ಮಂಗಳೂರು : ರೋಗಿಗಳ ಆರೋಗ್ಯ ಸುಧಾರಣೆ ಸಂದರ್ಭದಲ್ಲಿ ಅವರ ಕುರಿತಾಗಿ ಕಾಳಜಿ ವಹಿಸುವುದು ಬಹುಮುಖ್ಯ ಕಾರ್ಯವಹಿಸುವ ಶ್ರೀ ಮಾತಾ ಓಲ್ಡ್ ಏಜ್ ಹೆಲ್ತ್‌ಕೇರ್ ಹೋಮ್ ಇಂದು ಉದ್ಘಾಟನೆಗೊಂಡಿತು . ಮಾದರಿ ಸೇವೆಯ ಮೂಲಕ ಗುರುತಿಸುವಂತಾಗಲಿ ಹಿರಿಯರ ಸೇವೆಯ ಮೂಲಕ ದೇವರ ಕಾರ್ಯ ನಡೆಸಿದಂತಾಗುತ್ತದೆ ಎಂದು ಮನಪಾ ಸದಸ್ಯ ಕೇಶವ ಮರೋಳಿ ಉದ್ಘಾಟನೆ ಬಳಿಕ ಹೇಳಿದರು. ಮರೋಳಿಯ ಕೆನರಾ ವರ್ಕ್‌ಶಾಪ್ ಮುಂಭಾಗದಲ್ಲಿ ಶ್ರೀ ಮಾತಾ ಓಲ್ಡ್ ಏಜ್ ಹೆಲ್ತ್‌ಕೇರ್ ಹೋಮ್‌ನ ಕಾರ್ಯಚಟುವಟಿಕೆ ಆರಂಭದ ಹಿನ್ನೆಲೆಯಲ್ಲಿ ಅವರು ಶುಭಹಾರೈಸಿದರು.
ರಾಜೇಶ್ ಮಯ್ಯ ಅವರು ದೇವತಾ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಆಧುನಿಕ ಕಾಲಘಟ್ಟದಲ್ಲಿ ಕೆಲವರು ಹಿರಿಯರ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ವಿಚಾರಿಸುವ ಇರಾದೆಯಿಟ್ಟುಕೊಂಡು ಹೆಲ್ತ್‌ಕೇರ್ ಹೋಮ್‌ಗೆ ದಾಖಲಿಸುತ್ತಾರೆ. ಈ ಮೂಲಕ ರೋಗಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವರ ಆರೋಗ್ಯ ರಕ್ಷಣೆಯ ಕಾರ್ಯ ನಡೆಸುತ್ತಾರೆ. ಈ ಕಾರಣದಿಂದ ಶ್ರೀ ಮಾತಾ ಓಲ್ಡ್ ಏಜ್ ಹೆಲ್ತ್‌ಕೇರ್ ಹೋಮ್ ಮಹತ್ವದ ಆರೋಗ್ಯ ಸೇವೆ ನಡೆಸಲಿದೆ. ಇಲ್ಲಿ ಬರುವ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವ ಮೂಲಕ ಅವರು ಗುಣಮುಖರಾಗಿ ಹೋಗುವ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸಲಾಗುವುದು ಎಂದು ಸಂಸ್ಥೆಯ ಪಾಲುದಾರರಾದ ರೇಖಾ ಹಾಗೂ ಪವಿತ್ರಾ ತಿಳಿಸಿದ್ದಾರೆ.
ರಮೇಶ್, ಸುಬ್ರಹ್ಮಣ್ಯ, ಯೋಗೀಶ್ ಕಡಬ ಹಾಗೂ ಪ್ರವೀಣ್ ಉಪಸ್ಥಿತರಿದ್ದರು.