ಮಂಗಳೂರು : ಮುಕ್ಕ ಸಮೀಪದ ಎನ್ಎಚ್ 66ರಲ್ಲಿ ಶನಿವಾರ ಮಧ್ಯಾಹ್ನ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟು, ಮತ್ತೊಬ್ಬರು ಗಂಭೀರ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ.
ಮೃತರನ್ನು ಮುಕ್ಕಾದ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ನಲ್ಲಿ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ 21 ವರ್ಷದ ವೈಭವ್ ವಿಶ್ವನಾಥ್ ಎಂದು ಗುರುತಿಸಲಾಗಿದೆ. ಮುಕ್ಕಾದ ಜುಮ್ಮಾ ಮಸೀದಿಯ ಮುಖ್ಯ ಕಾರ್ಯದರ್ಶಿ ಫಾರೂಖ್ ಗಾಯಗೊಂಡ ವ್ಯಕ್ತಿ.
ವರದಿಗಳ ಪ್ರಕಾರ, ಫಾರೂಖ್ ರಸ್ತೆ ದಾಟುತ್ತಿದ್ದಾಗ ಅಪಘಾತ ಸಂಭವಿಸಿದೆ ಮತ್ತು ಕಾಲೇಜಿಗೆ ಧಾವಿಸುತ್ತಿದ್ದ ವೈಭವ್ ತನ್ನ ಬೈಕ್ ನಿಯಂತ್ರಣ ಕಳೆದುಕೊಂಡು ಫಾರೂಖ್ಗೆ ಡಿಕ್ಕಿ ಹೊಡೆದಿದ್ದಾನೆ.
ಘಟನೆ ಸಂಬಂಧ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.


