ಮಂಗಳೂರು : ನಗರದಿಂದ ಕೇದಾರನಾಥಕ್ಕೆ ಇಬ್ಬರು ಯುವಕರು ಸಾಹಸಮಯ 3,000 ಕಿ.ಮೀ ಸೈಕಲ್ ಪ್ರಯಾಣ ಆರಂಭಿಸಿದ್ದಾರೆ. ಮಂಗಳೂರಿನ ನಿವಾಸಿಗಳಾದ ಪುನಿತ್ ಮತ್ತು ರಕ್ಷಿತ್ ಅವರು ಮಂಗಳವಾರ ಅಕ್ಟೋಬರ್ 1 ರಂದು ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು.

ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವುದರ ಜೊತೆಗೆ, ಪರಿಸರ ಸಂರಕ್ಷಣೆ, ಹೆಚ್ಚು ಮರಗಳನ್ನು ನೆಡುವ ಪ್ರಾಮುಖ್ಯತೆ ಮತ್ತು ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇವರಿಬ್ಬರ ಉದ್ದೇಶವಾಗಿದೆ ಎಂದು ತಿಳಿದಿದೆ. ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಶುಭ ಹಾರೈಸಿ ಪಯಣಕ್ಕೆ ಚಾಲನೆ ನೀಡಿದರು.


