Saturday, March 14, 2026
Flats for sale
Homeಸಿನಿಮಾಮಂಗಳೂರು : ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿ ಸ್ಥಳಕ್ಕೆ ಸ್ಯಾಂಡಲ್‌ವುಡ್‌ ನಟ ದುನಿಯಾ...

ಮಂಗಳೂರು : ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿ ಸ್ಥಳಕ್ಕೆ ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್‌ ಭೇಟಿ..!

ಮಂಗಳೂರು : ಕಲ್ಲಾಪುವಿನ ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿ ಸ್ಥಳಕ್ಕೆ ಸ್ಯಾಂಡಲ್‌ವುಡ್‌ ನಟ ದುನಿಯಾ ಖ್ಯಾತಿಯ ವಿಜಯ್‌ ಭೇಟಿ ನೀಡಿದ್ದಾರೆ. ದೈವದ ಸಾನಿಧ್ಯಕ್ಕೆ ಆಗಮಿಸಿದ್ದ ದುನಿಯಾ ವಿಜಿ ಅಜ್ಜನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ತುಳುನಾಡಿನ ದೈವಗಳ ಬಗ್ಗೆ ಸಾಕಷ್ಟು ಜನ ಭಯಭಕ್ತಿ ಬೆಳೆಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಈಗಾಗಲೇ ಸಾಕಷ್ಟು ಜನ ತುಳುನಾಡ ದೈವಗಳ ಸನ್ನಿಧಿಗೆ ಬಂದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಕೂಡಾ ಸಲ್ಲಿಸಿದ ಹಲವಾರು ಉದಾಹರಣೆ ಇದೆ. ಇದಕ್ಕೆ ಸೆಲೆಬ್ರಿಟಿಗಳು ಕೂಡಾ ಹೊರತಾಗಿರದೆ ಹಲವು ಖ್ಯಾತ ಸ್ಯಾಂಡಲ್‌ವುಡ್ ನಟನಟಿಯರು ಜಿಲ್ಲೆಗೆ ಬಂದು ದೈವಗಳಿಗೆ ಕೈ ಮುಗಿದು ಪ್ರಾರ್ಥಿಸಿದ್ದಾರೆ. ಅದರಲ್ಲೂ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಹಲವಾರು ಸೆಲೆಬ್ರೆಟಿಗಳು ಆಗಮಿಸಿ ಅಜ್ಜನ ಆಶೀರ್ವಾದ ಪಡೆದುಕೊಂಡಿದ್ದಾರೆ.

ಈ ಹಿಂದೆ ಹಲವು ಚಿತ್ರನಟನಟಿಯರು ಭೇಟಿನೀಡಿದ್ದು ಇದೀಗ ದುನಿಯಾ ವಿಜಿ ಕೂಡಾ ಕೊರಗಜ್ಜನ ಆದಿ ಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವ ಮೂಲಕ ತುಳುನಾಡಿನ ದೈವದ ಬಗ್ಗೆ ಜಿಲ್ಲೆಯ ಹೊರಗಿನವರಿಗೆ ಇರುವ ಭಯಭಕ್ತಿಯನ್ನು ತೋರಿಸಿಕೊಟ್ಟಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular