Tuesday, February 3, 2026
Flats for sale
Homeಜಿಲ್ಲೆಮಂಗಳೂರು : ಮರಣ ಪ್ರಮಾಣ ಪತ್ರಕ್ಕೂ ಲಂಚ ,ಸತ್ತರೂ ಬಿಡದ ಭ್ರಷ್ಟಾ ಅಧಿಕಾರಿ,ಲೋಕಾಯುಕ್ತ ಬಲೆಗೆ ಬಿದ್ದ...

ಮಂಗಳೂರು : ಮರಣ ಪ್ರಮಾಣ ಪತ್ರಕ್ಕೂ ಲಂಚ ,ಸತ್ತರೂ ಬಿಡದ ಭ್ರಷ್ಟಾ ಅಧಿಕಾರಿ,ಲೋಕಾಯುಕ್ತ ಬಲೆಗೆ ಬಿದ್ದ ಪಾಪಿ ಗ್ರಾಮ ಲೆಕ್ಕಾಧಿಕಾರಿ.

ಮಂಗಳೂರು : ಸರಕಾರಿ ಅಧಿಕಾರಿಗಳೇ ಇಷ್ಟು ಎಲ್ಲಿ ಲೂಟಿ ಹೊಡೆಯಲು ಸಿಗುತ್ತದೋ ಕಾಯುತ್ತ ಇರುತ್ತಾರೆ ಆದರೆ ಅವನಿಗೆ ಗೊತ್ತಿರುವುದಿಲ್ಲವೇನೋ ನನಗೂ ಒಂದು ದಿನ ಸಾಯಲು ಇದ್ದೆ ಇದೆ ಅಂತ,ಇತ್ತೀಚಿನ ದಿನ ಅಂತೂ ಸರಕಾರಿ ಕಚೇರಿಗಳಿಗೆ ಹೋಗಲೂ ಜನಸಾಮಾನ್ಯರು ಹಿಂದೇಟುಹಾಕುತಿದ್ದರೆ ,ಯಾಕೆಂದರೆ ಎಲ್ಲ ಕಡೆನೂ ಲಂಚ,ದೂರುದಾರರ ಅಜ್ಜನ ಮರಣ ಪ್ರಮಾಣ ಪತ್ರ ದೃಢೀಕರಣಕ್ಕೆ 13 ಸಾವಿರ ಲಂಚ ಕೇಳುತ್ತಿದ್ದಾಗ ಚೇಳ್ಯಾರು ಗ್ರಾಮ ಖಾತೆ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಖದೀಮ ಸರಕಾರಿ ಲೂಟಿಕೋರ ವಿಜಿತ್ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದ ಗ್ರಾಮ ಲೆಕ್ಕಾಧಿಕಾರಿ ಎಂದು ತಿಳಿದುಬಂದಿದೆ.

ದೂರುದಾರರು ತಮ್ಮ ತಾಯಿಯ ಹೆಸರಲ್ಲಿರುವ ಜಮೀನನ್ನು ಮಾರಾಟ ಮಾಡಲು ದಾಖಲಾತಿಗಳನ್ನು ಸಿದ್ಧಪಡಿಸುತ್ತಿದ್ದಾಗ ಗ್ರಾಮ ಲೆಕ್ಕಿಗರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಲು ತಾತನ ಮರಣ ಪ್ರಮಾಣ ಪತ್ರ ಮತ್ತು ವಂಶವೃಕ್ಷದ ಪಟ್ಟಿಯನ್ನು ನೀಡುವಂತೆ ತಿಳಿಸಿದರು. ಅದರಂತೆ ದೂರುದಾರರು ಸೆಪ್ಟೆಂಬರ್ ನಲ್ಲಿ ಚೇಳ್ಯಾರು ಗ್ರಾಮಾಂತರ ಕಚೇರಿಗೆ ತೆರಳಿ ತಾತನ ಮರಣ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು.

