Wednesday, October 22, 2025
Flats for sale
Homeಜಿಲ್ಲೆಮಂಗಳೂರು : ಬಹುಕೋಟಿ ವಂಚನೆ ಪ್ರಕರಣ : ರೋಹನ್ ಸಲ್ಡಾನನಿಂದ 6,72,947 ರೂ. ವಿದೇಶಿ ಮದ್ಯ,...

ಮಂಗಳೂರು : ಬಹುಕೋಟಿ ವಂಚನೆ ಪ್ರಕರಣ : ರೋಹನ್ ಸಲ್ಡಾನನಿಂದ 6,72,947 ರೂ. ವಿದೇಶಿ ಮದ್ಯ, 2.75 ಕೋಟಿ ಮೌಲ್ಯದ ವಜ್ರಾಭರಣ ವಶಕ್ಕೆ…!

ಮಂಗಳೂರು : ಮಂಗಳೂರಿನ ಜೆಪ್ಪಿನಮೊಗರಿನಲ್ಲಿ ಮಂಗಳೂರು ಎಸಿಪಿ ರವೀಶ್ ನಾಯಕ್ ನೇತೃತ್ವದಲ್ಲಿ ನಡೆದ ಬೃಹತ್ ಕಾರ್ಯಾಚರಣೆಯಲ್ಲಿ ಆರೋಪಿ ರೋಹನ್ ಸಲ್ಡಾನನನ್ನು ಬಂಧಿಸಿದ್ದಾರೆ 100,200,500 ಕೋಟಿ ಸಾಲ ಕೊಡಿಸುವ ಆಮಿಷ ಮಾಡುತ್ತಿದ್ದು ಬಲೆಗೆ ಬಿದ್ದವರಿಂದ 50 ಲಕ್ಷದಿಂದ ನಾಲ್ಕು ಕೋಟಿ ವರೆಗೆ ವಂಚಿಸಿದ್ದಾನೆ.

ಆರಂಭದಲ್ಲಿ ಕಮಿಷನ್, ಸ್ಟ್ಯಾಂಪ್ ಡ್ಯೂಟಿ ಹೇಳಿ ನಾಲ್ಕರಿಂದ ಐದು ಕೋಟಿ ವರೆಗೂ ಒಳಗೆ ಒಡೆಯುತ್ತಿದ್ದು ಬಳಿಕ ಯಾರಿಗೂ ಕಾಣದಂತೆ ಬೇರೆಡೆ ನಿಗೂಢವಾಗಿ ಮಾಯವಾಗುತ್ತಿದ್ದನು.ಈತನ 3 ತಿಂಗಳ ವ್ಯವಹಾರ ಒಂದು ಖಾತೆಯಲ್ಲಿ 40 ಕೋಟಿ ರೂಪಾಯಿ. ಈತನ ಮನೆಯಲ್ಲಿ ಐಷಾರಾಮಿ ವಸ್ತುಗಳು ಲಕ್ಷಾಂತರ ಮೌಲ್ಯದ ಮದ್ಯದ ಬಾಟಲಿಗಳು, ಮನೆಯಲ್ಲಿ hide out ಗಳು ಅಲ್ಲಲ್ಲಲ್ಲಿ ಸಿಸಿ ಕ್ಯಾಮೆರಾಗಳು ಅಳವಡಿಸಿದ್ದನು.

ಈತನ ಹೆಸರು ರೋಶನ್ ಸಲ್ಡಾನ, ಪ್ರಾಯ 43 ವರ್ಷ, ತಂದೆ: ಲೇ. ಜಾನ್ ಸಲ್ಡಾನ, ವಿಳಾಸ: ಬೊಲ್ಲಗುಡ್ಡ,ಬಜಾಲ್,ಕಂಕನಾಡಿ ,ಮಂಗಳೂರು ನಗರ ಈತನ ವಿರುದ್ಧ ವಿರುದ್ಧ ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 22/2025 ಕಲಂ: 316(2), 316(5) 318(2), 318(3) ಜೊತೆಗೆ 3(5) ಭಾರತೀಯ ನ್ಯಾಯ ಸಂಹಿತೆ ಹಾಗೂ ಅಪರಾಧ ಕ್ರಮಾಂಕ:30/2025 ಕಲಂ:316(2), 316(5), 318(2), 318 (3), 61(2) ಜೊತೆಗೆ 3(5) ಭಾರತೀಯ ನ್ಯಾಯ ಸಂಹಿತೆಯಂತೆ ವಂಚನೆ ಪ್ರಕರಣಗಳು ದಾಖಲಾಗಿದೆ.

