Friday, March 13, 2026
Flats for sale
Homeಜಿಲ್ಲೆಮಂಗಳೂರು : ಮಳಲಿ ಮಸೀದಿ ವಿವಾದ ಪ್ರಕರಣ : ವಿಶ್ವ ಹಿಂದೂ ಪರಿಷತ್​ ಸಲ್ಲಿಸಿದ್ದ ಅರ್ಜಿ...

ಮಂಗಳೂರು : ಮಳಲಿ ಮಸೀದಿ ವಿವಾದ ಪ್ರಕರಣ : ವಿಶ್ವ ಹಿಂದೂ ಪರಿಷತ್​ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮತ್ತೆ ಮಂದೂಡಿಕೆ.

ಮಂಗಳೂರು : ರಾಮಮಂದಿರ ,ಜ್ಞಾನವ್ಯಾಪಿ ತರಹ ಆಕ್ರಮಣಕ್ಕೆ ಒಳಗಾದ ಮಂಗಳೂರು ತಾಲೂಕಿನ ತೆಂಕ ಉಳಿಪ್ಪಾಡಿ ಗ್ರಾಮದ ಸಮೀಪದ ಮಳಲಿ ಎಂಬಲ್ಲಿ ಇರುವ ಜುಮ್ಮಾ ಮಸೀದಿಯು ಹಿಂದೂ ದೇಗುಲವಾಗಿತ್ತು ಎನ್ನುವ ವಿಚಾರ ಹೊಸ ಚರ್ಚೆಗೆ ಗ್ರಾಸವಾಗಿತ್ತು. ಮಳಲಿ ಮಸೀದಿ ನವೀಕರಣದ ಸಂದರ್ಭದಲ್ಲಿ ದೇವಾಲಯದ ಮಾದರಿ ರಚನೆ ಪತ್ತೆಯಾಗಿತ್ತು.

ಈ ಪ್ರಕರಣಕ್ಕೆ ಸಂಬಂದಿಸಿದಂತೆ ಈ ವಿವಾದ ಎಪ್ರಿಲ್ 22, 2022 ರಂದು ಕೋರ್ಟ್ ಮೆಟ್ಟಿಲೇರಿತ್ತು. ಮಳಲಿ ಮಸೀದಿ ವಿವಾದದಲ್ಲಿ ಉತ್ಖನನ ಮಾಡಿ ಸರ್ವೇಗೆ ವಿಶ್ವ ಹಿಂದೂ ಪರಿಷತ್ ಸಲ್ಲಿಸಿತ್ತು. ಈ ಅರ್ಜಿ ವಿಚಾರ ಕುರಿತು ಫೆ.17 ರಂದು ಮಂಗಳೂರು ಕೋರ್ಟ್​ನಲ್ಲಿ ಮತ್ತೆ ಅರ್ಜಿ ವಿಚಾರಣೆ ನಡೆಸಲಾಗಿದೆ. ಬಳಿಕ ಈ ವಿಚಾರಣೆಯನ್ನು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ಮತ್ತೆ ಸೋಮವಾರಕ್ಕೆ ಮುಂದೂಡಿದೆ.

ಹೈಕೋರ್ಟ್​ನಿಂದ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ನಿರ್ದೇಶನ ತಲುಪಿದ್ದು, ಮಳಲಿ‌ ಮಸೀದಿ ಜಾಗ ವಕ್ಫ್ ಆಸ್ತಿ ಹೌದಾ? ಅಥವಾ ಅಲ್ಲವಾ ಎಂದು ನಿರ್ಧರಿಸಲು ಹೈಕೋರ್ಟ್ ನಿರ್ದೇಶನ ನೀಡಿದೆ. ವಿವಾದಿತ ಮಳಲಿ ಮಸೀದಿಯ ಸರ್ವೇ ನಡೆಸುವ ಸಲ್ಲಿಸದ್ದ ಅರ್ಜಿ ವಿಚಾರವಾಗಿ ಇಂದು ಮತ್ತೆ ಮಸೀದಿ ಪರ ವಕೀಲರು ವಿಶ್ವ ಹಿಂದೂ ಪರಿಷತ್​ ಪರ ವಕೀಲರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹೈ ಕೋರ್ಟ್ ತೀರ್ಪಿನ ಪ್ರತಿ ತಲುಪಿದ ಬಳಿಕ ವಾದ ಮಂಡನೆ ಮಾಡುವುದಾಗಿ ಹೇಳಿಕೆ ನೀಡಿದ್ದರು,ಈ ಬಗ್ಗೆ ವಿಚಾರಣೆ ಸಿವಿಲ್ ಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular