Wednesday, April 1, 2026
Flats for sale
Homeಜಿಲ್ಲೆಮಂಗಳೂರು : ಮೀನು ಹಿಡಿಯಲು ತೆರಳಿದ ಇಬ್ಬರು ಯುವಕರು ನೀರುಪಾಲು, ಓರ್ವ ಪಾರು,ಫಲ್ಗುಣಿ ನದಿಯಲ್ಲಿ ದೋಣಿ...

ಮಂಗಳೂರು : ಮೀನು ಹಿಡಿಯಲು ತೆರಳಿದ ಇಬ್ಬರು ಯುವಕರು ನೀರುಪಾಲು, ಓರ್ವ ಪಾರು,ಫಲ್ಗುಣಿ ನದಿಯಲ್ಲಿ ದೋಣಿ ಮಗುಚಿ ದುರಂತ.

ಮಂಗಳೂರು : ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜತ್‌ಬೈಲ್ ಪ್ರದೇಶದಲ್ಲಿ ನಡೆದ ದೋಣಿ ದುರಂತದಲ್ಲಿ ಇಬ್ಬರು ಯುವಕರು ನೀರುಪಾಲಾಗಿದ್ದು, ಒಬ್ಬರು ಪಾರಾದ ಘಟನೆ ವರದಿಯಾಗಿದೆ.

ಮೀನು ಹಿಡಿಯಲೆಂದು ಫಲ್ಗುಣಿ ನದಿಗೆ ನಸುಕಿನ ವೇಳೆ ಸುಮಾರು 1:30 ಗಂಟೆಗೆ ಸಣ್ಣ ದೋಣಿಯಲ್ಲಿ ತೆರಳಿದ್ದ ಮೂವರು ಸ್ನೇಹಿತರಲ್ಲಿ, ದೋಣಿ ನದಿಯ ಮಧ್ಯಭಾಗದಲ್ಲಿ ಮಗುಚಿ ಬಿದ್ದಿದೆ. ಈ ವೇಳೆ ಕುಂಜತ್‌ಬೈಲ್ ನಿವಾಸಿಗಳಾದ ಗಣೇಶ್ (28) ಮತ್ತು ರಾಯಲ್ (27) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಈಜಲು ಬಲ್ಲ ನಿತೇಶ್ (29) ಎಂಬವರು ಈಜಿ ದಡ ಸೇರಿ ಜೀವ ಉಳಿಸಿಕೊಂಡಿದ್ದಾರೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗು ತಜ್ಞರು ಶೋಧ ಕಾರ್ಯ ಕೈಗೊಂಡಿದ್ದಾರೆ. ಮಧ್ಯಾಹ್ನ ವೇಳೆಗೆ ಗಣೇಶ್ ಅವರ ಮೃತದೇಹವನ್ನು ಪತ್ತೆ ಮಾಡಲಾಗಿದೆ. ರಾಯಲ್ ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳದಲ್ಲಿ ಕಾವೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಈ ದುರ್ಘಟನೆ ಸ್ಥಳೀಯರಲ್ಲಿ ಆತಂಕ ಮತ್ತು ದುಃಖದ ವಾತಾವರಣವನ್ನು ಸೃಷ್ಟಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular