Thursday, March 12, 2026
Flats for sale
Homeಕ್ರೈಂಮಂಗಳೂರು : ಯುವಕನನ್ನು ಸೆಕ್ಸ್ ಗಾಗಿ ಬಳಸಿ CISF ಪಡೆಯ ಮಹಿಳಾ ಅಧಿಕಾರಿ ವಂಚನೆ ಆರೋಪ...

ಮಂಗಳೂರು : ಯುವಕನನ್ನು ಸೆಕ್ಸ್ ಗಾಗಿ ಬಳಸಿ CISF ಪಡೆಯ ಮಹಿಳಾ ಅಧಿಕಾರಿ ವಂಚನೆ ಆರೋಪ , ಉತ್ತರ ಪ್ರದೇಶ ಮೂಲದ‌ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ..!

ಮಂಗಳೂರು : ಸಾಮಾನ್ಯವಾಗಿ ಗಂಡಸರು ಮಹಿಳೆ ಜೊತೆ ಲೈಂಗಿಕ ಚಟುವಟಿಕೆ ನಡೆಸಿ ವಂಚನೆಮಾಡಿರುವುದು ಸಾಮಾನ್ಯ ಸುದ್ದಿ. ಆದರೆ ಇಲ್ಲಿ CISF ಪಡೆಯ ಮಹಿಳಾ ಅಧಿಕಾರಿ ಯುವಕನನ್ನು ಸೆಕ್ಸ್ ಗಾಗಿ ಬಳಸಿಕೊಂಡು ಮಾಡಿಕೊಂಡು ವಂಚಿಸಿರುವ ಆರೋಪ ಕೇಳಿಬಂದಿದ್ದು ಮಂಗಳೂರಿನಲ್ಲಿ ಉತ್ತರ ಪ್ರದೇಶ ಮೂಲದ‌ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಸಿ ಐ ಎಸ್ ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಮೊನಿಕಾ ಸಿಹಾಗ್ ಎಂಬವರಿಂದ ಈ ವಂಚನೆ ಆರೋಪ ಕೇಳಿಬಂದಿದ್ದು ಇದರಿಂದ ಮನನೊಂದು ಉತ್ತರ ಪ್ರದೇಶದ ಗಾಜಿಪುರ ನಿವಾಸಿ ಅಭಿಷೇಕ್ ಸಿಂಗ್ (40) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಚೆನೈ‌ ಖಾಸಗಿ ಕಂಪನಿ ಉದ್ಯೋಗಿ ಯಾಗಿರುವ ಅಭಿಷೇಕ್ ಸಿಂಗ್ ಆತ್ಮಹತ್ಯೆ ಮೊದಲು ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಮಾಡಿ‌ ಹರಿಬಿಟ್ಟಿದ್ದಾರೆ. ಅಭಿಷೇಕ್ ಸಿಂಗ್ ಮಂಗಳೂರಿಗೆ ಎಕ್ಸಿಬಿಷನ್ ನಲ್ಲಿ ಪಾಲ್ಗೊಳ್ಳಲು ಸಹೋದ್ಯೋಗಿಗಳೊಂದಿಗೆ ಬಂದಿದ್ದು ನಗರದ ರಾವ್ & ರಾವ್ ವೃತ್ತದ ಬಳಿ ಇರುವ ಲಾಡ್ಜ್ನಲ್ಲಿ ತಂಗಿದ್ದರು .ಮದುವೆ ಆಗಿದ್ದರೂ ಅದನ್ನು ಮುಚ್ಚಿಟ್ಟು ತನ್ನೊಂದಿಗೆ ಮೊನಿಕಾ ಸಿಹಾಗ್ ಸಂಬಂಧ ಬೆಳೆಸಿದ್ದಳು ಅಭಿಷೇಕ್ ಸಿಂಗ್ ಎಂದು ಆರೋಪಿಸಿದ್ದು ದೆತ್ತ್ ನೋಟನಲ್ಲಿ ಅನೇಕ ವಿಚಾರಗಳನ್ನು ಬರೆದಿಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular