ಮಂಗಳೂರು : ಮಂಗಳೂರಿನ ಮೀನುಗಾರಿಕಾ ದಕ್ಕೆಯ ಬಳಿ ನದಿಯಲ್ಲಿ ಕಳ್ಳತನ, ದರೋಡೆ ಕೃತ್ಯದ ಹಿನ್ನೆಲೆಯಿರುವ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ನಾಸೀರ್ ಯಾನೆ ದಕ್ಕೆ ನಾಸಿರ್ ಕೊಲೆಯಾದ ವ್ಯಕ್ತಿಯಾಗಿದ್ದು ಕೊಲೆಗೈದು ನದಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.
ಹಲವಾರು ಕಳ್ಳತನ, ದರೋಡೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ನಾಸೀರ್ ನನ್ನು ದುಷ್ಕರ್ಮಿಗಳು ಕೊಲೆಗೈದು ನದಿಗೆ ಎಸೆದ ಸಂಶಯ ಇದೆ. ಮೃತದೇಹದ ಹಣೆ ಹಾಗು ದೇಹದ ಮೇಲೆ ಗಾಯಗಳ ಗುರುತು ಪತ್ತೆಯಾಗಿದೆ. ದಕ್ಕೆಯಲ್ಲಿ ನಿರ್ಮಾಣ ಹಂತದ ಕಟ್ಟಡದ ಪಕ್ಕ ನದಿಯಲ್ಲಿ ಶವ ಕಾಣಸಿಕ್ಕಿದೆ.
ಪಾಂಡೇಶ್ವರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ.


