Thursday, November 6, 2025
Flats for sale
Homeಜಿಲ್ಲೆಮಂಗಳೂರು : ಮಹಾಕಾಳಿ ಪಡ್ಪು ರೈಲ್ವೆ ಅಂಡರ್ ಪಾಸ್ ಕಾಮಗಾರಿ ಸ್ಥಗಿತ,ಹದಗೆಟ್ಟ ಸ್ಮಾರ್ಟ್‌ ಸಿಟಿಯ ಸ್ಮಾರ್ಟ್...

ಮಂಗಳೂರು : ಮಹಾಕಾಳಿ ಪಡ್ಪು ರೈಲ್ವೆ ಅಂಡರ್ ಪಾಸ್ ಕಾಮಗಾರಿ ಸ್ಥಗಿತ,ಹದಗೆಟ್ಟ ಸ್ಮಾರ್ಟ್‌ ಸಿಟಿಯ ಸ್ಮಾರ್ಟ್ ರಸ್ತೆ,ಹಿಡಿಶಾಪ ಹಾಕುತ್ತಿರುವ ಸವಾರರು…!

ಮಂಗಳೂರು : ಮಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಂಡಿರುವ ಮಹಾಕಾಳಿ ಪಡ್ಪುವಿನ ರೈಲ್ವೇ ಅಂಡರ್‌ ಪಾಸ್‌ ಕಾಮಗಾರಿ ಸದ್ಯಕ್ಕಂತು ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಈ ಕಾಮಗಾರಿ ಕೈಗೆತ್ತಿಕೊಂಡು ವರ್ಷಗಳೇ ಕಳೆದರೂ ಕಾಮಗಾರಿ ಮುಗಿಸಬೇಕು ಅನ್ನೋ ಇಚ್ಚೆ ಸ್ಮಾರ್ಟ್‌ ಸಿಟಿ ಯೋಜನೆಯವರಿಗೂ ಇಲ್ಲದಂತಾಗಿದೆ . ಸರಿಸುಮಾರು ಸಾವಿರಾರು ವಾಹನ ಸವಾರರು ದಿನನಿತ್ಯ 2 ಕಿಲೋಮೀಟರು ಓಡಾಡೋ ಮಾರ್ಗವನ್ನು 8 ಕಿಲೋಮೀಟರ್ ಚಲಿಸುವಂತೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮಾಡಿದ್ದೂ ವಾಹನ ಸವಾರರು ಹಿಡಿಶಾಪಹಾಕುತ್ತಿದ್ದಾರೆ.

ಕೆಲ ತಿಂಗಳ ಹಿಂದೆ ಕಳಪೆ ಕಾಮಗಾರಿಯಿಂದಾಗಿ ಇಲ್ಲಿ ಕಾಮಗಾರಿ ಕುಸಿತ ಕೂಡಾ ಉಂಟಾಗಿತ್ತು. ಇದೀಗ ಕೆಲ ದಿನಗಳಿಂದ ಯಾವುದೇ ಕಾಮಗಾರಿ ನಡೆಸದೆ ಕಾರ್ಮಿಕರು ಕೂಡಾ ಕೆಲಸ ಇಲ್ಲದೆ ಸುಮ್ಮನೆ ಕುಳಿತಿರುವ ದೃಶ್ಯ ಇಲ್ಲಿ ಮಾಮೂಲಾಗಿದೆ. ಮಾರ್ಗನ್‌ ಗೇಟ್ ಮೂಲಕವಾಗಿ ಜೆಪ್ಪಿನ ಮೊಗೆರು ಹೈವೆ ಸಂಪರ್ಕಿಸುವ ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿದೆ. ಸದ್ಯ ಈ ಕಾಮಗಾರಿ ಆರಂಭವಾದ ಬಳಿಕ ಇಲ್ಲಿ ದ್ವಿಚಕ್ರ ವಾಹನಕ್ಕಷ್ಟೇ ಓಡಾಡಲು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.