ನಂತರ ಫಿರ್ಯಾದಿದಾರರು ಎರಡ್ಮೂರು ಬಾರಿ ಚೇಳ್ಯಾರು ಗ್ರಾ.ಪಂ.ಕಚೇರಿಗೆ ಹೋಗಿ ವಿಜಿತ್ ಅವರ ಬಳಿ ದೃಢೀಕರಣ ಪತ್ರದ ಬಗ್ಗೆ ವಿಚಾರಿಸಿದರೂ ಉತ್ತರ ಬಂದಿಲ್ಲ. ನವೆಂಬರ್ 20 ರಂದು ಫಿರ್ಯಾದಿದಾರರು ಗ್ರಾಮ ಲೆಕ್ಕಿಗರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಉತ್ತರಿಸಿದ ಅವರು ಮರಣ ಪ್ರಮಾಣ ಪತ್ರ ಸಿದ್ಧವಾಗಿದೆ ಎಂದು ಹೇಳಿ ಕಚೇರಿಯಿಂದ ಸಂಗ್ರಹ ಮಾಡುವಂತೆ ತಿಳಿಸಿದರು. ಆದರೆ ಆರೋಪಿ ವಿಜಿತ್ ದೂರುದಾರರಿಂದ 15,000 ರೂ. ಲಂಚ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ ,ಫಿರ್ಯಾದಿದಾರರು ತಮ್ಮ ಬಳಿ ಅಷ್ಟು ಹಣವಿಲ್ಲ ಎಂದು ಹೇಳಿದಾಗ ವಿಜಿತ್ ಅವರಿಗೆ ಇನ್ನೂ ಒಂದು ದಿನ ಕಾಲಾವಕಾಶ ನೀಡುತ್ತೇನೆ ಹಣವನ್ನು ತನ್ನಿ ಎಂದು ಇಲ್ಲದಿದ್ದರೆ ಪ್ರಮಾಣ ಪತ್ರ ಸಿಗಲು ಕಾಲಾವಕಾಶ ಜಾಸ್ತಿ ಬೇಕೆಂದು ಬೇಡಿಕೆಯಿಡುತ್ತಾನೆ.

ನವೆಂಬರ್ 22 ರಂದು ಫಿರ್ಯಾದಿದಾರರು ಚೇಳ್ಯಾರು ಕಚೇರಿಗೆ ಹೋಗಿ ವಿಜಿತ್ ಅವರನ್ನು ಮಾತನಾಡಿಸಿ ಲಂಚದ ಮೊತ್ತದಲ್ಲಿ ರಿಯಾಯಿತಿ ಕೇಳಿದರು. ವಿಜಿತ್ ಒಪ್ಪಿ 2000 ರೂಪಾಯಿ ರಿಯಾಯಿತಿ ನೀಡಿ 13 ಸಾವಿರ ರೂಪಾಯಿಗೆ ಇಳಿಸಿದ್ದಾನೆ.

ಇದೇ ವೇಳೆ ಬಲೆ ಬೀಸಿದ ಲೋಕಾಯುಕ್ತ ಪೊಲೀಸರು ದೂರುದಾರರಿಂದ 13 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಸ್ಥಳದಲ್ಲೇ ವಿಜಿತ್ ಸಿಕ್ಕಿಬಿದ್ದಿದ್ದಾನೆ ಆರೋಪಿಯನ್ನು ಬಂಧಿಸಿ ಹಣ ವಶಪಡಿಸಿಕೊಳ್ಳಲಾಗಿದೆ. ವಿಜಿತ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಸರಕಾರ ಇಷ್ಟೆಲ್ಲಾ ಸೌಲಭ್ಯ ಕೊಡುವಾಗ ಬಡವರ ಹೊಟ್ಟೆ ಗೆ ಕನ್ನಹಾಕಿ ಹಣ ಲೂಟಿ ಹೊಡೆದರೆ ಎಷ್ಟು ಸಮಯ ತಿನ್ನಬಹುದು ಎಂಬುದು ಜನರ ಮಾತು.

RELATED ARTICLES

LEAVE A REPLY

Please enter your comment!
Please enter your name here

Most Popular