Thursday, March 12, 2026
Flats for sale
Homeಜಿಲ್ಲೆಮಂಗಳೂರು : ರಸ್ತೆ ಬದಿಯಲ್ಲಿ ಎಳನೀರಿನ ಚಿಪ್ಪುಗಳನ್ನು ರಾಶಿಹಾಕಿದ್ರೆ ಬೀಳುತ್ತೆ ದಂಡ.

ಮಂಗಳೂರು : ರಸ್ತೆ ಬದಿಯಲ್ಲಿ ಎಳನೀರಿನ ಚಿಪ್ಪುಗಳನ್ನು ರಾಶಿಹಾಕಿದ್ರೆ ಬೀಳುತ್ತೆ ದಂಡ.

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎಳನೀರು ಹಾಗೂ ಇನ್ನಿತರ ಬೀದಿ ಬದಿ ವ್ಯಾಪಾರಸ್ಥರು ರಸ್ತೆ ಬದಿ ತ್ಯಾಜ್ಯವನ್ನು ರಾಶಿ ಹಾಕಿದರೆ ಇನ್ನು ಮುಂದೆ ಬಾರಿ ಮೊತ್ತದ ದಂಡವನ್ನು ಪಾವತಿಸಬೇಕಾಗುತ್ತದೆ .

ಮಲೇರಿಯಾ ಡೆಂಗ್ಯೂ ಇನ್ನಿತರ ಮಾರಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಯುಕ್ತರ ಆದೇಶದಂತೆ ಸುರತ್ಕಲ್ ವಲಯ ಆಯುಕ್ತರ ಸೂಚನೆಯಂತೆ ಪಣಂಬೂರು ಹೆದ್ದಾರಿಯಲ್ಲಿ ಬೀದಿ ಬದಿಯ ಎಳನೀರು ಮಾರಾಟ ಗಾರರು ಎಳನೀರಿನ ಚಿಪ್ಪುಗಳನ್ನು ರಾಶಿ ಹಾಕಿರುವುದರಿಂದ ಸೊಳ್ಳೆಗಳ ಉತ್ಪತ್ತಿಯಾಗುತ್ತಿದ್ದು ಸಾರ್ವಜನಿಕರ ದೂರಿನ ಮೇರೆಗೆ ಹಾಗೂ ಸ್ವಚ್ಛತೆಯ ದೃಷ್ಟಿಯಿಂದ ಹಾಗೂ (ಡೆಂಗ್ಯೂ ಲಾರ್ವಿಸೈಡ್) ಮಾರಕ ರೋಗಗಳ ಮುಂಜಾಗ್ರತೆಯ ಕ್ರಮವಾಗಿ ರಸ್ತೆ ಬದಿಯಲ್ಲಿ ಬೀದಿಬದಿ ವ್ಯಾಪಾರಸ್ಥರು ಎಳನೀರಿನ ಚಿಪ್ಪುಗಳನ್ನು ಮನಬಂದಂತೆ ರಸ್ತೆಬದಿ ಎಸೆದು ಚಿಪ್ಪಿನಲ್ಲಿ ನೀರು ನಿಂತ ಪರಿಣಾಮ ಸೊಳ್ಳೆಗಳ ಉತ್ಪತ್ತಿಯ ದೃಷ್ಟಿಯಿಂದ ಇಂದು ಸುರತ್ಕಲ್ ಹಾಗೂ ಪಣಂಬೂರು ,ಕೂಳೂರು ವ್ಯಾಪ್ತಿಯಲ್ಲಿ ಸೊಳ್ಳೆಯಿಂದ ಹರಡುವ ರೋಗ ಕಾಯ್ದೆಯ ಪ್ರಕಾರ ಪಾಲಿಕೆಯ ಅಧಿಕಾರಿಗಳು ಬೀದಿ ಬದಿ ವ್ಯಾಪಾರಸ್ಥರಿಗೆ ದಂಡ 1೦೦೦ ರಂತೆ ವಿಧಿಸಿದ್ದಾರೆ.

ಈ ಸಂದರ್ಭದಲ್ಲಿ ಪರಿಸರ ಇಂಜಿನಿಯರ್ (ಐ/ಸಿ) ಸುಶಾಂತ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular