Saturday, April 19, 2025
Flats for sale
Homeಜಿಲ್ಲೆಮಂಗಳೂರು : ಬಿಹಾರ ಮೂಲದ ಯುವತಿ ಅರೆ ಪ್ರಜ್ಞಾವಸ್ಥೆಯಲ್ಲಿ ಪತ್ತೆ,ಗ್ಯಾಂಗ್ ರೇಪ್ ಶಂಕೆ…!

ಮಂಗಳೂರು : ಬಿಹಾರ ಮೂಲದ ಯುವತಿ ಅರೆ ಪ್ರಜ್ಞಾವಸ್ಥೆಯಲ್ಲಿ ಪತ್ತೆ,ಗ್ಯಾಂಗ್ ರೇಪ್ ಶಂಕೆ…!

ಮಂಗಳೂರು ; ಬಿಹಾರ ಮೂಲದ ಯುವತಿಯೊಬ್ಬಳು ಅರೆ ಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದು, ಇದೊಂದು ಸಾಮೂಹಿಕ ಅತ್ಯಾಚಾರ ಅಗಿರಬಹುದೆಂದು ಸಾರ್ವಜನಿಕರು ಅನುಮಾನಿಸಿದ್ದಾರೆ.

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತ ಯುವತಿಯನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಿನ್ನೆ ತಡರಾತ್ರಿ ಸ್ಥಳೀಯ ಮನೆಬಾಗಿಲಿಗೆ ಬಂದು ಯುವತಿ ನೀರು ಕೇಳಿ ಅಲ್ಲೇ ಪ್ರಜ್ಷೆ ತಪ್ಪಿ ಬಿದ್ದಿದ್ದಾಳೆ. ತಕ್ಷಣ ಮನೆಯವರು 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಪೊಲೀಸರು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಯುವತಿ ನಶೇಯಲ್ಲಿದ್ದು , ಆಕೆಯ ಮೈ ಮೇಲೆ ಗಾಯದ ಗುರುತುಗಳು ಕಾಣಿಸಿದ್ದು ಇದೊಂದು ಅತ್ಯಾಚಾರ ಆಗಿರುವ ಅನುಮಾನ ವ್ಯಕ್ತವಾಗಿದೆ.

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಜನ ಪ್ರದೇಶವೊಂದರಲ್ಲಿ ಇರುವ ಮನೆಗೆ ನಿತ್ಯ ಗಾಂಜಾ ವ್ಯಸನಿಗಳು ಬರುತ್ತಿದ್ದು ನಿನ್ನೆಯೂ ನಾಲ್ವರು ಅಲ್ಲಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಯುವತಿ ಮನೆಯೊಂದರ ಬಾಗಿಲು ತಟ್ಟುತ್ತಿದ್ದಂತೆ ಯುವಕರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು ಚಿಕಿತ್ಸೆಯಲ್ಲಿ ಪಡೆಯುತ್ತಿರುವ ಯುವತಿಯನ್ನು ಪೊಲೀಸರು ವಿಚಾರಣೆ ನಡೆಸಬೇಕಾಗಿದೆ . ಆದರೆ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿರುವಾಕೆ ಈವರೆಗೆ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ. ಸ್ಥಳಕ್ಕೆ ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್ ಭೇಟಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular