Saturday, January 31, 2026
Flats for sale
Homeಜಿಲ್ಲೆಮಂಗಳೂರು : ಪೋಲಿಸ್ ಲೇನ್ ನ ವಸತಿ ಗ್ರಹಕ್ಕೆ ನುಗ್ಗಿದ ಕಳ್ಳರು,ಬೆಲೆಬಾಳುವ ವಸ್ತುಗಳ ಕಳ್ಳತನ.

ಮಂಗಳೂರು : ಪೋಲಿಸ್ ಲೇನ್ ನ ವಸತಿ ಗ್ರಹಕ್ಕೆ ನುಗ್ಗಿದ ಕಳ್ಳರು,ಬೆಲೆಬಾಳುವ ವಸ್ತುಗಳ ಕಳ್ಳತನ.

ಮಂಗಳೂರು : ಮಂಗಳೂರಿನ ಪುರಭವನದ ಮುಂದಿನ ಭಾಗದಲ್ಲಿರುವ ಪೋಲಿಸ್ ವಸತಿ ಗ್ರಹಕ್ಕೆ ಕಳ್ಳರು ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಕದ್ದು ಕೊಂಡು ಹೋಗಿರುವ ಘಟನೆ ವರದಿಯಾಗಿದೆ.

police line A1 block ನಲ್ಲಿರುವ ದ.ಕ ಜಿಲ್ಲೆಯ ಕಂಟ್ರೋಲ್ ರೂಮಲ್ಲಿ ಕೆಲಸ ಮಾಡುತ್ತಿರುವ ಸಮರ್ಥ್ ಎಂಬವರು ರಜೆ ಮೇಲೆ ಊರಿಗೆ ತೆರಳಿದ್ದು ನೆರೆಹೊರೆಯವರು ಹೋದ ಕ್ಷಣದಲ್ಲಿ ಕಳ್ಳರು ಅವರ ಮನೆಯ ಬಾಗಿಲು ಹೊಡೆದು ಒಳ ನುಗ್ಗಿ ಅವರ ಮನೆಯ ಗೋಡ್ರೇಜ್ ಚೆಲ್ಲಾಪಿಲ್ಲಿ ಮಾಡಿ ಹೋಗಿದ್ದು ಹಲವು ಬೆಲೆಬಾಳುವ ವಸ್ತುಗಳನ್ನು ಕದ್ದುಕೊಂಡೊಗ್ಗಿದ್ದಾರೆ.

ಈ ಬಗ್ಗೆ ದೂರುದಾರರಿಗೆ ಕರೆ ಮಾಡಿ ಪೋಲಿಸರು ಸ್ಥಳಕ್ಕೆ ಹೋಗಿ ನೋಡಿದ್ದು ಸ್ಥಳದಲ್ಲಿ ಯಾವುದೇ ತರಹದ ಹಾನಿ ಉಂಟಾಗಿದು ಕಂಡು ಬಂದಿಲ್ಲ. ಸ್ಥಳದಲ್ಲಿ ದಕ್ಷಿಣ ಪೊಲೀಸ್ ಠಾಣೆಯ ಪಿಎಸ್ಐ 1 ಮತ್ತು ಕ್ರೈಂ ಸಿಬ್ಬಂದಿಗಳು ಹಾಜರಿದ್ದು ಮುಂದಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಪೋಲಿಸ್ ಲೈನ್ ನ ಮೂರು ಗೇಟ್ ಗಳು ತೆರೆದಿದ್ದು ಯಾವುದೇ ಬಿಗಿಯಾದ ಭದ್ರತೆ ಇಲ್ಲದ ಕಾರಣ ಕೇರಳ ರಾಜ್ಯದ ವ್ಯಕ್ತಿಗಳು ನಿರಂತರ ಬಂದು ಹೋಗುತ್ತಿರುವುದು ಕಂಡುಬಂದಿದೆ.ಆದರೆ ಈ ಬಗ್ಗೆ ಇಲಾಖೆ ಹೆಚ್ಚೆತ್ತು ಭದ್ರತೆಯ ಬಗ್ಗೆ ಗಮನ ವಹಿಸಿದರೆ ಮುಂದೊಂದು ದಿನ ನಡೆಯುವ ಅನಾಹುತ ತಪ್ಪಿಸಬಹುದೆಂದು ಸ್ಥಳೀಯ ನಿವಾಸಿಗಳ ಮಾತು.

RELATED ARTICLES

LEAVE A REPLY

Please enter your comment!
Please enter your name here

Most Popular