ಮಂಗಳೂರು : ಸಂತ್ರಸ್ತೆ ಪೂಜಾ ಆಚಾರ್ಯ ಮಗು ಕೃಷ್ಣ ಜೆ.ರಾವ್ ಅವರ ಮಗು ಎಂಬುದಾಗಿ ಡಿ ಎನ್ ಎ ರಿಪೋರ್ಟ್ ನಲ್ಲಿ ಸಾಬಿತ್ತಾದರು ಕೂಡ ಆರೋಪಿ ಕೃಷ್ಣ ನನ್ನ ಮಗು ಅಲ್ಲವೇ ಅಲ್ಲ ಎಂದು ಹೇಳುತ್ತಾನೆ. ಒಂದು ಬಡ ವರ್ಗದ ಮೇಲೆ ಅಧಿಕಾರಿ ವರ್ಗದವರ ಈ ರೀತಿಯ ನಡವಳಿಕೆ ಸರಿಯಲ್ಲ ಮಗು ಹುಟ್ಟಿ ೬ ತಿಂಗಳು ಆದರೂ ಸಂತ್ರಸ್ತೆಯ ಮಗುವಿಗೆ ಇನ್ನೂ ನಾಮಕರಣವೇ ಆಗಿಲ್ಲ ಇದರಿಂದ ಮಗುವಿನ ಭವಿಷ್ಯಕ್ಕೆ ಕುತ್ತು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಅಖಿಲ ಕರ್ನಾಟಕ ವಿಶ್ವ ಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ ಪಿ ನಂಜುಂಡಿ ತಿಳಿಸಿದರು .
ಅವರು ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಹಿಂದೂಗಳ ಹೊನ್ನ ಕಲಶವೆಂದು ಕರೆಯಲ್ಪಡುವ ಪುತ್ತೂರಿನಲ್ಲಿ ಹಿಂದೂ ಯುವತಿಗೆ ಈ ರೀತಿಯಲ್ಲಿ ಆದ ಅನ್ಯಾಯವು ನಿಜಕ್ಕೂ ಮನಸಿಗೆ ನೋವನ್ನು ತರುತ್ತದೆ. ಡಿ ಎನ್ ಎ ವರದಿಯಲ್ಲಿ ಮಗುವಿನ ಅಪ್ಪ ಕೃಷ್ಣನೇ ಎಂದು ಸಾಬೀತಾಗಿತ್ತು. ಆ ಕ್ಷಣ ನಾನು ಈ ಪ್ರಕರಣ ಸುಖಾಂತ್ಯವನ್ನು ಕಾಣುವುದಾಗಿ ವಿಶ್ವಾಸ ಇಟ್ಟಿದ್ದೆ . ಆದರೆ ಈ ಪ್ರಕರಣ ಬೇರೆಯೇ ತಿರುವನ್ನು ಪಡೆಯಿತ್ತು. ಆರೋಪಿ ಕೃಷ್ಣ ಜೆ.ರಾವ್ ನನ್ನ ಮಗು ಅಲ್ಲವೇ ಅಲ್ಲ ಎಂದು ಪಟ್ಟು ಹಿಡಿದ್ದಾನೆ . ಇದನ್ನು ಮನಗಂಡ ನಾನು ಎರಡು ಬಾರಿ ಜಗನ್ನಿವಾಸ ರಾವ್ ಅವರನ್ನು ಭೇಟಿಯಾಗಿದ್ದೇನೆ .ಆಗ ಅವರು ನನ್ನ ಮಗ ನನ್ನ ಮಾತನ್ನು ಕೇಳುವುದಿಲ್ಲ ಎಂಬುದಾಗಿ ಹೇಳಿದ್ದಾರೆ .
ನನಗೆ ಹೋರಾಟ ಮಾಡಲು ಗೊತ್ತಿದೆ ಆದರೆ ಪ್ರಚಾರ ರಹಿತ ಸಂಧಾನಕ್ಕಾಗಿ ನಾನು ಪ್ರಯತ್ನಿಸುತ್ತಿದ್ದೇನೆ ಇದು ಯಾವಾಗ ಸಾಧ್ಯವಾಗದು ಎಂಬುದಾಗಿ ತಿಳಿಯಿತ್ತೋ ನಾನು ವಕೀಲರನ್ನು ಭೇಟಿಯಾಗಿ ಈ ಕುರಿತು ಚರ್ಚಿಸಿದ್ದೇನೆ . ಈ ಕುರಿತು ಇನ್ನು ೩ ದಿನಗಳಲ್ಲಿ ನ್ಯಾಯ ತೀರ್ಮಾನ ಹೊರ ಬೀಳಲಿದೆ ಎಂದರು . ಪೂಜಾ ಆಚಾರ್ಯರಿಗೆ ನ್ಯಾಯ ಸಿಗುವ ತನಕ ನಾನು ಅವರ ಜೊತೆಯಲ್ಲೇ ಇರುತ್ತೇನೆ ಎಂದು ಅವರು ಕುಟುಂಬಕ್ಕೆ ಧೈರ್ಯ ತುಂಬುವ ಪ್ರಯತ್ನ ಮಾಡಿದರು .
ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತ ಯುವತಿ ಪೂಜಾ ಆಚಾರ್ಯ, ತಾಯಿ ನಮಿತಾ ಆಚಾರ್ಯ ಸಂಘದ ಸದಸ್ಯರಾದ ರಾಜೇಶ್ ಆಚಾರ್ಯ, ಲೋಕೇಶ್ ಆಚಾರ್ಯ ಉಪಸ್ಥಿತರಿದ್ದರು.


