Saturday, March 14, 2026
Flats for sale
Homeಜಿಲ್ಲೆಮಂಗಳೂರು ; ಮಾಜಿ ಶಾಸಕ ಮೊಯ್ದಿನ್ ಬಾವರವರ ಸಹೋದರನ ಕಾರು ಅಪಘಾತದ ಸ್ಥಿತಿಯಲ್ಲಿ...

ಮಂಗಳೂರು ; ಮಾಜಿ ಶಾಸಕ ಮೊಯ್ದಿನ್ ಬಾವರವರ ಸಹೋದರನ ಕಾರು ಅಪಘಾತದ ಸ್ಥಿತಿಯಲ್ಲಿ ಪತ್ತೆ, ಕೂಳೂರು ಸೇತುವೆಯಲ್ಲಿ ಜಿಗಿದು ಆತ್ಮಹತ್ಯೆ ಶಂಕೆ…!!

ಮಂಗಳೂರು ; ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ ಅವರ ಸಹೋದರ ಮಮತಾಝ್ ಅಲಿ ಅವರ ಕಾರು ಕುಳೂರು ಸೇತುವೆಯ ಮೇಲೆ ಭಾನುವಾರ ಅಪಘಾತದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಮಮತಾಜ್ ಅಲಿ ಅವರು ತಮ್ಮ ಮಗಳಿಗೆ ವಾಟ್ಸಾಪ್ ಮೂಲಕ ‘ನಾನು ಹಿಂತಿರುಗುವುದಿಲ್ಲ’ ಎಂದು ಸಂದೇಶ ಕಳುಹಿಸಿದ್ದು ಆತಂಕ ಮೂಡಿಸಿದೆ.

ಅವರು ಮಿಸ್ಬಾ ಗ್ರೂಪ್ ಆಫ್ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್ ಅಧ್ಯಕ್ಷರಾಗಿದ್ದಾರೆ ಮತ್ತು ಸ್ಥಳೀಯ ಜಮಾತ್ನಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ. ಘಟನಾ ಸ್ಥಳದಲ್ಲಿ ಮಾಜಿ ಶಾಸಕ ಮೊಹಿಯುದ್ದೀನ್ ಬಾವ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದು ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

ಏತನ್ಮಧ್ಯೆ, ಘಟನೆಯ ಕುರಿತು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಅವರು ಇಂದು ಮುಂಜಾನೆ ಘಟನಾ ಬೇಟಿನೀಡಿದ್ದಾರೆ, ಕುಳೂರು ಸೇತುವೆಯ ಬಳಿ ಉದ್ಯಮಿ ಮುಮ್ತಾಜ್ ಅಲಿ ಅವರ ವಾಹನ ಪತ್ತೆಯಾಗಿದೆ, ಅವರು ಸೇತುವೆಯಿಂದ ಜಿಗಿದಿರಬಹುದು ಎಂಬ ಮಾಹಿತಿಯ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ 3 ಗಂಟೆ ಸುಮಾರಿಗೆ ತನ್ನ ಕಾರಿನಲ್ಲಿ ಮನೆಯಿಂದ ಹೊರಟು ನಗರದೆಲ್ಲೆಡೆ ಸುತ್ತಾಡಿದ್ದು, 5 ಗಂಟೆ ಸುಮಾರಿಗೆ ಕೂಳೂರು ಸೇತುವೆ ಬಳಿ ಕಾರನ್ನು ನಿಲ್ಲಿಸಿದ್ದು, ಆ ಬಳಿಕ ಆತನ ಮಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಎಸ್‌ಡಿಆರ್‌ಎಫ್ ಮತ್ತು ಕೋಸ್ಟ್ ಗಾರ್ಡ್ ತಂಡಗಳು ಅವರು ನದಿಗೆ ಹಾರಿದ್ದಾರೆಯೇ ಅಥವಾ ಯಾರಾದರೂ ಇದ್ದಾರೆಯೇ ಎಂದು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.

ಭಾನುವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಈಜು ತಜ್ಞರೊಂದಿಗೆ ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳು ನದಿಯಲ್ಲಿ ಶೋಧ ಆರಂಭಿಸಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಸಕ್ರಿಯ ತನಿಖೆ ಆರಂಭಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular