದರೆ ಚಿನ್ನ ಖರೀದಿಸಿದರೆ ಶುಭ ಎಂದು ನಂಬಲಾಗಿದೆ. ಇನ್ನು, ಕೆಎಸ್ಆರ್ಟಿಸಿ ರಾಜ್ಯ ಹಾಗೂ ನೆರೆ ರಾಜ್ಯಗಳಿಗೆ 1500 ಹೆಚ್ಚುವರಿ ಬಸ್ಗಳನ್ನು ಬಿಟ್ಟಿದೆ.ಮಾರುಕಟ್ಟೆಯಲ್ಲಿ ತರಹೇವಾರಿ ಮೂರ್ತಿಗಳು ಲಗ್ಗೆ ಇಟ್ಟಿದ್ದು, ಖರೀದಿ ಭರಾಟೆ ಜೋರಾಗಿ ನಡೆಯುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ವಿಘ್ನ ವಿನಾಶಕ, ಪ್ರಥಮ ಪೂಜಿತನ ಅದ್ದೂರಿ ಆಚರಣೆಗೆ ಜನರು ಬೇಕಾದ ಅಗತ್ಯ ಸಿದ್ದತೆಯಲ್ಲಿ ತೊಡಗಿದ್ದಾರೆ.
ಮಂಗಳೂರಿನಲ್ಲಿ ಕೂಡ ಸೆಂಟ್ರಲ್ ಮಾರುಕಟ್ಟೆ , ಕಾರ್ಸ್ಟ್ರೀಟ್ ಮಾರುಕಟ್ಟೆ,ಕಂಕನಾಡಿ ಹಾಗೂ ಇನ್ನೇತರ ಮಾರುಕಟ್ಟೆಯಲ್ಲಿ ಜನಜಂಗುಳಿ ತುಂಬಿ ತುಳುಕಿದೆ,ಹಣ್ಣು ಹಂಪಲು,ತರಕಾರಿ ,ಹೂವು ,ಮೂಡೆ ,ಕೊಟ್ಟಿಗೆ ಹಾಗೂ ಹಬ್ಬದ ಸಮಯದಲ್ಲಿ ಬಳಸುವ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ ಮಂಗಳೂರಿನ ವಿವಿಧ ಸಂಘಟನೆಗಳಿಂದ ಗಣಪತಿ ದೇವರನ್ನು ಇಂದು ಸಂಜೆ ಪ್ರತಿಸ್ಥಾಪನಾ ಕಾರ್ಯ ನಡೆಯಲಿದ್ದು ಸುರಿಯುವ ಜಡಿ ಮಳೆಯ ನಡುವೆಯೂ ಹಬ್ಬದ ಕೆಲಸ ಕಾರ್ಯಗಳು ಬರದಿಂದ ಸಾಗುತ್ತಿದೆ. ವರಮಹಾಲಕ್ಷ್ಮಿ ಹಬ್ಬದ ನಂತರ ಬರುವ ದೊಡ್ಡ ಹಬ್ಬ ಗೌರಿ – ಗಣೇಶ ಹಬ್ಬ. ಗೌರಿ ಗಣೇಶ ಹಬ್ಬವನ್ನ ಇಡೀ ರಾಜ್ಯಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಬಾರಿ ಹಣ್ಣುಗಳ ಬೆಲೆ ಅಷ್ಟಾಗಿ ಏರಿಕೆ ಕಂಡಿಲ್ಲ. ಆದ್ರೆ ಹೂವುಗಳ ಬೆಲೆ ಮಳೆ ಹಾಗೂ ಹಬ್ಬದಿಂದ ವಿಪರೀತ ಗಗನಕ್ಕೇರಿದೆ.
ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಜನತೆಗೆ ಗೌರಿ – ಗಣೇಶ ಹಬ್ಬದ ಹಾರ್ದಿಕ ಶುಭಾಶಯ ಕೋರಿದ್ದಾರೆ.ಜಲಚರಗಳಿಗೆ, ಪರಿಸರಕ್ಕೆ ಹಾನಿಕಾರಕವಾದ ರಾಸಾಯನಿಕಯುಕ್ತ ಗಣೇಶ ಮೂರ್ತಿಯ ಬದಲಿಗೆ ಮಣ್ಣಿನಿಂದಷ್ಟೇ ಮಾಡಿದ ಪರಿಸರಸ್ನೇಹಿ ಗಣೇಶನನ್ನು ಪೂಜಿಸೋಣ ಎಂದು ಕರೆ ನೀಡಿದ್ದಾರೆ. ಹಬ್ಬವನ್ನು ಸಂಭ್ರಮ – ಸಡಗರದೊಂದಿಗೆ ಆಚರಿಸುವ ಜೊತೆಗೆ ಪರಿಸರ ಕಾಳಜಿಯನ್ನು ಮರೆಯದಿರೋಣ. ವಿಘ್ನನಿವಾರಕನಾದ ಗಣೇಶನು ನಿಮ್ಮೆಲ್ಲಾ ಕಷ್ಟಗಳನ್ನು ಕಳೆದು ಸುಖ ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
ಹಬ್ಬದ ತಯಾರಿಗಳು:
ಗಣೇಶ ವಿಗ್ರಹಗಳ ಖರೀದಿ:
ಜನರು ಮಣ್ಣಿನ ಗಣೇಶನ ವಿಗ್ರಹಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದು, ವಿಧವಿಧವಾದ ಗಣೇಶ ಮೂರ್ತಿಗಳು ಮಾರುಕಟ್ಟೆಗಳಲ್ಲಿ ಲಭ್ಯವಿದೆ.
ಹೂವು, ಹಣ್ಣು ಮತ್ತು ಪೂಜಾ ಸಾಮಗ್ರಿಗಳ ಖರೀದಿ:
ಹಬ್ಬಕ್ಕೆ ಬೇಕಾದ ವಿವಿಧ ಬಗೆಯ ಹೂವು, ಹಣ್ಣುಗಳು ಮತ್ತು ಇತರ ಪೂಜಾ ಸಾಮಗ್ರಿಗಳನ್ನು ಜನರು ಭರ್ಜರಿಯಾಗಿ ಖರೀದಿಸುತ್ತಿದ್ದಾರೆ.
ಚಿನ್ನಾಭರಣಗಳ ಖರೀದಿ:
ಮಹಿಳೆಯರು ಚಿನ್ನದ ಮಾಂಗಲ್ಯ ಸರ ಸೇರಿದಂತೆ ಬೆಳ್ಳಿ, ಬಂಗಾರದ ಗೌರಿ, ಗಣೇಶನ ವಿಗ್ರಹಗಳನ್ನು ಖರೀದಿಸಲು ಆಭರಣ ಮಳಿಗೆಗಳಿಗೆ ಭೇಟಿ ನೀಡುತ್ತಿದ್ದಾರೆ.
ಮಾರುಕಟ್ಟೆಗಳಲ್ಲಿ ಸಂಭ್ರಮ:
ಬೆಂಗಳೂರಿನ ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ, ಗಾಂಧಿ ಬಜಾರ್, ಯಶವಂತಪುರ, ಚಿಕ್ಕಪೇಟೆ ಮುಂತಾದೆಡೆಗಳಲ್ಲಿ ಜನರ ಸಂಭ್ರಮ ಜೋರಾಗಿದೆ.
ಹಾವೇರಿಯ ಮಾರುಕಟ್ಟೆಗಳಲ್ಲೂ ಹೂವು, ಹಣ್ಣುಗಳ ಖರೀದಿ ಭರಾಟೆ ಜೋರಾಗಿದ್ದು, ವ್ಯಾಪಾರಿಗಳು ಹಬ್ಬದ ಸೀಸನ್ನಿಂದ ಉತ್ತಮ ವ್ಯಾಪಾರ ನಡೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸಾಂಸ್ಕೃತಿಕ ಮಹತ್ವ:
ಗೌರಿ ಗಣೇಶ ಹಬ್ಬವು ಧಾರ್ಮಿಕ ಸೌಹಾರ್ದತೆ ಮತ್ತು ಸಂತೋಷವನ್ನು ಸಾರುತ್ತದೆ. ಶ್ರಾವಣ ಮಾಸದಲ್ಲಿ ಬರುವ ಈ ಹಬ್ಬವು ಹಿಂದೂ ಸಂಸ್ಕೃತಿಯಲ್ಲಿ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಇದು ತಾಯಿ ಗೌರಿ ಮತ್ತು ಗಣೇಶನನ್ನು ಪೂಜಿಸುವ ಸಂಪ್ರದಾಯವನ್ನು ಒಳಗೊಂಡಿದೆ.