Thursday, March 12, 2026
Flats for sale
Homeಜಿಲ್ಲೆಮಂಗಳೂರು : ಪಾವೂರು ಉಳಿಯ ನೇತ್ರಾವತಿ ನದಿ ದಂಡೆಯ 2 ಕಿಮೀ ವ್ಯಾಪ್ತಿಯವರೆಗೆ ಮರಳುಗಾರಿಕೆ ನಿಷೇದ...

ಮಂಗಳೂರು : ಪಾವೂರು ಉಳಿಯ ನೇತ್ರಾವತಿ ನದಿ ದಂಡೆಯ 2 ಕಿಮೀ ವ್ಯಾಪ್ತಿಯವರೆಗೆ ಮರಳುಗಾರಿಕೆ ನಿಷೇದ : ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ್‌ ಆದೇಶ.

ಮಂಗಳೂರು : ಅಕ್ರಮ ಮರಳು ಗಣಿಗಾರಿಕೆ ವಿರುದ್ಧಧ್ವನಿ ಎತ್ತಿದ ಹಿನ್ನೆಲೆ ನಗರದ ಹೊರವಲಯದ ಅಡ್ಯಾರ್ ಬಳಿ ಮರಳು ದಂಧೆಕೋರರ ಗುಂಪೊಂದು ಮಂಗಳೂರು ಪ್ರದೇಶ ಕ್ಯಾಥೋಲಿಕ್ ಸಭಾದ ಅಧ್ಯಕ್ಷ ಅಲ್ವಿನ್ ಜೆರೋಮ್ ಡಿಸೋಜಾ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಇದೀಗ ನಗರದ ಹೊರವಲಯದಲ್ಲಿರುವ ಪಾವೂರು ಉಳಿಯ ದ್ವೀಪದ 2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮರಳುಗಾರಿಕೆಯನ್ನು ನಿಷೇಧಿಸಿ ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ್‌ ಆದೇಶ ಹೊರಡಿಸಿದ್ದಾರೆ.

ಅಕ್ರಮ ಮರಳುಗಾರಿಕೆಯು ಪಾವೂರು ಉಳಿಯ ದ್ವೀಪದ ನಿವಾಸಿಗಳು, ಮೀನು ಮತ್ತು ಪ್ರಾಣಿ ಮತ್ತು ದ್ವೀಪದ ಪರಿಸರದ ಮೇಲೆ ಪರಿಣಾಮ ಬೀರುತ್ತಿದ್ದು, ಇದನ್ನು ತಡೆಯಲು ಎಲ್ಲಾ ರೀತಿಯ ಮರಳುಗಾರಿಕೆಯನ್ನು ನಿಷೇಧಿಸಲಾಗಿದೆ ಹಾಗೂ ಈ ವ್ಯಾಪ್ತಿಯಲ್ಲಿ ಸಂಚಾರ ದೋಣಿಗಳ ಹೊರತಾಗಿ ಇತರೆ ಎಲ್ಲಾ ದೋಣಿ ಅಥವಾ ಯಂತ್ರಗಳ ಮೂಲಕ ಮರಳು ಉತ್ಪನ್ನದ ಸಾಗಣೆ, ದಕ್ಕೆಗಳಲ್ಲಿ ಅನಧಿಕೃತ ಮರಳು ಶೇಖರಣೆ ಮತ್ತು ಮರಳು ಹಂಚುವಂತಿಲ್ಲ ಎಂದು ಆದೇಶದಲ್ಲಿ ಹೊರಡಿಸಿದ್ದಾರೆ.

80 ಎಕರೆ ಪ್ರದೇಶದಲ್ಲಿದ್ದ ದ್ವೀಪವು ಮರಳುಗಾರಿಕೆಯಿಂದಾಗಿ ಕೇವಲ 40 ಎಕರೆಗೆ ಕುಸಿದಿದೆ ಎಂದು ಆರೋಪಿಸಿದ್ದರು ಆದರಿಂದ ಈ ವ್ಯಾಪ್ತಿಯಲ್ಲಿ ಸಂಚಾರ ದೋಣಿಗಳ ಹೊರತಾಗಿ ಇತರೆ ಎಲ್ಲಾ ದೋಣಿ ಅಥವಾ ಯಂತ್ರಗಳ ಮೂಲಕ ಮರಳು ಉತ್ಪನ್ನದ ಸಾಗಣೆ, ದಕ್ಕೆಗಳಲ್ಲಿ ಅನಧಿಕೃತ ಮರಳು ಶೇಖರಣೆ ಮತ್ತು ಮರಳು ಹಂಚುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅಡ್ಯಾರು ಗ್ರಾಮದ ವಳಚ್ಚಿಲ್‌ ದಕ್ಕೆ, ಅಡ್ಯಾರು ಗ್ರಾಮ ಸಹ್ಯಾದ್ರಿ ಇಂಜಿನಿಯರಿಂಗ್‌ ಕಾಲೇಜಿನ ಹಿಂಭಾಗದ ದಕ್ಕೆ, ನದಿಯ, ದ್ವೀಪದ ಎಡಭಾಗದಲ್ಲಿರುವ ಪಾವೂರು ದಕ್ಕೆ ಈ ನಿಷೇಧಿತ ಪ್ರದೇಶದ ವ್ಯಾಪ್ತಿಗೆ ಸೇರಿದ್ದು, ಆದೇಶ ಉಲ್ಲಂಘಿಸಿ ಅಕ್ರಮ ಮರಳು ತೆಗೆಯುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular