ಮಂಗಳೂರು : ಏಪ್ರಿಲ್ 14, ಭಾನುವಾರ ಮಂಗಳೂರಿನಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ಸಮಯವನ್ನು ನಾಳೆ ಸಂಜೆ 7.45ಕ್ಕೆ ಬದಲಾಯಿಸಲಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್ ತಿಳಿಸಿದ್ದಾರೆ.
ರೋಡ್ ಶೋ 45 ನಿಮಿಷ ತಡವಾಗಿ ಆರಂಭವಾಗಲಿದ್ದು, ಸಂಜೆ 7ರ ಬದಲು 7.45ಕ್ಕೆ ಆರಂಭವಾಗಲಿದೆ. ರೋಡ್ ಶೋ ಆರಂಭಿಸುವ ಮುನ್ನ ನಾರಾಯಣ ಗುರು ವೃತ್ತದಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಪ್ರಧಾನಿ ಮೋದಿ ಮಾಲಾರ್ಪಣೆ ಮಾಡಲಿದ್ದಾರೆ.
ರಾತ್ರಿ 8.30ಕ್ಕೆ ರೋಡ್ ಶೋ ಮುಕ್ತಾಯವಾಗಲಿದೆ. ಸಾರ್ವಜನಿಕರು ರಸ್ತೆಯ ಎರಡೂ ಬದಿಯಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಸಂಜೆ 6.45 ರಿಂದ 7 ರವರೆಗೆ ಹಾಜರಿರಬೇಕು ಎಂದು ಹೇಳಿದ್ದಾರೆ .