ಹೋಗಲಿ ಬಿಡಿ ಅಂಡರ್‌ ಪಾಸ್‌ ಕಾಮಗಾರಿ ವಿಳಂಬವಾದರೂ ತೊಂದರೆಯಿಲ್ಲ ದಿನನಿತ್ಯ ಸಂಚರಿಸುವ ರಸ್ತೆಗಳು ಸರಿಯಾಗಿದೆಯಾ…? ತೊಕ್ಕೊಟ್ಟಿನಿಂದ ಮಹಾಕಾಳಿಪಡ್ಪು ಮೂಲಕ ಸಂಚರಿಸುವ ರಸ್ತೆಗಳಂತೂ ಹದಗೆಟ್ಟಿದ್ದು,ಜೆಪ್ಪು ಕುಡುಪಾಡಿ ರಸ್ತೆಗಳನ್ನು ಚರಂಡಿ ದುರಸ್ಥಿಗೆ ಮುಚ್ಚಲಾಗಿದೆ. ಅಲ್ಲಲ್ಲಿ ರಸ್ತೆಯನ್ನು ಮನಬಂದಂತೆ ಹಗೆಯುವುದಲ್ಲದೆ ರಸ್ತೆಯಲ್ಲಿರುವ ಮರಣಗುಂಡಿಗಳಿಗೆ ಬಿದ್ದು ಅದೆಷ್ಟೋ ಸವಾರರು ಪ್ರಾಣತೆತ್ತಿದ್ದಾರೆ.ಯಾವುವೇ ಜನಪ್ರತಿನಿಧಿಗಳು ಈ ಕಾಮಗಾರಿಯ ವಿರುದ್ಧ ಧ್ವನಿಯೆತ್ತದೆ ಇರುವುದು ನಾಚಿಗೇಡಿನ ವಿಚಾರವಾಗಿದೆ.ಅಮಾಯಕ ಸವಾರರ ಜೀವದಲ್ಲಿ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಹಿಡಿಶಾಪಹಾಕುತ್ತಿರುವುದಂತೂ ನಿಜ .

ಮಂಗಳೂರು ಮಹಾ ನಗರ ಪಾಲಿಕೆಯ ಇಂಜಿನಿಯರ್ ಗಳಂತೂ ಒಂದು ಮಾಸ್ಟರ್ ಪೀಸ್ ಗಳಾಗಿದ್ದಾರೆ ಯಾಕೆಂದರೆ ನಗರದಲ್ಲಿ ಅಗೆದಲ್ಲಿ ಅಗೆಯುವುದಕ್ಕೆ ಅವರಿಗಂತೂ ಅವಾರ್ಡ್ ಕೊಡಬೇಕು. ಸರಿಯಾದ ರಸ್ತೆಯನ್ನು ಅಗೆದಲ್ಲಿ ಅಗೆಯುವ ಸ್ಪರ್ಧೆ ಇದ್ದಾರೆ ಇವರಿಗಂತೂ ಮೊದಲ ಬಹುಮಾನ ಗ್ಯಾರಂಟೀ. ಹೀಗಾಗಿ ಈ ರಸ್ತೆಯ ಮೂಲಕ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಕಾಮಗಾರಿ ಯಾವಾಗ ಮುಗಿಸ್ತೀರಿ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಇಲ್ಲಿ ನಡಿಯುತ್ತಿರುವ ಕಾಮಗಾರಿಯ ವೇಗ ನೋಡಿದರೆ ಇದು 2024 ರಲ್ಲಿ ಪೂರ್ಣಗೊಳ್ಳುವ ಯಾವುದೇ ಲಕ್ಷಣ ಇಲ್ಲ ಅನ್ನೋದು ಸ್ಪಷ್ಟವಾಗುತ್ತಿದೆ. ಹೀಗಾಗಿ ತಕ್ಷಣ ಅಂಡರ್ ಪಾಸ್ ಕೆಲಸ ಮಗಿಸಿ ಅಂತ ಜನ ಒತ್ತಾಯಿಸಿದ್ದಾರೆ.ಇನ್ನು ಎಷ್ಟು ಸಮಯ ಕಾಯಬೇಕಿದೆ,ಏನು ಸಮಸ್ಯೆ,ಎಂಬುದೇ ಸ್ಥಳೀಯ ನಿವಾಸಿಗಳ ಪ್ರಶ್ನೆ ,ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿರುವುದು ವಿಪರ್ಯಾಸವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular