ಮಂಗಳೂರು : ಮೂರು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ನೀರು ನಿಂತ ಹಳ್ಳದಲ್ಲಿ ಪತ್ತೆಯಾಗಿದೆ.ಮೃತನನ್ನು ಬಂಟ್ವಾಳದ ಬೆಂಜನಪದವು ನಿವಾಸಿ ಸಾಗರ್ ( 28 ) ಎಂದು ತಿಳಿದಿದೆ.
ಬಂಟ್ವಾಳದ ಬೆಂಜನಪದವು ನಿವಾಸಿ ಸಾಗರ್ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು ಸಾಗರ್ಗಾಗಿ ಮನೆಮಂದಿ ಹಾಗೂ ಸ್ನೇಹಿತರು ಹುಡುಕಾಟ ನಡೆಸಿದ್ದರು. ಟವರ್ ಲೋಕೇಶನ್ ಪತ್ತೆಮಾಡಲು ಪ್ರಕರಣ ದಾಖಲಿಸಿದ್ದರು ಆದರೆ ಇಂದು ಪಕ್ಕದ ಹಳ್ಳದಲ್ಲಿ ಸಾಗರ್ ಮೃತದೇಹ ಪತ್ತೆಯಾಗಿದೆ.ದಕ್ಷಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಬಂಟ್ವಾಳ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.