ಪೊಲೀಸರು ಜೂಲೈ 17 ರಂದು ಆತನ ಮನೆಯಲ್ಲಿ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿಕೊಂಡು ಬೇಟೆಯಾಡುತ್ತಿರುವಾಗ ಆರೋಪಿ ಮನೆಯ ಅಡಗುತಾಣದಲ್ಲಿ ಪತ್ತೆಯಾಗಿದ್ದಾನೆ. ಬಳಿಕ ಪೊಲೀಸರು ಪರಿಶೀಲಿಸಿದಾಗ ಆರೋಪಿತನು ತನ್ನ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ರೂ 6,72,947/- ಮೌಲ್ಯದ ದೇಶಿ ಮತ್ತು ವಿದೇಶಿ ಮದ್ಯ ದೊರೆತಿದೆ. ಬಳಿಕ ಪೊಲೀಸರು ಮದ್ಯವನ್ನು ಸ್ವಾಧೀನಪಡಿಸಿಕೊಂಡು ಸೆನ್ ಕ್ರೈಂ ಪೊಲೀಸ್ ಠಾಣಾ ಅ.ಕ್ರ. 39/2025 ಅಬಕಾರಿ ಕಾಯ್ದೆಯಂತೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿಯ ಮನೆಯಿಂದ ದಾಖಲಾತಿಗಳನ್ನು, ಖಾಲಿ ಚೆಕ್ ಗಳನ್ನು ಹಾಗೂ ಸುಮಾರು 667 ಗ್ರಾಂ ಚಿನ್ನಭಾರಣಗಳು ಮತ್ತು ಅಂದಾಜು 2.75 ಕೋಟಿ ಮೌಲ್ಯದ ವಜ್ರದ ಉಂಗುರವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ರೋಶನ್ ಸಲ್ಡಾನ ಬಲು ಖತರ್ನಾಕ್ ಆಗಿದ್ದು ಈತನ ವಿರುದ್ದ ಚಿತ್ರದುರ್ಗ, ಮುಂಬೈ ಸೇರಿದಂತೆ ವಿವಿಧೆಡೆ ವಂಚನೆ ಪ್ರಕರಣಗಳು ದಾಖಲಾಗಿರುತ್ತವೆ. ಈ ಆರೋಪಿ ಇತರರೊಂದಿಗೆ ಸೇರಿ ಅವಶ್ಯಕತೆ ಇರುವ ಉದ್ದಿಮೆದಾರರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದು, ಕಳೆದ 03 ತಿಂಗಳಲ್ಲಿ ಆರೋಪಿತನ ವ್ಯವಹಾರ ಪರಿಶೀಲಿಸಿದಾಗ ಇತನು ಗೋವಾ, ಬೆಂಗಳೂರು, ಪುಣೆ, ವಿಜಯಪುರ, ತುಮಕೂರು, ಕಲ್ಕತ್ತಾ, ಸಾಂಗ್ಲಿ, ಲಕ್ನೋ ,ಬಾಗಲಕೋಟೆ ಇತ್ಯಾದಿ ಕಡೆಗಳಲ್ಲಿ ಉದ್ದಿಮೆದಾರರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಸುಮಾರು 32 ಕೋಟಿ ರೂಗಳನ್ನು ಆರೋಪಿ ಮತ್ತು ಇತರರು ಪಡೆದುಕೊಂಡಿರುವುದು ಕಂಡುಬಂದಿದೆ. ಈತನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆಂದು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular